ಸೋಮವಾರಪೇಟೆ, ಅ. ೮: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡದ ಅಬ್ಬೂರುಕಟ್ಟೆ ರವಿ ಕುಮಾರ್ ಅವರ ಪ್ರಾಯೋಜ ಕತ್ವದಲ್ಲಿ ಸಮೀಪದ ನೇರುಗಳಲೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರಮದಾನ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಗಾಂಧೀಜಿ ಹಾಗೂ ಶಾಸ್ತಿçÃಜಿ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು ಶಾಲಾ ಆವರಣ ವನ್ನು ಶುಚಿಗೊಳಿಸಿ ಗಿಡಗಳನ್ನು ನೆಟ್ಟರು. ಇದೇ ಸಂದರ್ಭ ಕಳೆದ ಸಾಲಿನ ಹತ್ತನೇ ತರಗತಿ ಪರೀಕ್ಷೆ ಯಲ್ಲಿ ಉತ್ತಮ ಅಂಕ ಗಳಿಸಿದ ಸೃಷ್ಟಿ, ಎ.ಪಿ.ಪ್ರೇಮಾ, ಪ್ರಿಯಾಂಕ ಅವರುಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪುಷ್ಪ, ಜಾನಪದ ಪರಿಷತ್ ಕಾರ್ಯದರ್ಶಿ ಎಂ.ಎ. ರುಬೀನಾ, ಎಸ್‌ಡಿಎಂಸಿ ಅಧ್ಯಕ್ಷೆ ಪದ್ಮಾವತಿ, ಗ್ರಾ.ಪಂ. ಸದಸ್ಯರಾದ ಪ್ರಕಾಶ್, ವಿನಯ್, ಸಂಭ್ರಮ್, ಪ್ರಮುಖರಾದ ಲೋಕಾ ನಂದ, ಎ.ಹೆಚ್. ತಿಮ್ಮಯ್ಯ, ಮುಖ್ಯೋಪಾ ಧ್ಯಾಯ ಕೃಷ್ಣೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.