ಸುಂಟಿಕೊಪ್ಪ, ಅ. ೮: ಇಲ್ಲಿನ ಗದ್ದೆಹಳ್ಳದ ವಿಕಾಸ್ ಜನಾಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ವಿಕಾಸ್ ಜನಸೇವಾ ಟ್ರಸ್ಟ್ ಜೀವನದಾರಿ ಅನಾಥ ಆಶ್ರಮದ ಅಧ್ಯಕ್ಷ ರಮೇಶ ವಹಿಸಿದ್ದರು. ಸಮಾರಂಭದಲ್ಲಿ ಹಿರಿಯ ನಾಗÀರಿಕರು ಹಾಗೂ ವಿಕಲಚೇತನ ಸಬಲೀಕರಣ ಇಲಾಖೆಯ ಕೊಡಗು ಜಿಲ್ಲಾ ಅದಿsಕಾರಿ ವಿಮಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ ಹಿರಿಯ ನಾಗರಿಕರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಹಿರಿಯ ಜೀವಗಳನ್ನು ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಅವರಿಂದ ದೂರವಾಗಿ ಕೈಬಿಡುವುದು ಮನುಷ್ಯ ಕುಲಕ್ಕೆ ಮಾಡುವ ಅತಿ ದೊಡ್ಡ ಅಪಮಾನ. ಜೀವನಾದಾರಿ ಆಶ್ರಮ ಸರಕಾರದಿಂದ ಯಾವುದೇ ಅನುದಾನವಿಲ್ಲದೆ ಸ್ವಂತ ಖರ್ಚಿನಿಂದ ಹಾಗೂ ದಾನಿಗಳ ಸಹಾಯದಿಂದ ನಿರ್ಗತಿಕರನ್ನು ಗುರುತಿಸಿ ಆಶ್ರಯ ನೀಡುತ್ತಿರುವುದು ಶ್ಲಾಘನೀಯ ಎಂದರು. ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವಹೀದ್ ಜಾನ್ ಉದ್ಘಾಟಿಸಿದರು. ಸಮಾರಂಭದ ವೇದಿಕೆಯಲ್ಲಿ ಸರಕಾರಿ ಪ್ರೌಢಶಾಲಾ ಉಪ ಪ್ರಾಂಶುಪಾಲ ಬಾಲಕೃಷ್ಣ, ಶಿಕ್ಷಕ ಸೋಮಶೇಖರ್, ರಾಷ್ಟಿçÃಯ ಹಿರಿಯ ನಾಗರಿಕ ಸಂಘದ ಜಿಲ್ಲಾ ಸಂಚಾಲಕ ಭರತ್, ಸಂಗೀತ ಸೌಂಡ್ಸ್ ಮತ್ತು ಲೈಟಿಂಗ್ಸ್ ಮಾಲೀಕ ಕುಮರೇಶ್ ಮತ್ತು ವಿಕಲ ಚೇತನರ ಸಬಲೀಕರಣ ಇಲಾಖೆಯ ಪ್ರಥಮ ದರ್ಜೆ ಸಹಾಯಕ ರಾಜು ಕುಮಾರ್, ಆಶ್ರಮದ ಸಿಬ್ಬಂದಿ ಹಾಗೂ ಇಲಾಖೆಯ ಸಿಬ್ಬಂದಿಗಳಾದ ನವೀನ್, ರವಿ, ಶಿವಕುಮಾರ್, ಶಾಲಾ ವಿದ್ಯಾರ್ಥಿಗಳು, ಆಶ್ರಮದ ಹಿರಿಯರು, ಸಾರ್ವಜನಿಕರು ಹಾಜರಿದ್ದರು. ಈ ಸಮಾರಂಭದಲ್ಲಿ ಹಿರಿಯರಾದ ವಿಕಾಸ್ ಜನಾಸೇವಾ ಟ್ರಸ್ಟ್ನ ಗೌರವ ಅಧ್ಯಕ್ಷೆÀ ರಾಣಿ ಮಾಚಯ್ಯ. ಹಾಗೂ ಮತ್ತೊಬ್ಬ ಹಿರಿಯರಾದ ನಾಗಚೆಟ್ಟಿರÀ ಬೊಳ್ಳಮ್ಮ ಅವರನ್ನು ಆಶ್ರಮದ ವತಿಯಿಂದ ಸನ್ಮಾನಿಸಲಾಯಿತು.