ಮಡಿಕೇರಿ, ಅ. ೯: ಜಾರ್ಖಂಡ್‌ನಲ್ಲಿ ನಡೆಯಲಿರುವ ರಾಷ್ಟಿçÃಯ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ರಾಜ್ಯ ತಂಡದ ಆಟಗಾರ್ತಿಯಾಗಿ ಜಿಲ್ಲೆಯ ನಿಟ್ಟೂರು ಕಾರ್ಮಾಡುವಿನ ಪೊನ್ನಿಮಾಡ ಶಿಲ್ಪ ಆಯ್ಕೆಯಾಗಿದ್ದಾರೆ. ಈಕೆ ರಮೇಶ್ ತಿಮ್ಮಯ್ಯ ಅವರ ಪುತ್ರಿ.

ಮರದ ನಾಟಾಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ

ಸುಂಟಿಕೊಪ್ಪ, ಅ. ೯: ಇಲ್ಲಿನ ಗದ್ದೆಹಳ್ಳ ಸಮೀಪ ಸ್ಯಾಂಡಲ್‌ವುಡ್ ತೋಟದಲ್ಲಿ ಅಕ್ರಮವಾಗಿ ಸಾಗಿಸಲು ಕತ್ತರಿಸಿ ಸಂಗ್ರಹಿಸಿಟ್ಟಿದ್ದ ಭಾರೀ ಗಾತ್ರದ ಬೀಟಿ ಮರದ ನಾಟಾಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.

ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸ್ಯಾಂಡಲ್‌ವುಡ್ ತೋಟದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಬೀಟಿ ಮರಗಳನ್ನು ರಾತ್ರಿ ವೇಳೆ ಕಡಿದು ದಿಮ್ಮಿಗಳನ್ನಾಗಿ ಕತ್ತರಿಸಿಟ್ಟಿದ್ದು ತೋಟದ ಕಾವಲುಗಾರ ಬೆಳಗ್ಗಿನ ಜಾವ ತೋಟ ವೀಕ್ಷಣೆಗೆಂದು ತೆರಳಿದ ಸಂದರ್ಭ ಇದನ್ನು ಕಂಡು ತೋಟದ ವ್ಯವಸ್ಥಾಪಕರಿಗೆ ತಿಳಿಸಿದ್ದಾರೆ. ಕೂಡಲೆ ವ್ಯವಸ್ಥಾಪಕ ಶ್ರೀಧರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆಯವರು ಆಗಮಿಸಿ ಮರದ ನಾಟಾಗಳನ್ನು ತಮ್ಮ ವಶಕ್ಕೆ ಪಡೆದು ಸಾಗಿಸಿದ್ದಾರೆ. ಕಳ್ಳರು ಮರ ಸಾಗಿಸುವ ಸಲುವಾಗಿ ಪಕ್ಕದ ಕುಶಾಲಪ್ಪ ಅವರ ಕಾಫಿ ತೋಟದಲ್ಲಿ ರೋಬಸ್ಟ ಕಾಫಿ ಗಿಡಗಳನ್ನು ಕತ್ತರಿಸಿದ್ದಾರೆ. ಈ ಭಾಗದಲ್ಲಿ ಮರಗಳ್ಳರ ಹಾವಳಿ ಹೆಚ್ಚಾಗಿದ್ದು, ಇದಕ್ಕೆ ಅರಣ್ಯ ಇಲಾಖೆ ನಿರ್ಲಕ್ಷö್ಯವೇ ಕಾರಣ ಎಂದು ಈ ಭಾಗದ ಗ್ರಾಮಸ್ಥರು ಆರೋಪಿಸಿದ್ದಾರೆ.