ಮಡಿಕೇರಿ, ಅ. ೮: ಸಿ.ಜಿ.ಕೆ. ರಂಗ ಪುರಸ್ಕಾರಕ್ಕೆ ಭಾಜನರಾಗಿರುವ ಕಡಗದಾಳುವಿನ ರಂಗಭೂಮಿ ಕಲಾವಿದರೂ ಆಗಿರುವ ಮಾದೇಟಿರ ಬೆಳ್ಯಪ್ಪ ಅವರನ್ನು ಸ್ಥಳೀಯ ಗ್ರಾಮಸ್ಥರು ಹಾಗೂ ಕಡಗದಾಳು ಕಲ್ಚರ್ ಅಸೋಸಿಯೇಷನ್‌ನ ಮೂಲಕ ಸನ್ಮಾನಿಸಲಾಯಿತು. ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಕ್ಕಾಟಿರ ಸೋಮಯ್ಯ, ಕೆಚ್ಚೆಟ್ಟೀರ ಬಿದ್ದಯ್ಯ, ಮಾದೇಟಿರ ಪೆಮ್ಮಯ್ಯ, ಜಗ್ಗಾರಂಡ ಮೋಟಯ್ಯ ಸೇರಿದಂತೆ ಹಲವರು ಪಾಲ್ಗೊಂಡು ಇವರನ್ನು ಗೌರವಿಸಿದರು.