ಪೊನ್ನಂಪೇಟೆ, ಅ. ೮: ಅಂರ‍್ರಾಷ್ಟಿçÃಯ ಹಾಕಿಪಟು, ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಕರಿನೆರವಂಡ ಸೋಮಣ್ಣ ಅವರು ಶುಕ್ರವಾರದಂದು ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು.

ವೀರಾಜಪೇಟೆಯ ಕೊಡವ ಸಮಾಜದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ ಗೋಣಿಕೊಪ್ಪಲಿನ ಚೇಮಿರ ಬೆಳ್ಯಪ್ಪ ಮತ್ತು ಗೀತಾ ದಂಪತಿಗಳ ಪುತ್ರಿ ನಮೃತ (ನೀತಿ) ಅವರನ್ನು ತಮ್ಮ ಬಾಳಸಂಗಾತಿಯಾಗಿ ಸ್ವೀಕರಿಸುವ ಮೂಲಕ ಸೋಮಣ್ಣ ಅವರು ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದರು.

ಹಾಕಿ ಕ್ರೀಡೆಯಲ್ಲಿ ತಮ್ಮ ವಿಭಿನ್ನ ಕೌಶಲ್ಯ ಮತ್ತು ಕೈಚಳಕದ ಮೂಲಕ ಚೆಂಡನ್ನು ಗೋಲು ಪೆಟ್ಟಿಗೆಯತ್ತ ಶರವೇಗದಲ್ಲಿ ಕೊಂಡೊಯ್ಯುವಲ್ಲಿ ಪ್ರಖ್ಯಾತಿ ಪಡೆದಿರುವ ಸೋಮಣ್ಣ ಅವರ ವಿವಾಹ ಕಾರ್ಯಕ್ರಮವನ್ನು ಸಾಕ್ಷೀಕರಿಸಲು ಒಲಂಪಿಯನ್ ಮತ್ತು ಅಂರ‍್ರಾಷ್ಟಿçÃಯ ಖ್ಯಾತಿಯ ಹಾಕಿ ಪಟುಗಳು ಸೇರಿದಂತೆ ಹಾಕಿ ಆಟಗಾರರ ದಂಡೇ ವೀರಾಜಪೇಟೆಗೆ ಆಗಮಿಸಿತ್ತು.

ಪಾಲಂಗಾಲ ಗ್ರಾಮದ ಕರಿನೆರವಂಡ ಕೆ. ಮಂದಪ್ಪ ಮತ್ತು ಇಂದಿರಾ ದಂಪತಿಗಳ ಪುತ್ರರಾಗಿರುವ ಸೋಮಣ್ಣ ಅವರು, ಕೆನರಾ ಬ್ಯಾಂಕ್ ಉದ್ಯೋಗಿಯಾಗಿದ್ದು, ಹಾಲಿ ಕೆನರಾ ಬ್ಯಾಂಕ್ ಹಾಕಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ ಕರ್ನಾಟಕ ಪುರುಷರ ಹಾಕಿ ತಂಡದ ತರಬೇತುದಾರರಾಗಿ ಮತ್ತು ಹಾಕಿ ಕರ್ನಾಟಕದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಒಲಂಪಿಯನ್ ಹಾಕಿಪಟುಗಳಾದ ವಿ.ಆರ್. ರಘುನಾಥ್, ಎಸ್.ವಿ. ಸುನಿಲ್, ಎಸ್.ಕೆ. ಉತ್ತಪ್ಪ, ನಿಕ್ಕಿನ್ ತಿಮ್ಮಯ್ಯ, ಭರತ್ ಚೆಟ್ರಿ, ಸಿ.ಎಸ್. ಪೂಣಚ್ಚ, ಅಂರ‍್ರಾಷ್ಟಿçÃಯ ಹಾಕಿಪಟುಗಳಾದ ವಿಕ್ರಂಕಾAತ್, ನಿತಿನ್ ತಿಮ್ಮಯ್ಯ, ವಿ.ಎಸ್. ವಿನಯ್, ಪ್ರಧಾನ್ ಸೋಮಣ್ಣ, ಪಿ.ಎಲ್. ತಿಮ್ಮಣ್ಣ, ಎ.ಬಿ. ಚೀಯಣ್ಣ, ಕೆ.ಕೆ. ಪೂಣಚ್ಚ, ಬಿ.ಸಿ. ಪೂಣಚ್ಚ, ಪಿ. ಷಣ್ಮುಗಂ, ಎ.ಸಿ. ಕುಟ್ಟಪ್ಪ, ಆಭರಣ್ ಸುದೇವ್, ಬಿಪಿನ್ ತಿಮ್ಮಯ್ಯ, ಕೆ.ಪಿ. ರಾಯ್, ಕೆ.ಕೆ. ಭರತ್, ಜಗದೀಪ್ ದಯಾಳ್, ನಿಲನ್ ಪೂಣಚ್ಚ, ಅಂರ‍್ರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಸೇರಿದಂತೆ ಕರ್ನಾಟಕದ ಹಾಕಿ ತಂಡದ ಹಲವು ಸದಸ್ಯರು, ಗೆಳೆಯರ ತಂಡ ಪಾಲ್ಗೊಂಡು ಶುಭ ಕೋರಿದರು.

- ರಫೀಕ್ ತೂಚಮಕೇರಿ