ಧರ್ಮವನ್ನು ಎತ್ತಿ ಹಿಡಿದು ಸುಖಿಗಳಾಗುತ್ತಾರೆ : ಈ ಜೀವಲೋಕದ ಪಾಪ, ಪುಣ್ಯ, ಕರ್ಮ, ಫಲಗಳಿಂದ ಉತ್ಪನ್ನವಾದ ದುಃಖ-ಸುಖಗಳ ಗತಿ ಯಾವುದಿದೆಯೋ, ಆ ಗತಿಯಲ್ಲಿ ಸಮಸ್ತ ಜೀವರಾಶಿಗಳು ಚಲನಶೀಲಗೊಳ್ಳುತ್ತವೆ. ಪುರುಷಾರ್ಥಿಗಳಾದ ಮನುಷ್ಯರು ಸೇನೆಯು ಹೇಗೆ ಶತ್ರುಗಳನ್ನು ಸೋಲಿಸಿ ವಿಜಯಿಯಾಗುತ್ತದೋ, ಅದೇ ರೀತಿ ಪಾಪವನ್ನು ಸೋಲಿಸಿ ಶುದ್ಧ ಧರ್ಮವನ್ನಾಚರಿಸುತ್ತ ಸರ್ವದಾ ಸುಖಿಗಳಾಗುತ್ತಾರೆ.
ಸಂನ್ಯಾಸಿ ಸತ್ಸಂಗ : ವಿರಕ್ತರೂ ಸಂನ್ಯಾಸಿಗಳೂ ಆದವರೊಂದಿಗೆ ಸಂಗವನ್ನು ಮಾಡುವುದರಿಂದ ಬುದ್ಧಿವಂತರಾಗುತ್ತಾರೆ. ಅಂತಹವರಿಗೆ ಯಾವಾಗಲೂ ಅನಿಷ್ಟ ಮತ್ತು ದುಃಖಗಳುವುಂಟಾಗುವುದಿಲ್ಲ.
ಸಮಗ್ರ ಶಿಕ್ಷಣದಿಂದ ಉತ್ತಮ ಸುಖ : ಯಾರು ಬ್ರಹ್ಮಚರ್ಯಾಶ್ರಮ ದಲ್ಲಿ ವಿದ್ಯಾವಂತರ ಸಂಗಮಾಡಿ ಶಾಸ್ತçಜ್ಞರಾಗುತ್ತಾರೋ, ಸಮಗ್ರ ಶಿಕ್ಷಣವನ್ನು ಪಡೆದುಕೊಂಡಿರುತ್ತಾರೋ, ಅವರೇ ತಮ್ಮ ಗೃಹಸ್ಥ ಜೀವನದಲ್ಲಿ ಉತ್ತಮ ಸುಖವನ್ನು ಪಡೆಯುತ್ತಾರೆ.
ಜೀವನ ರಹಸ್ಯ : ಜೀವಿಯು ಜೀವಿತರೂಪದಲ್ಲಿ ಉತ್ಪನ್ನನಾಗಿ, ಉತ್ಪನ್ನನಾದವನು ವಿನಾಶವಾಗದೇ ಇರುತ್ತಿದ್ದರೆ ನಿತ್ಯರೂಪವಾದ ಆಶ್ಚರ್ಯಕರ ಗುಣ, ಕರ್ಮ ಸ್ವಭಾವಗಳಿಂದ ಕೂಡಿರುವ ಅನಾದಿಯಾದ ಈ ಚೈತನ್ಯ ರೂಪವನ್ನು ಯಾರು ತಿಳಿದುಕೊಳ್ಳುತ್ತಿದ್ದರು ? ಅದೂ ಸಹ ಆಶ್ಚರ್ಯ ಸ್ವರೂಪವೇ ಆಗಿರುತ್ತದೆ.
