ಮಡಿಕೇರಿ, ಅ. ೬: ಪೊಲೀಸರ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿರುವ ವೀರಾಜಪೇಟೆ ಚಿಕ್ಕಪೇಟೆ ನಿವಾಸಿ ರಾಯ್ ಡಿಸೋಜ ಪ್ರಕರಣದ ವರದಿಯನ್ನು ರಾಷ್ಟಿçÃಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲು ವಿಳಂಬವಾಗಿರುವ ಕಾರಣ, ನವೆಂಬರ್ ೧೧ ರೊಳಗೆ ವರದಿ ನೀಡದಿದ್ದರೆ, ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ-೧೯೯೩ ಸೆಕ್ಷನ್ ೧೩ ರ ಪ್ರಕಾರ ಕ್ರಮ ವಹಿಸಲಾಗುವುದಾಗಿ ಆಯೋಗವು ಜಿಲ್ಲಾ ಅಧೀಕ್ಷಕಿಗೆ ಸೂಚಿಸಿದೆ.
ಜೂನ್ ೯ರ ಮಧ್ಯರಾತ್ರಿ ವೀರಾಜಪೇಟೆ ಚಿಕ್ಕಪೇಟೆ ನಿವಾಸಿ ಮಾನಸಿಕ ಅಸ್ವಸ್ಥ ರಾಯ್ ಡಿಸೋಜ (೫೦) ಹಲ್ಲೆಗೊಳಗಾಗಿ ಜೂನ್ ೧೨ ರಂದು ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ರಾತ್ರಿ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆತ ಸಾವನ್ನಪ್ಪಿದ್ದರೆಂದು ಪ್ರತಿಭಟನೆಗಳು ನಡೆದಿದ್ದವು.
ಈ ಸಂಬAಧ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿ ಜೂನ್ ೧೩ ರಂದು ರಾಷ್ಟಿçÃಯ ಮಾನವ ಹಕ್ಕು ನಿಯೋಗಕ್ಕೆ ಮಾಹಿತಿ ನೀಡಿದ್ದರು. ಜೂನ್ ೯ ರ ಮಧ್ಯರಾತ್ರಿ ಕತ್ತಿಯಿಂದ ಸಾರ್ವಜನಿಕರಿಗೆ ಬೆದÀರಿಸುತ್ತಿದ್ದ ಕಾರಣ, ರಾಯ್ ಡಿಸೋಜ ಅವರನ್ನು ವೀರಾಜಪೇಟೆ ಪೊಲೀಸ್ ಠಾಣೆಗೆ ಕರೆತರಲಾಯಿತು. ಇದಾದ ಬಳಿಕ ಅವರ ತಾಯಿಗೆ ಇದರ ಮಾಹಿತಿ ನೀಡಲಾಗಿ ರಾಯ್ ಅವರನ್ನು ಮನೆಗೆ ಕಳಿಸಿಕೊಡಲಾಯಿತು. ಜೂನ್ ೧೦ ರಂದು ರಾಯ್ ಅವರ ತಾಯಿ, ತಮ್ಮ ಮಗ ಅಪರಿಚಿತರಿಂದ
(ಮೊದಲ ಪುಟದಿಂದ) ಹಲ್ಲೆಗೊಳಗಾಗಿರುವುದಾಗಿ ಪೊಲೀಸ್ ದೂರು ನೀಡಿದ್ದರು ಎಂಬುದನ್ನು ಈ ಮಾಹಿತಿಯಲ್ಲಿ ಅಧೀಕ್ಷಕಿ ಉಲ್ಲೇಖಿಸಿದ್ದರು.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ರಾಯ್, ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ೧೨ ರಂದು ಬೆಳಿಗ್ಗೆ ಮೃತಪಟ್ಟಿದ್ದು, ಅವರ ಸಹೋದರ ರಾಬಿನ್ ಡಿಸೋಜ ಅವರು, ವೀರಾಜಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿಯಿAದ ಹಲ್ಲೆಗೊಳಗಾಗಿಯೇ ರಾಯ್ ಸಾವನ್ನಪಿರುವುದಾಗಿ ಪೊಲೀಸ್ ಅಧೀಕ್ಷಕಿಗೆ ದೂರು ನೀಡಿದ್ದರು.
ಈ ಪ್ರಕರಣ ಸಂಬAಧ ಮಾನವ ಹಕ್ಕು ಆಯೋಗವು ೬ ವಾರಗಳ ಒಳಗಾಗಿ ವರದಿ ನೀಡುವಂತೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕಿಗೆ ಜೂನ್ ೨೩ ರಂದು ಸೂಚಿಸಿತ್ತು. ಆಯೋಗಕ್ಕೆ ಅಧೀಕ್ಷಕಿ ವರದಿ ಸಲ್ಲಿಸದ ಹಿನ್ನೆಲೆ ಆಗಸ್ಟ್ ೨೩ ರಂದು ಮತ್ತೆ ವರದಿ ನೀಡುವಂತೆ ಸೂಚಿಸಿ ಸೆಪ್ಟೆಂಬರ್ ೨೩ ರವರೆಗೆ ಸಮಯ ನೀಡಿತ್ತು.
ಆದರೆ ಇನ್ನೂ ವರದಿ ನೀಡದೆ ಇರುವ ಕಾರಣ ಆಯೋಗವು ಜಿಲ್ಲಾ ಅಧೀಕ್ಷಕಿಗೆ ಕೊನೆಯ ಅವಕಾಶವನ್ನು ಅಕ್ಟೋಬರ್ ೪ ರಂದು ನೀಡಿದ್ದು, ನವೆಂಬರ್ ೧೧ ರ ಒಳಗಾಗಿ ವರದಿ ನೀಡುವಂತೆ ಸೂಚಿಸಿದೆ. ತಪ್ಪಿದಲ್ಲಿ, ಮಾನವ ಹಕ್ಕುಗಳ ರಕ್ಷಣಾ ಕಾಯ್ದೆ-೧೯೯೩ ಸೆಕ್ಷನ್ ೧೩ರ ಪ್ರಕಾರ ಬಲವಂತವಾಗಿ ಕ್ರಮ ವಹಿಸಲಾಗುವುದಾಗಿ ಜಸ್ಟಿಸ್ ಅರುಣ್ ಕುಮಾರ್ ಮಿಶ್ರಾ ಅವರು ನೋಟೀಸ್ ನೀಡಿದ್ದಾರೆ.