ಸೋಮವಾರಪೇಟೆ, ಅ. ೮: ಮಾದಾಪುರ ಸಮೀಪದ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೋನಿಗೆ ನಾಮಫಲಕ ಅಳವಡಿಸುವ ಸಂದರ್ಭ ಉಂಟಾದ ಗೊಂದಲಕ್ಕೆ ಸಂಬAಧಿಸಿದAತೆ, ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸುವAತೆ ಆಗ್ರಹಿಸಿ, ಹಿಂದೂ ಸಮಾಜದ ಮೇಲಾಗುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಮಾದಾಪುರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಹಿಂದೂ ಸಮಾಜದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಮುಖ ಆರೋಪಿಗಳನ್ನು ಬಂಧಿಸದೇ ಪೊಲೀಸ್ ಇಲಾಖೆ ಕಣ್ಣಾಮುಚ್ಚಾಲೆಯಾಟ ಆಡುತ್ತಿದೆ. ಕೌಂಟರ್ ಕೇಸ್ ಕೊಡಲು ಬಂದ ಈರ್ವರನ್ನು ಬಂಧಿಸಿ ಕೈತೊಳೆದುಕೊಂಡಿದೆ. ಘಟನೆಗೆ ಕಾರಣರಾದವರ ಹೆಸರಿ ನೊಂದಿಗೆ ಸಂಪೂರ್ಣ ಮಾಹಿತಿ ನೀಡಿದ್ದರೂ ಸಹ ಈವರೆಗೆ ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾದಾಪುರದ ಶ್ರೀಗಣಪತಿ ದೇವಾಲಯದಿಂದ ಮುಖ್ಯರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ, ಮಹಿಳೆಯರಾದಿಯಾಗಿ ಜಾಗರಣ ವೇದಿಕೆಯ ೫೦೦ಕ್ಕೂ ಅಧಿಕ ಕಾರ್ಯಕರ್ತರು ಪಿಎಫ್‌ಐ, ಕೆಎಫ್‌ಡಿ, ಎಸ್‌ಡಿಪಿಐ ಸಂಘಟನೆಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಹಿಂದೂ ಸಮಾಜವನ್ನು ಕೆಣಕಿದರೆ ತಕ್ಕ ಉತ್ತರ ನೀಡಲಾಗುವುದು. ಜಿಹಾದಿ ಗುಂಪಿನ ಆರ್ಭಟಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕದಿದ್ದರೆ ಜಾಗೃತ ಹಿಂದೂ ಸಮಾಜವೇ ಉತ್ತರ ನೀಡಬೇಕಾದೀತು. ಹಿಂದೂ ಭೂಮಿಯಲ್ಲಿನ ಗ್ರಾಮಗಳಿಗೆ ಯಾವ ಹೆಸರಿಡಬೇಕೆಂದು ಬೇರೆಯವರು ತೀರ್ಮಾನಿಸಬೇಕಿಲ್ಲ. ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವ ಸಂಘಟನೆಗಳಿಗೆ ಕಡಿವಾಣ ಹಾಕಬೇಕು ಎಂಬಿತ್ಯಾದಿ ಘೋಷಣೆಗಳೊಂದಿಗೆ ಮೆರವಣಿಗೆ ತೆರಳಿದ ಕಾರ್ಯಕರ್ತರು, ಹಳೆಯ ಅಯ್ಯಪ್ಪ ದೇವಾಲಯ ಆವರಣದ ಎದುರು ಜಮಾವಣೆಗೊಂಡರು.
ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಜಾಗರಣಾ ವೇದಿಕೆಯ ಕಾರ್ಯಕರ್ತರು ಕೇಸರಿ ಧ್ವಜಗಳನ್ನು ಹಿಡಿದು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಡಿಕೇರಿಯಿಂದ ಆಗಮಿಸುವ ಕಾರ್ಯಕರ್ತರನ್ನು ಹಟ್ಟಿಹೊಳೆ, ಸೋಮವಾರಪೇಟೆ ಹಾಗೂ ಕುಶಾಲನಗರ ದಿಂದ ಆಗಮಿಸಿದ ಕಾರ್ಯಕರ್ತರನ್ನು ಗರಗಂದೂರು ಜಂಕ್ಷನ್ ಬಳಿ ಪೊಲೀಸರು ತಡೆದು, ಕಾರ್ಯಕರ್ತರ ಮಾಹಿತಿ ಪಡೆಯುತ್ತಿದ್ದರು.
ಡಿವೈಎಸ್‌ಪಿ ಶೈಲೇಂದ್ರ ಅವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್‌ಗಳಾದ ಬಿ.ಜಿ. ಮಹೇಶ್, ಪರಶಿವಮೂರ್ತಿ, ಮಡಿಕೇರಿಯ ಎಸ್.ಎಸ್.ರವಿಕಿರಣ್, ಠಾಣಾಧಿಕಾರಿಗಳಾದ ಶ್ರೀಧರ್, ಶಿವಶಂಕರ್, ಪುನೀತ್, ವೆಂಕಟರಮಣ, ಚಂದ್ರಶೇಖರ್ ಸೇರಿದಂತೆ ೨
ಜಿಲ್ಲಾ ಮೀಸಲು ಪಡೆಯ ಸಿಬ್ಬಂದಿಗಳನ್ನು ಒಳಗೊಂಡAತೆ ೧೦೦ ಮಂದಿ ಪೊಲೀಸರು ಬಂದೋಬಸ್ತ್ಗೆ ನಿಯೋಜನೆಗೊಂಡಿದ್ದರು.
(ಮೊದಲ ಪುಟದಿಂದ) ಪ್ರತಿಭಟನಾ ಮೆರವಣಿಗೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಮುಖಂಡರುಗಳಾದ ಮಾದಾಪುರ ಸುನಿಲ್, ಸುಭಾಷ್ ತಿಮ್ಮಯ್ಯ, ಕೆ.ಟಿ. ಉಲ್ಲಾಸ್, ಎಂ.ಬಿ. ಉಮೇಶ್, ಬೋಜೇಗೌಡ, ಅಜಿತ್, ನಾಪಂಡ ಉಮೇಶ್, ದರ್ಶನ್ ಜೋಯಪ್ಪ ಸೇರಿದಂತೆ ಕಾರ್ಯಕರ್ತರು, ಮಲ್ಲಿಕಾರ್ಜುನ ಕಾಲೋನಿಯ ನಿವಾಸಿಗಳು ಭಾಗವಹಿಸಿದ್ದರು.