ಬಂಧುಗಳನ್ನು ರಕ್ಷಿಸುವವರು ಸಮರ್ಥರಾಗಿರುತ್ತಾರೆ : ಯಾರಾದರೂ ತಮ್ಮ ಬಂಧುಗಳಿಗೆ ಹಿಂಸೆ ಕೊಡಲು ಬಯಸಿದರೆ ಅವರು ಯಾವಾಗಲೂ ಹಿಂಸೆಯಿAದ ಪೀಡಿತರಾಗುತ್ತಾರೆ. ಯಾರು ಬಂಧುಗಳನ್ನು ರಕ್ಷಿಸ ಬಯಸುತ್ತಾರೋ, ಅವರು ಜೀವನದಲ್ಲಿ ಸಮರ್ಥರಾಗುತ್ತಾರೆ. ಎಲ್ಲಾ ಕೆಲಸಗಳೂ ಅವರ ಸಾಮರ್ಥ್ಯದೊಂದಿಗೆ ಸಿದ್ಧವಾಗುತ್ತವೆ. ಅಂತಹ ಜನರಿಗೆ ಯಾವ ಕೆಲಸವೂ ಅಪ್ರಿಯವೆನಿಸುವುದಿಲ್ಲ.
ಮಿತ್ರರನ್ನು ಪ್ರಸನ್ನಗೊಳಿಸಬೇಕು : ಯಾರು ಯಾರಿಗೆ ಮಿತ್ರರೋ ಅವರು ಅವರನ್ನು ಮನಸ್ಸು, ಮಾತು, ಕರ್ಮಗಳಿಂದ ಪ್ರಸನ್ನರನ್ನಾಗಿ ಮಾಡಬೇಕು ಮತ್ತು ತನ್ನಲ್ಲಿ ಎಷ್ಟು ವಿದ್ಯೆ ಜ್ಞಾನಗಳಿವೆಯೋ ಅವೆಲ್ಲವನ್ನು ತನ್ನ ಮಿತ್ರರಿಗೆ ಸಮರ್ಪಣೆ ಮಾಡಬೇಕು.
ಪ್ರಸಂಸೆ-ನಿAದನೆ : ಮನುಷ್ಯರು ಪ್ರಶಂಸಾತ್ಮಕ ಕರ್ಮ ಮಾಡುವವ ನನ್ನು ಸ್ತುತಿಸಬೇಕು. ಕುತ್ಸಿತಕರ್ಮ ಮಾಡುವವನನ್ನು ನಿಂದಿಸಬೇಕು. ಅಂತಹವರ ಸ್ತುತಿಯೇ ಸ್ತುತಿ ಎನಿಸಿಕೊಳ್ಳುತ್ತದೆ. ಅಂತಹವರ ನಿಂದೆಯೇ ನಿಂದೆಯಾಗಿರುತ್ತದೆ. ಸ್ತುತಿಯಾಗಲೀ, ನಿಂದೆಯಾಗಲೀ ಯಥಾರ್ಥ ವಾಗಿರಬೇಕು.
ಪರರನ್ನು ನೋಡುವ ದೃಷ್ಟಿ : ಯಾರು ಪ್ರತಿದಿನವೂ ಸತ್ಪುರುಷರ ಸಂಗ ಮಾಡುತ್ತಾರೋ, ಯಾರು ತನ್ನಂತೆ ಇತರ ಜೀವಿಗಳನ್ನು ನೋಡುತ್ತಾರೋ ಅವರೇ ನಿರ್ವೈರಿಗಳು. ಅವರ ರಾಜ್ಯವೇ ಬೆಳೆಯುತ್ತದೆ.
ಸಂಪತ್ತಿನಿAದ ಎಲ್ಲರನ್ನು ಸುಖಿಗಳನ್ನಾಗಿಸಿ : ಸೂರ್ಯನು ಆಕಾಶ ದಲ್ಲಿ ಮೇಘವನ್ನು ಊರ್ಜಿತಗೊಳಿಸಿ ಎಲ್ಲರಿಗೂ ಸುಖಕೊಡುತ್ತಾನೋ, ಹಾಗೆಯೇ ಸಜ್ಜನರು ಬೆಳೆಯುತ್ತಿರುವ ತಮ್ಮ ಸಂಪತ್ತಿನಿAದ ಎಲ್ಲರನ್ನೂ ಆನಂದಿತರನ್ನಾಗಿ ಮಾಡುತ್ತಾರೆ. ಹೇಗೆ ಪುರುಷನು ವಿದ್ಯಾವಂತನೋ ಹಾಗೆ ಸ್ತಿçÃಯೂ ವಿದ್ಯಾವತಿಯಾಗಿರಬೇಕು.
