ಕುಶಾಲನಗರ, ಅ. ೮ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಕುಶಾಲನಗರ ಗೌಡ ಸಮಾಜದ ಸಂಯುಕ್ತಾಶ್ರಯದಲ್ಲಿ ಗೌಡ ಸಮಾಜದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಅರೆಭಾಷೆ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಶಿಬಿರದಲ್ಲಿ ದೊರೆತ ಉಪಯುಕ್ತ ಮಾಹಿತಿ ಹಾಗೂ ವಿಚಾರಗಳ ಬಗ್ಗೆ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭ ಸಮುದಾಯದ ಸಂಪ್ರದಾಯಗಳ ಬಗ್ಗೆ ಪ್ರದರ್ಶನ ನಡೆಯಿತು. ಹುಟ್ಟಿನಿಂದ ಸಾಯುವ ತನಕ ನಡೆಯುವ ಶಾಸ್ತç, ಸಂಪ್ರದಾಯಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಸಭಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರು ತಮಗೆ ಗೊತ್ತಿರುವ ಉಪಯುಕ್ತ ವಿಚಾರಗಳು, ಮಾಹಿತಿಯನ್ನು ಯುವ ಪೀಳಿಗೆಯೊಂದಿಗೆ ಹಂಚಿ ಕೊಳ್ಳಬೇಕಿದೆ. ಶಿಬಿರದ ಮೂಲಕ ನೀಡಿದ ಮಾಹಿತಿ ಅನ್ವಯ ಸಮುದಾಯದ ಸಂಸ್ಕೃತಿ ಆಚಾರ ವಿಚಾರ, ಶಾಸ್ತç, ಸಂಪ್ರದಾಯಗಳನ್ನು ಅಳವಡಿಸಿಕೊಂಡು ಚಾಚೂ ತಪ್ಪದೆ ಪಾಲಿಸುವಲ್ಲಿ ಎಲ್ಲರೂ ಮುಂದಾಗಬೇಕಿದೆ. ಶೀಘ್ರದಲ್ಲಿ ಅರೆಭಾಷೆ ನಿಘಂಟು ಹೊರತರಲು ಚಿಂತನೆ ಹರಿಸಲಾಗಿದ್ದು ಈ ನಿಟ್ಟಿನಲ್ಲಿ ಅಗತ್ಯ ಕಾರ್ಯಗಳು ಪ್ರಗತಿಯಲ್ಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಕೂರನ ಪ್ರಕಾಶ್, ಪತ್ರಕರ್ತ ಸುನಿಲ್ ಪೊನ್ನೇಟಿ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಸ್ಥಾಪಕಿ ಕುದುಪಜೆ ಶಾಂತಿ ಭೋಜಪ್ಪ, ಅಕಾಡೆಮಿ ಸದಸ್ಯರುಗಳಾದ ಧನಂಜಯ, ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮ ರಾಘವಯ್ಯ, ಧನಂಜಯ ಅಗೋಳಿಕಜೆ, ಪುರುಷೋತ್ತಮ್ ಕಿರ್ಲಾಯ, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಕಡ್ಯದ ಪಾರ್ವತಿ, ನಿವೃತ್ತ ಶಿಕ್ಷಕ ಪೆರುಬಾಯಿ ಚಿನ್ನಪ್ಪ ಸೇರಿದಂತೆ ಗೌಡ ಯುವಕ ಸಂಘ, ಗೌಡ ಮಹಿಳಾ ಸ್ವಸಹಾಯ ಸಂಘ, ಪದ್ಮಾವತಿ ಗೌಡ ಮಹಿಳಾ ಒಕ್ಕೂಟದ ಪದಾಧಿಕಾರಿಗಳು, ಪ್ರಮುಖರು ಇದ್ದರು.