ಶನಿವಾರಸಂತೆ, ಅ. ೧೧: ಸಮೀಪದ ಬ್ಯಾಡಗೊಟ್ಟ ಗ್ರಾಮದ ಸಾರ್ವಜನಿಕ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಗ್ರಾಮದ ಎಚ್.ಪಿ. ಲೋಕೇಶ್ ಅವರ ಪುತ್ರ ಮೋನಿಕ್ (೧೮) ಎಂದು ಗುರುತಿಸಲಾಗಿದೆ. ಕೊಡ್ಲಿಪೇಟೆ ಜೂನಿಯರ್ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಮೋನಿಕ್ ೨ ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆ ಬಿಟ್ಟು ಹೋಗುತ್ತಿದ್ದು, ಹುಡುಕಿ ಕರೆತರಲಾಗುತ್ತಿತ್ತು. ಮೌನಿಯಾಗಿರುತ್ತಿದ್ದ ಮಗ ಜೀವನದಲ್ಲಿ ಜಿಗುಪ್ಸೆಗೊಂಡಿದ್ದ. ಸೋಮವಾರ ಬೆಳಿಗ್ಗೆ ದನಗಳಿಗೆ ಮೇವು ತರಲು ಗದ್ದೆ ಹತ್ತಿರ ಹೋಗಿದ್ದವನು ಬಹಳ ಸಮಯವಾದರೂ ಮನೆಗೆ ಹಿಂತಿರುಗಲಿಲ್ಲ. ಹುಡುಕಿ ಹೋದಾಗ ಸಾರ್ವಜನಿಕ ಬಾವಿಯ ಬಳಿ ಹಗ್ಗ ಹಾಗೂ ಕುಡುಗೋಲು ಕಾಣಿಸಿತು. ಬಾವಿಯೊಳಗೆ ನೋಡಿದಾಗ ಮಗನ ಮೃತ ದೇಹ ಗೋಚರಿಸಿದೆ ಎಂದು ಮೃತ ಮೋನಿಕ್ ತಂದೆ ಲೋಕೇಶ್ ದೂರಿನಲ್ಲಿ ತಿಳಿಸಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೆಡ್ ಕಾನ್ಸ್ಟೇಬಲ್ ರವಿಚಂದ್ರ ಪ್ರಕರಣ ದಾಖಲಿಸಿದ್ದಾರೆ.