ಸಜ್ಜನರ ಉಪದೇಶ: ಯಾವನು ಬಲಿಷ್ಠನಾಗಿರುವನೋ ಅವನು ಶತ್ರ್ರುಗಳಂತೆ ಸಜ್ಜನರೊಂದಿಗೆ ವ್ಯವಹರಿಸಬಾರದು. ಯಾವಾಗಲೂ ಶಾಸ್ತçಜ್ಞರೂ, ಧರ್ಮಾತ್ಮರೂ ಆದ ಜನರೊಂದಿಗೆ ಅವರ ಉಪದೇಶವನ್ನು ಸ್ವೀಕರಿಸಬೇಕು. ಬೇರೆ ಅಧರ್ಮಿಗಳ ಉಪದೇಶವನ್ನು ಕೇಳಬಾರದು.
ಆತ್ಮಸ್ತುತಿ ಸಲ್ಲದು: ಭದ್ರಪುರುಷನು ಯಾವಾಗಲೂ ತನ್ನ ಮುಖದಿಂದ ತನ್ನ ಸ್ತುತಿಯನ್ನು ಮಾಡಿಕೊಳ್ಳಬಾರದು. ಬೇರೆಯವರು ಮಾಡುವ ತನ್ನ ಸ್ತುತಿಯನ್ನು ಕೇಳಿ ಆನಂದವನ್ನು ಪಡೆಯಬಾರದು. ಆದರೆ ತನ್ನಿಂದಲೇ ತಾನು ಉನ್ನತಿ ಪಡೆಯಬೇಕು. ಬೇರೆಯವರ ಉನ್ನತಿಯನ್ನೂ ಸರ್ವದಾ ಸಹಿಸಬೇಕು.
ಜೀವಾತ್ಮ ಪರಮಾತ್ಮರ ಸ್ವರೂಪ : ಯಾರು ಬ್ರಹ್ಮಚರ್ಯಾಶ್ರಮದಲ್ಲಿ ವಿದ್ಯಾಧ್ಯಯನ ಮಾಡಿ ಗೃಹಸ್ಥಾಶ್ರಮದಲ್ಲಿ ಧರ್ಮಕಾರ್ಯದೊಂದಿಗೆ ವಿದ್ಯಾದಾನ ಮಾಡಿ ಅವರÀನ್ನು ತೃಪ್ತಿಪಡಿಸುವರೋ, ಯಾರೊಂದಿಗೂ ವಿರೋಧ ಮಾಡದೇ ಎಲ್ಲರೊಡನೆ ಉಪದೇಶ ಗ್ರಹಣ ರೂಪ ವಿಚಾರ ವಿನಿಮಯ ಮಾಡುವರೋ, ಅವರು ಜೀವಾತ್ಮ, ಪರಮಾತ್ಮನ ಸ್ವರೂಪವನ್ನು ತಿಳಿದುಕೊಳ್ಳುತ್ತಾರೆ.
ಶಿಷ್ಯರಿಗೆ ಶಾಶ್ವತ ಸುಖ : ಹೇಗೆ ರೈತರು ಚೆನ್ನಾಗಿ ಊಳಲಾದ ಭೂಮಿ ಯಲ್ಲಿ ಬೀಜವನ್ನು ಬಿತ್ತಿ ಧಾನ್ಯಗಳನ್ನು ಬೆಳೆಯುತ್ತಾರೋ, ಹಾಗೆ ಅಧ್ಯಾಪಕರು ಶಿಷ್ಯರ ಚಿತ್ತದಲ್ಲಿ ಜ್ಞಾನಬೀಜವನ್ನು ಬಿತ್ತುವುದರ ಮೂಲಕ ಆತ್ಮವಿದ್ಯೆಯನ್ನು ಬೆಳೆಸಿ ಶಾಶ್ವತ ಸುಖವನ್ನು ಹುಟ್ಟುಹಾಕುತ್ತಾರೆ.
