ಗೋಣಿಕೊಪ್ಪ ವರದಿ, ಅ. ೮: ಅಂರ‍್ರಾಷ್ಟಿçÃಯ ಕಾಫಿ ದಿನದ ಅಂಗವಾಗಿ ಗೋಣಿಕೊಪ್ಪ ರೋಟರಿ ಸಂಸ್ಥೆ ಹಾಗೂ ಕೊಡಗು ಮಹಿಳೆಯರ ಕಾಫಿ ಜಾಗೃತಿ ತಂಡದಿAದ ಕೊಡಗಿನ ಆನೆಚೌಕೂರು ಗೇಟ್‌ನಲ್ಲಿ ಪ್ರಯಾಣಿಕರಿಗೆ ಉಚಿತ ಸ್ವಾದಿಷ್ಟ ಕಾಫಿ ವಿತರಿಸಿ ಆಚರಿಸಲಾಯಿತು.
ಶುಕ್ರವಾರ ಸಂಜೆ ಕಾಫಿ, ಕೇಕ್, ಬಿಸ್ಕೆಟ್ ತಿಂಡಿ ನೀಡಿ ಆತಿಥ್ಯ ನೀಡುವದರೊಂದಿಗೆ ಕಾಫಿ ಬಳಕೆ ಹೆಚ್ಚಾಗಬೇಕು ಎಂಬ ಸಂದೇಶ ಸಾರಿದರು.
ರಾಜ್ಯ ರಸ್ತೆ ಸಾರಿಗೆ ಬಸ್ ಚಾಲಕ, ನಿರ್ವಾಹಕರೂ ಒಳಗೊಂಡAತೆ ದ್ವಿಚಕ್ರ, ಚತುಷ್ಚಕ್ರ, ಗೂಡ್ಸ್ ವಾಹನ, ಲಾರಿ ನಿಲ್ಲಿಸಿ ಕಾಫಿ ನೀಡಲಾಯಿತು.
ಪ್ರಯಾಣಿಕರು ವಾಹನದಿಂದ ಇಳಿದು ಬಂದು ಕಾಫಿ ಹಾಗೂ ತಿಂಡಿ ಸ್ವೀಕರಿಸಿ ಸಂಭ್ರಮಿಸಿದರು. ಸುಮಾರು ೪೦೦ಕ್ಕೂ ಅಧಿಕ ಕಾಫಿ ವಿತರಿಸಲಾಯಿತು. ಮೋಡ ಕವಿದ ವಾತಾವರಣ, ತುಂತುರು ಮಳೆ ನಡುವೆ ಕಾಫಿ ಸವಿದರು.
ಮಾಜಿ ಎಂಎಲ್ಸಿ ಅರುಣ್ ಮಾಚಯ್ಯ, ರೋಟರಿ ಕ್ಲಬ್ ಅಧ್ಯಕ್ಷೆ ನೀತಾ ಕಾವೇರಮ್ಮ, ರೋಟರಿ ವಲಯ ಮುಖ್ಯಸ್ಥೆ ರೀಟಾ ದೇಚಮ್ಮ, ಕಾರ್ಯದರ್ಶಿ ಸುಭಾಷಿಣಿ, ಪ್ರಮುಖರಾದ ಮೂಕಳೇರ ಬೀಟಾ, ಇಮ್ಮಿ ಉತ್ತಪ್ಪ, ಉಷಾ ರಾಜೀವ್, ರಾಧಾ ಅಚ್ಚಯ್ಯ, ಯಮುನಾ ಮಂದಣ್ಣ, ಗಂಗಾ ರೋಹಿಣಿ ಇದ್ದರು.