ಕೂಡಿಗೆ, ಅ. ೧೧: ಇಂದಿನ ಕೃಷಿಯಲ್ಲಿ ಹಳೆ ಪದ್ಧತಿ ಮಾತ್ರ ಬಳಸದೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಗುಣಮಟ್ಟದ ಬೀಜದೊಂದಿಗೆ, ಸಮತೋಲನ ಪೋಷಕಾಂಶಗಳ ಬಳಕೆ ಮಾಡಿಕೊಳ್ಳಬೇಕು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲ ಯದ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ವಿಭಾಗದ ಮುಖ್ಯಸ್ಥ ಡಾ. ಜಿ.ಎಂ. ದೇವಗಿರಿ ಸಲಹೆ ನೀಡಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಶಿವಮೊಗ್ಗ ಮತ್ತು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೃಷಿಯಲ್ಲಿ ಹೆಚ್ಚು ಲಾಭ ಪಡೆಯಲು ರೈತರು, ಕೃಷಿಯೊಂದಿಗೆ ಉಪ ಕಸುಬು ಅಳವಡಿಸಿಕೊಳ್ಳಬೇಕು. ಬೇಸಾಯದಲ್ಲಿ ಕಂಡುಬರುವ ಸಮಸ್ಯೆಗಳಿಗೆ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.
ಸೋಮವಾರ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಯಾದವ್ ಬಾಬು ಮಾತನಾಡಿ; ರೈತರು ಭೂಮಿಯ ಫಲವತ್ತತೆಯನ್ನು ಕಾಪಾಡ ಬೇಕು. ಮುಂದಿನ ತಲೆಮಾರಿಗೆ ಉಳಿಸಿ ಹೋಗಬೇಕು, ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪೊನ್ನAಪೇಟೆ ಕೃಷಿ ಕೇಂದ್ರದ ವಿಜ್ಞಾನಿ ಡಾ. ವಿರೇಂದ್ರ ಕುಮಾರ್ ಮಾತನಾಡಿ, ಇಂದಿನ ವೈಜ್ಞಾನಿಕ ರಾಸಾಯನಿಕ ಗೊಬ್ಬರದ ಹಾವಳಿ ಯಿಂದ ರೈತರಿಗೆ ಬಹಳ ನಷ್ಟವಾಗು ತ್ತಿದ್ದು, ರಾಸಾಯನಿಕ ಗೊಬ್ಬರವನ್ನು ಕಡಿಮೆಗೊಳಿಸಬೇಕು ಮತ್ತು ರೋಗ ಬಾಧೆಯನ್ನು ತಡೆಗಟ್ಟಲು ಮಾಹಿತಿ ಯನ್ನು ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭ ಹಾರಂಗಿ ಸಹಾಯಕ ತೋಟಗಾರಿಕೆ ನಿರ್ದೇಶಕ ವರದರಾಜ,ಕೂಡಿಗೆ ಜಿಲ್ಲಾ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಎ.ಸ್ವರ್ಣ, ಕುಶಾಲನಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರುಣ, ಕೂಡಿಗೆ ಕೃಷಿ ಕ್ಷೇತ್ರದ ಸಹಾಯಕ ನಿರ್ದೇಶಕ ಮಾಧವರಾವ್, ಸಂಪನ್ಮೂಲ ವ್ಯಕ್ತಿಗಳಾದ ಸಹಾಯಕ ಪ್ರಾಧ್ಯಾಪಕ ಡಾ. ಎಂ. ಜಡೇಗೌಡ, ಮಡಿಕೇರಿ ಕ್ಷೇತ್ರ ಅಧೀಕ್ಷಕ ಡಾ. ಬಸವಲಿಂಗಯ್ಯ, ಸಹಾಯಕ ಪ್ರಾಧ್ಯಾಪಕ ಡಾ. ವಿ. ಮಹೇಶ್ವರಪ್ಪ, ಎಸ್. ಗಣೇಶ್ ಪ್ರಸಾದ್, ನಿವೃತ್ತ ಪಶುವೈದ್ಯಾಧಿಕಾರಿ ಡಾ. ಮೊಟ್ಟಯ್ಯ, ಸಾವಯವ ಕೃಷಿಕ ಕಪನಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಎಂ. ಶೋಬಿತ್ ಮೂರ್ತಿ ಸ್ವಾಗತಿಸಿದರು. ಕೆ.ವಿ. ಸಂಕೇತ್ ಹಾಗೂ ಹೇಮಲತಾ ನಿರೂಪಿಸಿದರು. ರೇವಣ್ಣ ವಂದಿಸಿದರು.