ಶಿಕ್ಷಕರಿಂದ ಮಾರ್ಗದರ್ಶನ : ಸೂರ್ಯ ಮಂಡಲವು ರಸವನ್ನು ಹೀರಿ, ಚಂದ್ರಮAಡಲವು ಮಳೆ ಸುರಿಸಿ ಭೂಮಿಯನ್ನು ಹೇಗೆ ಪುಷ್ಟಿಗೊಳಿಸು ತ್ತದೆಯೋ ಹಾಗೆ ಅಧ್ಯಾಪಕೋಪದೇಶಕರು ವರ್ತಿಸಬೇಕು. ಹೇಗೆ ರಾಗ ದ್ವೇಷಾದಿ ರಹಿತರಾದ ಸಜ್ಜನರು ಶಾಂತ್ಯಾದಿ ಗುಣಗಳಿಂದ ಸುಖ ಪಡೆಯು ವರೋ ಹಾಗೆ ನೀವೂ ಪಡೆಯಿರಿ ಎನ್ನಬೇಕು.
ಯುವಕರಿಗೆ ಉಪದೇಶ : ಅನುಭವೀ ಪುರುಷರು ಯುವಕ, ಯುವತಿ ಯರಿಗಾಗಿ ಉಪದೇಶಿಸಬೇಕು. ನಾವು ನಿಮ್ಮನ್ನು ದುರಾಚಾರಿಗಳಿಂದ ದೂರವಿರಿಸುತ್ತೇವೆ, ನಿಮಗೆ ವಿದ್ಯಾದಾನ ಮಾಡುತ್ತೇವೆ, ನೀವು ಅದಕ್ಕನುಗುಣವಾಗಿ ಪ್ರತಿಕ್ರಿಯಿಸಿ ಎನ್ನಬೇಕು.
ಮನುಷ್ಯರು ಹೊಸ ವಿದ್ಯೆ ಸಿದ್ಧಿಸಿ ಕೊಳ್ಳಬೇಕು: ಮನುಷ್ಯರು ಯಾವಾಗಲೂ ಹೊಸ-ಹೊಸ ವಿದ್ಯೆಗಳಿಂದ ಕಾರ್ಯಸಿದ್ಧಿ ಮಾಡಿಕೊಳ್ಳಬೇಕು. ಅದರಿಂದ ಈ ಜಗತ್ತಿನಲ್ಲಿ ಪ್ರಶಂಸೆ ಪಡೆಯಬಹುದು. ಆಕಾಶಾದಿಗಳಲ್ಲಿ ಸಂಚರಿಸುವ ಇಚ್ಛೆಯನ್ನು ಪೂರ್ಣಗೊಳಿಸಿಕೊಳ್ಳಬಹುದು.
ಆಶ್ರಮ ಧರ್ಮ: ಬ್ರಹ್ಮಚರ್ಯಾಶ್ರಮದಲ್ಲಿ ವಿದ್ಯೆಯನ್ನು ಪಡೆದು ಗೃಹಸ್ಥಾಶ್ರಮದಲ್ಲಿ ಯಥಾಯೋಗ್ಯವಾದ ವಸ್ತು, ಒಡವೆ, ಅನ್ನ, ಮನೆ ಮುಂತಾದ ಭೋಗ್ಯವಸ್ತುಗಳನ್ನು, ಪುರುಷಾರ್ಥದ ರೀತಿಯಲ್ಲಿ ಅನುಭವಿಸಿ, ಎಲ್ಲಾ ಆಶ್ರಮಗಳಿಗೂ ಉಪಕಾರಿಯಾಗಿ ವಾನಪ್ರಸ್ಥಾಶ್ರಮದಲ್ಲಿ ವೈರಾಗ್ಯವನ್ನು ಪಡೆದು ತಾನು ಪಡೆದಿರುವ ವಿದ್ಯೆಗಳ ದಾನವನ್ನು ಮಾಡಿ ಅನುಭವಿಸಿದ ರೀತಿ, ನಿಯಮಗಳನ್ನು ಉಪದೇಶಿಸಿ, ಸನ್ಯಾಸಾಶ್ರಮದಲ್ಲಿ ಪಡೆದದ್ದೆಲ್ಲವನ್ನು ತ್ಯಾಗ ಮಾಡಿ ಸತ್ಯಧರ್ಮಗಳ ಉಪದೇಶವನ್ನು ಮಾಡಿ ಸರ್ವತ್ರ ಸಂಚರಿಸುವವರು ಪ್ರಾಪ್ತವಾದ ಶರೀರ ತ್ಯಾಗ ಮಾಡಿದ ಮೇಲೆ ತುರೀಯ ಪುರುಷಾರ್ಥವನ್ನು ಅಂದರೆ ಮೋಕ್ಷವನ್ನು ಪಡೆಯುತ್ತಾರೆ.
