ಮಡಿಕೇರಿ, ಅ. ೯: ಮಡಿಕೇರಿಯ ನೂತನ ಖಾಸಗಿ ಬಸ್ ನಿಲ್ದಾಣದ ಬಸ್ಸುಗಳು ಒಳ ಬರುವ ಪ್ರವೇಶ ದ್ವಾರದ ‘ಛಿoತಿ gಚಿಣe ’ನ ಕೆಲವು ಕಬ್ಬಿಣದ ಸರಳುಗಳು ಇಲ್ಲದೇ ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯ ಕಾಲು ಅದರೊಳಗೆ ಸಿಲುಕಿ ಗಾಯಗೊಂಡಿತ್ತು. ಇದೀಗ ವಾರ್ಡ್ನ ಸದಸ್ಯ ಅರುಣ್ ಶೆಟ್ಟಿ ಅವರ ಮುತುವರ್ಜಿಯಿಂದ ಈ ಸರಳುಗಳ ಮರು ಜೋಡಣೆ ಹಾಗೂ ಗುಂಡಿ ಮುಚ್ಚುವ ಕಾರ್ಯ ನಡೆದಿದೆ.