* ಸ್ಪಷ್ಟತೆ ಹಾಗೂ ವಿವರ ಕೋರಿರುವ ಇಲಾಖೆ * ಪರಿಣಿತರ ಸಭೆಗೂ ಸಲಹೆ

ಮಡಿಕೇರಿ, ಅ. ೧೦: ೨೦೧೯-೨೦ನೇ ಸಾಲಿನ ಆಯವ್ಯಯದಲ್ಲಿ ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಎಂದು ಪ್ರಕಟಿಸಲಾಗಿದ್ದ ರೂ. ೧೦ ಕೋಟಿ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಇದಕ್ಕೆ ಸಂಬAಧಿಸಿದAತೆ ಹಲವು ಸ್ಪಷ್ಟತೆಗಳು ಬೇಕಾಗಿದೆ ಎಂಬ ಕಾರಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೀಗ ಈ ಕುರಿತಾಗಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವುದರೊಂದಿಗೆ ಅಗತ್ಯವೆನಿಸಿದಲ್ಲಿ ಮೈಸೂರು ವಿಭಾಗದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಒಂದು ಸಭೆ ನಡೆಸಲು ಸೂಚನೆ ನೀಡಿದೆ. ಕೊಡವ ಸಮಾಜ ಅಂದರೆ ಕೊಡವ ಜನಾಂಗವೇ ಅಥವಾ ಸಮುದಾಯವೇ ಅಥವಾ ಭಾಷಿಕರೇ ಅಥವಾ ಸಾಹಿತ್ಯ - ಸಂಸ್ಕೃತಿಯನ್ನು ಒಳಗೊಂಡ ಇತಿಹಾಸವೇ ಮುಂತಾದ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಈ ವಿಚಾರದ ಬಗ್ಗೆ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರನ್ನು ಒಳಗೊಂಡAತೆ ವಿವಿಧ ಕ್ಷೇತ್ರದ ಕೊಡವ ತಜ್ಞರು ಮತ್ತು ಪರಿಣಿತರೊಂದಿಗೆ ಚರ್ಚಿಸಿ ರಚನಾತ್ಮಕ ಯೋಜನೆÀಗಳ ಮೂಲಕ ಒಂದು ನಿರ್ಧಾರಕ್ಕೆ ಬಂದು ಅನುದಾನದ ಸದ್ಭಳಕೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರು (ಮೈಸೂರು ವಿಭಾಗ) ಕೊಡವ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್‌ಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸದ್ಯದಲ್ಲಿ ಸರಕಾರ ಹಾಗೂ ಸಂಬAಧಿಸಿದವರ ಬಳಿ ನಿಯೋಗ ತೆರಳಿ ಚರ್ಚಿಸಲಾಗುವುದು. ಈ ಮೂಲಕ ಘೋಷಿತ ಅನುದಾನ ಬಿಡುಗಡೆಗೆ ಪ್ರಯತ್ನ ನಡೆಸಲಾಗುವುದು ಎಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಎಂ.ಟಿ. ನಾಣಯ್ಯ ತಿಳಿಸಿದ್ದಾರೆ. ಆರಂಭದಲ್ಲಿ ಈ ಅನುದಾನ ಬಾಳುಗೋಡುವಿನ ಕೊಡವ ಸಾಂಸ್ಕೃತಿಕ ಮತ್ತು ಕ್ರೀಡಾ ಸಮುಚ್ಚಯದ ಅಭಿವೃದ್ಧಿಗೆ ಎಂದು ಹೇಳಲಾಗಿತ್ತು.