ಕುಲಪತಿ : ಯಾರು ಗಾಳಿಯಂತೆ ಸಮಸ್ತ ಪದಾರ್ಥ ಗಳನ್ನೂ ಸ್ಪರ್ಶಿಸಿ ಪದಾರ್ಥವಿಜ್ಞಾನವನ್ನು ಧಾರಣೆ ಮಾಡಿರು ತ್ತಾರೋ, ಮಿಂಚಿನAತೆ ಬೆಳಕನ್ನು ಸಂಯೋಜಿಸಿ ಸರ್ವತ್ರ ವ್ಯಾಪ್ತರಾಗುತ್ತಾರೋ, ಅಂತಹ ವಿದ್ಯಾವಂತರು ತಮ್ಮ ವಿದ್ಯೆಗಳನ್ನು ವಿದ್ಯಾರ್ಥಿಗಳಿಗೆ ಸಂಯೋಜಿಸಿ ವಿಶೇಷ ಜ್ಞಾನವನ್ನು ಮಾತಿನಿಂದ ಬೋಧಿಸಿ, ನಿಯಮ-ನೀತಿಗಳನ್ನು ತಾವೇ ಆಚರಿಸುತ್ತಾ ಆಚಾರಶೀಲರಾಗಿ ವಿದ್ಯಾರ್ಥಿಗಳಿಗೂ ಅದನ್ನಾಚರಿಸವಂತೆ ಪ್ರೇರಣೆ ನೀಡುತ್ತಾರೋ ಅವರೇ ಕುಲಪತಿ ಎನ್ನಿಸಿಕೊಳ್ಳುತ್ತಾರೆ.
ಪುಣ್ಯವಂತರು : ಯಾರ ಕೀರ್ತಿಯು ಗಾಳಿಗೆ ಸಮಾನ ವಾಗಿ ಸರ್ವತ್ರ ಪ್ರಸರಣಗೊಂಡಿದೆಯೋ, ಯಾರ ಬೋಧನಾವಧಿಯು ಬಹಳ ವಿಸ್ತಾರವಾಗಿದೆಯೋ, ಯಾರ ಗುಣ-ನಡತೆಗಳು ಆಕಾಶದಂತೆ ಶಾಂತಿಯುತವಾಗಿದೆಯೋ, ಯಾರು ದುಷ್ಟಾಚರಣೆಗಳನ್ನು ಮಿಂಚಿನ ವೇಗದಂತೆ ತ್ಯಾಗ ಮಾಡುತ್ತಾರೋ ಅವರೇ ಪುಣ್ಯವಂತರೆನಿಸಿಕೊಳ್ಳುತ್ತಾರೆ.
