ಆಲೂರುಸಿದ್ದಾಪುರ, ಅ. ೮: ಸಮೀಪದ ಮಾಲಂಬಿ ಗ್ರಾಮದ ಬ್ರದರ್ಸ್ ಸಮಿತಿ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಮಾಲಂಬಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮೊದಲ ವರ್ಷದ ವಾಲಿಬಾಲ್ ಗಾಂಧಿ ಕಪ್ ಎಂಬ ಹೆಸರಿನಲ್ಲಿ ಸೋಮವಾರಪೇಟೆ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿ ಯನ್ನು ಹಮ್ಮಿಕೊಳ್ಳಲಾಗಿತ್ತು.

ಕೊರೊನಾ ಹಿನ್ನೆಲೆ ಮಾಲಂಬಿ ಗ್ರಾಮದಲ್ಲಿ ಯಾವುದೇ ಕ್ರೀಡಾಕೂಟಗಳÀನ್ನು ಇತ್ತೀಚೆಗೆ ಹಮ್ಮಿಕೊಂಡಿರಲಿಲ್ಲ.

ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ.

ಪಂದ್ಯಾವಳಿಯಲ್ಲಿ ತಾಲೂಕಿನ ಪ್ರತಿಭಾವಂತ ಟೀಮ್‌ಗೆ ಅವಕಾಶ ನೀಡಿದ್ದೇವೆ ಎಂದು ಬ್ರದರ್ಸ್ ಸಮಿತಿ ಸಂಚಾಲಕ ಪ್ರಸನ್ನ ಹೇಳಿದ್ದಾರೆ.

ವಾಲಿಬಾಲ್ ಪಂದ್ಯಾವಳಿಯಲ್ಲಿ ಆಲೂರುಸಿದ್ದಾಪುರ ಟೀಮ್ ಸಿಕ್ಸ್ ಪ್ಲಸ್ ಓನ್ ತಂಡ ಪ್ರಥಮ ಸ್ಥಾನ ಪಡೆದು ಕಪ್ ತನ್ನದಾಗಿಸಿ ಕೊಂಡಿತು. ಮಾಲಂಬಿ ಬ್ರದರ್ಸ್ ‘ಎ’ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.