ನಾಪೋಕ್ಲು, ಅ. ೧೧: ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ (ಕಬ್ಬಿಣಕಾಡು) ಯವಕ ಪಾಡಿ ಗ್ರಾಮದ ವಾಸಿ ಯಂ. ಸುಬ್ಬಯ್ಯ ಅವರ ಪುತ್ರ ತೀರ್ಥಕುಮಾರ್ ಯಂ.ಎಸ್. (೧೯) ಇಂದು ಸಂಜೆ ತಮ್ಮ ಮನೆಯ ಸಮೀಪದ ಹೊಳೆಯ ಬದಿಯಲ್ಲಿ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಸಾವಿಗೆ ಅನಾರೋಗ್ಯ ಕಾರಣ ಎಂದು ತಿಳಿದು ಬಂದಿದೆ. ಮೃತ ತೀರ್ಥಕುಮಾರ್ ನಾಪೋಕ್ಲು ಪದವಿ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಯಾಗಿರುತ್ತಾನೆ. ಈ ಸಂಬAಧ ತಂದೆ ನೀಡಿದ ದೂರಿನ್ವಯ ನಾಪೋಕ್ಲು ಪೊಲೀಸ್ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.