ಹಿAದಿನ ಕರ್ಮಗಳು: ವಾಯುವು ಜಡವಸ್ತುವಾಗಿದೆ, ಅಮೂರ್ತ ವಾಗಿದೆ. ಆದರೂ ಈ ಸೃಷ್ಟಿಯಲ್ಲಿ ಇರುವಂತಹ ದ್ದಾಗಿದೆ. ಹಾಗೆಯೇ ಪ್ರಳಯ ಕಾಲದಲ್ಲಿಯೂ ನೆಲೆಸಿರುತ್ತದೆ. ಎಲ್ಲಾ ಜೀವಿಗಳ ಜೀವನಕ್ಕೆ ಆಧಾರವೂ ಆಗಿದೆ. ಜಡವಸ್ತುವನ್ನು ಮೇಲೆ, ಕೆಳಗೆ ಎಲ್ಲಿ ಬೇಕಾದರೂ ಕೊಂಡೊಯ್ಯುತ್ತದೆ. ಅದೇ ರೀತಿಯಲ್ಲಿ ಅವರವರು ಮಾಡಿದ ಕರ್ಮಫಲವು ಹಿಂದಿನ ಜನ್ಮದ್ದು ಅಥವಾ ಹಿಂದಿನ ದಿನಗಳದ್ದು, ಇಂದಿನ ಮತ್ತು ಮುಂದಿನ ದಿನಗಳಲ್ಲಿ ಸುಖ-ದುಃಖಗಳ ರೂಪದಲ್ಲಿ ತಲೆ ಎತ್ತಿ ನಿಲ್ಲುತ್ತದೆ, ಹಾಗಾಗಿ ಅದು ಯೋಗ್ಯ ರೀತಿಯಲ್ಲಿಯೇ ನಮ್ಮನ್ನು ಹಿಂಬಾಲಿಸುತ್ತದೆ ಎಂದು ತಿಳಿದುಕೊಳ್ಳಬೇಕು.
ಮಾಡಬೇಕಾದ ಆಚರಣೆ : ಮನುಷ್ಯನು ಯಾವುದರ ಸಹಾಯದಿಂದ ಬಹುವಿದ್ಯೆ ಧರ್ಮಾಚರಣೆ, ಬಲವಾದ ಶಕ್ತಿ, ಚತುರ ಬುದ್ಧಿ ಇವುಗಳನ್ನು ಪಡೆದುಕೊಂಡಿರುವನೋ, ಅದನ್ನು ಪ್ರತಿದಿನವೂ ಬೆಳೆಸಿಕೊಳ್ಳಬೇಕು. ಅದಕ್ಕಾಗಿ ಅವುಗಳ ಆಚರಣೆಯನ್ನು ತಪ್ಪದೇ ಮಾಡಬೇಕು. ಯಾವ ಮನುಷ್ಯನು ಸತ್ಯಾಸತ್ಯತೆಗಳ ತೀರ್ಮಾನಕ್ಕಾಗಿ ಶುಭಗುಣಕರ್ಮಸ್ವಭಾವತಿಯಾದ ಸುಶಿಕ್ಷಿತೆಯಿಂದ ಶಾಸ್ತçಜ್ಞಾನವನ್ನು ತನ್ನ ಮಾತುಗಳಲ್ಲಿ ಪ್ರಕಟಗೊಳಿಸುತ್ತ ಸಭೆಯಲ್ಲಿ ವಿಷಯವನ್ನು ಮಂಡಿಸುವನೋ, ಅಂತಹ ವಿದ್ಯಾವಂತನು ತನ್ನ ಜ್ಞಾನಧನದಿಂದ ಎಲ್ಲಾ ದಿಕ್ಕುಗಳಲ್ಲೂ ಪ್ರಸಿದ್ಧಿಯನ್ನು ಪಡೆಯುತ್ತಾನೆ.
ವಿದ್ವಾಂಸನೂ ಆನಂದಗೊಳಿಸುತ್ತಾನೆ: ವಾಯುವು ವಿದ್ಯುದ್ವೇಗದಲ್ಲಿ ಉತ್ಪನ್ನವಾಗಿ ಮಳೆಯ ಮೂಲಕ ಓಷಧಿ ವನಸ್ಪತಿಗಳನ್ನು ತಲಪಿ ಅವುಗಳನ್ನು ವೃದ್ಧಿಪಡಿಸಿ ಪ್ರಾಣಿಗಳ ಜೀವನವನ್ನು ಸುಗಮಗೊಳಿಸಿ ದುಃಖವನ್ನು ನಿವಾರಿಸುತ್ತದೆಯೋ ಹೇಗೆ, ಪತಿವ್ರತಾಸ್ತಿçÃಯು ಪತಿಯನ್ನು ತನ್ನ ಮಕ್ಕಳನ್ನು ಆನಂದಿತರನ್ನಾಗಿ ಮಾಡುತ್ತಾಳೆಯೋ, ಹಾಗೆ ವಿದ್ಯಾವಂತರನ್ನು ವಿದ್ಯೆಯೆಂಬ ಮಳೆಯನ್ನು ಸುರಿಸಿ ಶಿಷ್ಯರನ್ನೂ, ಸಾಮಾನ್ಯ ಜನರನ್ನೂ, ಧರ್ಮಮಾರ್ಗದಲ್ಲಿ ಸ್ಥಿರಗೊಳಿಸಿ ಎಲ್ಲರನ್ನು ಆನಂದಿತರನ್ನಾಗಿಸುತ್ತಾರೆ.
