ಕಾರ್ಯದರ್ಶಿಯಾಗಿ ಕೊಡಗಿನ ಸಮೀರ್

ಸುಂಟಿಕೊಪ್ಪ, ಅ. ೯: ರಾಷ್ಟಿçÃಯ ಸ್ವಯಂಸೇವಕ ರಕ್ತದಾನಿಗಳ ಸಂಘಟನೆಗಳ ಒಕ್ಕೂಟ (ಓಈಗಿಃಆಔ) ಕರ್ನಾಟಕ ಘಟಕದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು, ಕೂರ್ಗ್ ಬ್ಲಡ್ ಫೌಂಡೇಶನ್ ಸಂಸ್ಥಾಪಕ ಕೊಡಗಿನ ಮಡಿಕೇರಿಯ ಸಮೀರ್ ಅವರನ್ನು ರಾಜ್ಯ ಯುವ ಘಟಕದ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.

ಒಕ್ಕೂಟವು ರಕ್ತದಾನ ಕ್ಷೇತ್ರದಲ್ಲಿ ಸ್ವಯಂಪ್ರೇರಿತ ರಕ್ತದಾನವನ್ನು ಉತ್ತೇಜಿಸುವುದು, ಯುವಕರಲ್ಲಿ ರಕ್ತದಾನದ ಬಗ್ಗೆ ಜಾಗೃತಿ ಅಭಿಯಾನಗಳನ್ನು ನಡೆಸುವುದು, ರಕ್ತ ನಿಧಿಗಳು ಸಂಪೂರ್ಣ ಪಾರದರ್ಶಕತೆಯಿಂದ ಕೆಲಸ ಮಾಡುವಂತೆ ಅನೇಕ ಕಾರ್ಯಗಳನ್ನು ಮಾಡುತ್ತಿದೆ. ಇದಕ್ಕಾಗಿ ಭಾರತದಾದ್ಯಂತ ರಕ್ತದಾನ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳನ್ನು ವಿಲೀನಗೊಳಿಸುವ ಮೂಲಕ ಒಕ್ಕೂಟವನ್ನು ರಚಿಸುವ ಕೆಲಸವೂ ನಡೆಯುತ್ತಿದೆ.