ಮಡಿಕೇರಿ, ಅ. ೧೧: ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾ. ೩೧ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಬ್ರಾಹ್ಮಣ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ೨೦೧೮-೧೯, ೨೦೧೯-೨೦ ಮತ್ತು ೨೦೨೦-೨೧ರ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಎಲ್.ಸಿ., ಐ.ಸಿ.ಎಸ್.ಸಿ., ಸಿ.ಬಿ.ಎಸ್.ಇ. ಮತ್ತು ದ್ವಿತೀಯ ಪಿಯುಸಿಯಲ್ಲಿ ೮೫%, ಪದವಿ, ಸ್ನಾತಕೋತ್ತರ, ಡಿಪ್ಲೋಮೊ, ಇಂಜಿನಿಯರಿAಗ್ ಮತ್ತು ಮೆಡಿಕಲ್‌ನಲ್ಲಿ ೭೫% ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಜಿಲ್ಲೆಯ ವಿದ್ಯಾರ್ಥಿ - ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ಏರ್ಪಡಿಸಲಾಗಿದೆ. ಅರ್ಹರು ತಮ್ಮ ಸ್ವ-ವಿವರ, ಅಂಕಪಟ್ಟಿಯ ಪ್ರತಿಯನ್ನು ಸಂಘದ ಕಾರ್ಯಾಲಯಕ್ಕೆ ತಾ. ೧೫ರ ಒಳಗಾಗಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ಸಂಘ ತಿಳಿಸಿದೆ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ: ೯೪೪೯೭೬೧೨೯೬- ಸದಾನಂದ ಪುರೋಹಿತ್, ೮೭೬೨೧೧೦೫೫೦- ಯೋಗೀಶ ಪಡಂತಾಯ, ೯೮೮೦೦೯೬೬೨೧- ರಘು ಕೆದಿಲಾಯ.