ಸಮಸ್ತ ಕುಲವನ್ನು ಬೆಳಗಿಸುತ್ತಾಳೆ : ಅಗ್ನಿಯು ಮಿಂಚಿನ ರೂಪದಲ್ಲಿ ಎಲ್ಲರನ್ನೂ ಅಲ್ಲ ರೀತಿಯಿಂದಲೂ ವ್ಯಾಪಿಸಿಕೊಂಡು ಹೇಗೆ ಪ್ರಕಾಶಗೊಳಿಸು ತ್ತಾನೋ, ಹಾಗೆಯೇ ವಿದ್ಯೆ ಮತ್ತು ಉತ್ತಮ ಶಿಕ್ಷಣಗಳನ್ನು ಪಡೆದುಕೊಂಡ ಸ್ತಿçÃಯು ಸಮಸ್ತ ಕುಲವನ್ನೇ ಬೆಳಗಿಸುತ್ತಾಳೆ.
ಗುರುಶಿಷ್ಯರಿಬ್ಬರ ವೃದ್ಧಿ : ಯಾವ ಮನುಷ್ಯನು ವಿದ್ಯೆ, ಧರ್ಮ ಮತ್ತು ಉತ್ತಮ ಶಿಕ್ಷಣವನ್ನು ಕೊಟ್ಟು ಅಜ್ಞಾನಿಗಳಲ್ಲಿರುವ ಅವಿದ್ಯೆ, ಅಧರ್ಮ, ಅನುಭವಗಳನ್ನು ನಿವೃತ್ತಿಗೊಳಿಸಿ ಸ್ಥಿರ ಶುಭ ಪ್ರಯೋಜನ ಪೂರ್ಣ ಕಾರ್ಯಗಳಲ್ಲಿ ತೊಡಗಿಸುತ್ತಾರೋ, ಅಂತಹ ಗುರು ಶಿಷ್ಯರಿಬ್ಬರು ವೃದ್ಧಿ ಹೊಂದುತ್ತಾರೆ.
ಆತ್ಮಬಲ ವರ್ಧನೆ : ಒಂದು ವೇಳೆ ನಾವೆಲ್ಲರೂ ಪರಿಪೂರ್ಣವಾದ ಆತ್ಮಬಲ ಮತ್ತು ಶರೀರಬಲವನ್ನು ಪಡೆದುಕೊಂಡಿದ್ದೇ ಆದರೆ ಶತ್ರುಗಳು ಅಂದರೆ ಬಾಹ್ಯಶತ್ರುಗಳು ಮತ್ತು ಆಂತರಿಕ ಶತ್ರುಗಳು ಯಾರೂ ನಮ್ಮನ್ನು ಪರಾಜಯಗೊಳಿಸಲಾರರು. ಇಲ್ಲಿ ನಮ್ಮ ಶರೀರದಲ್ಲಿಯೇ ಇದ್ದು ರಾಗ, ದ್ವೇಷ, ಈರ್ಷ್ಯೆ, ಮದ, ಮೋಹ, ಮಾತ್ಸರ್ಯ ಈ ಗುಣಗಳಿಂದ ನಮ್ಮ ಆತ್ಮಬಲವನ್ನು ಹಾಳು ಮಾಡುವ ಅರಿಷಡ್ವರ್ಗಗಳು ಆಂತರಿಕ ಶತ್ರುಗಳು, ಹೊರಗಿನಿಂದ ನಮ್ಮ ಕಾರ್ಯಕಲಾಪಗಳನ್ನು ನಾಶಮಾಡುವವರು ಅಥವಾ ಈ ಕಾರ್ಯಕಲಾಪಗಳಿಗೆ ಕಾರಣವಾದ ಶರೀರವನ್ನು ನಾಶ ಮಾಡುವವರು ಬಾಹಿಕ ಶತ್ರುಗಳೆನಿಸಿಕೊಳ್ಳುತ್ತಾರೆ.
ಯಾರು ಇಹಪರದಲ್ಲಿ ಸುಖಿಗಳು : ಎಲ್ಲರಿಂದಲೂ ಪ್ರಶಂಸೆಗೆ ಯೋಗ್ಯವಾದ ಗುಣಗಳನ್ನು ಯಾವನು ಪಡೆದುಕೊಂಡಿರುತ್ತಾನೋ, ಧರ್ಮಾತ್ಮರನ್ನು ಸಜ್ಜನರನ್ನು ಗೌರವಿಸುತ್ತಾನೋ, ಶರೀರ ಆತ್ಮಬಲಗಳನ್ನು ಹೆಚ್ಚಿಸಿಕೊಳ್ಳಲು ವಿದ್ಯೆ ಪ್ರಶಿಕ್ಷಣ ಸನ್ಮಾರ್ಗವನ್ನು ಅನುಸರಿಸುತ್ತಾನೋ, ಅವನು ಇಹದಲ್ಲಿ ಸುಖಿಯಾಗುತ್ತಾನೆ.
ಧನ್ಯನೆನಿಸುತ್ತಾನೆ :ಯಾರು ಗಾಳಿಯಂತೆ ಬಲಶಾಲಿಯೋ, ನೀರಿನ ಅಲೆಗಳಂತೆ ಉತ್ಸಾಹಿಯೋ, ಹಸುಗಳಂತೆ ಎಲ್ಲರಿಗೂ ಉಪಕಾರ ಮಾಡು ವವನೋ, ತನ್ನ ಈ ಗುಣಗಳಿಂದ ಎಲ್ಲರಿಗೂ ಸುಖವನ್ನು ನೀಡಿ ದುಷ್ಟರನ್ನು ನಡುಗಿಸುವವನು; ಅಂತಹ ಮನುಷ್ಯನೇ ಭೂಮಿಯಲ್ಲಿ ಸಾರ್ಥಕ ವ್ಯಕ್ತಿ (ಧನ್ಯ) ಯೆನಿಸಿಕೊಳ್ಳುತ್ತಾನೆ.
ಬ್ರಹ್ಮಾಂಡದ ಗತಿಶೀಲತೆ : ಈ ಬ್ರಹ್ಮಾಂಡದಲ್ಲಿ ಭೂಗೋಳದಂತಹ ಅನೇಕ ಪದಾರ್ಥಗಳು ಬರುತ್ತವೆ, ಪ್ರತ್ಯಾಗಮಿಸುತ್ತವೆ. ಕಂಪಿಸುತ್ತವೆ. ಆಕಾಶದಲ್ಲಿ ಇಂತಹ ಗೋಳಕಗಳು ಚಲಿಸುತ್ತಿವೆಯೋ ಆ ಗೋಳಕಗಳಲ್ಲಿ ಲೋಕಗಳು ಉತ್ಪನ್ನವಾಗುತ್ತವೆ. ಅವುಗಳು ಆಕಾಶದಲ್ಲೇ ಉತ್ಪನ್ನವಾಗಿ, ಆಕಾಶದಲ್ಲಿಯೇ ಸಂಚರಿಸಿ, ಆಕಾಶದಲ್ಲಿಯೇ ಲೀನವಾಗು ತ್ತವೆ. ಈ ಚಲಿಸುವ ವಸ್ತುಗಳು ಕಾರ್ಯವಾಗಿದ್ದರೆ ಆಕಾಶರೂಪೀ, ಸರ್ವತ್ರ ವ್ಯಾಪ್ತನಾದ ಬ್ರಹ್ಮನು ಕಾರಣನಾಗಿರುತ್ತಾನೆ. (ಮುಂದುವರಿಯುವುದು)
-ಜಿ. ರಾಜೇಂದ್ರ, ಮಡಿಕೇರಿ.