ಮಡಿಕೇರಿ, ಅ. ೫ : ಅ. ೧೭ರಂದು ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ನಿರ್ಬಂಧ ಹೇರಿರುವ ಕ್ರಮಕ್ಕೆ ಜಿಲ್ಲೆಯಲ್ಲಿ ಕಾವೇರಿ ಭಕ್ತರಿಂದ ತೀವ್ರ ವಿರೋಧ ಮುಂದುವರಿದಿದೆ.

ಫೆಡರೇಶನ್ ಆಫ್ ಕೊಡವ ಸಮಾಜ

ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅ.೧೭ ರಂದು ನಡೆಯುವ ತೀರ್ಥೋದ್ಭವದ ಸಂದರ್ಭ ಘರ್ಷಣೆಗೆ ಅವಕಾಶ ನೀಡದೆ ಶಾಂತಿಯುತವಾಗಿ ಪವಿತ್ರ ಕ್ಷೇತ್ರದ ದರ್ಶನಕ್ಕೆ ಕೊಡಗಿನ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸುವಂತೆ ಫೆಡರೇಷನ್ ಆಫ್ ಕೊಡವ ಸಮಾಜದ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ತಲಕಾವೇರಿಯಲ್ಲಿ ಪ್ರವಾಸಿಗರಿಗೆ ಕಡಿವಾಣ ಹಾಕಿ ಕೊಡಗಿನ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕು, ಒಂದು ವೇಳೆ ಭಕ್ತರಿಗೆ ನಿರ್ಬಂಧ ಹೇರಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ರೀತಿ ಸಚಿವರು ಹೇಳಿಕೆ ನೀಡುವಾಗ ಶಾಸಕರು ಮೌನಕ್ಕೆ ಶರಣಾಗಿರುವುದು ಸರಿಯಾದ ಕ್ರಮವಲ್ಲ. ಕಾವೇರಿಮಾತೆ ನಮ್ಮ ಕುಲದೇವತೆಯಾಗಿದ್ದು, ಕೊಡಗಿನ ಆರಾಧ್ಯ ದೇವಿಯಾಗಿ ದ್ದಾಳೆ. ತುಲಾಸಂಕ್ರಮಣದಲ್ಲಿ ಪಿಂಡ ಪ್ರಧಾನ ಮತ್ತು ವಿವಿಧ ಧಾರ್ಮಿಕ ವಿಧಿ ವಿಧಾನಗಳನ್ನು ಮಾಡುವುದು ಕೊಡವರ ಆಚಾರವಾಗಿದೆ. ಇದಕ್ಕೆ ಯಾರೂ ಅಡ್ಡಿಪಡಿಸದೆ ತೀರ್ಥರೂಪಿಣಿಯಾಗಿ ದರ್ಶನ ನೀಡುವ ಕಾವೇರಿ ತಾಯಿಯನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ತೀರ್ಥೋದ್ಭವದ ಸಂದರ್ಭ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ವಯಸ್ಕರು ಹಾಗೂ ಮಕ್ಕಳು ಕೂಡ ಆಗಮಿಸಲಿದ್ದು, ಕಾಲ್ನಡಿಗೆಯ ಮೂಲಕ ತೆರಳಲು ಅಸಾಧ್ಯವಾಗಿದೆ. ಆದ್ದರಿಂದ ತಲಕಾವೇರಿಯವರೆಗೆ ವಾಹನದಲ್ಲಿ ಸಾಗಲು ಅವಕಾಶ ನೀಡಬೇಕೆಂದು ವಿಷ್ಣುಕಾರ್ಯಪ್ಪ ಕೋರಿದ್ದಾರೆ.

ಮಡಿಕೇರಿ ಕೊಡವ ಸಮಾಜ

ವರ್ಷಕ್ಕೊಂದಾವರ್ತಿ ಕೊಡಗಿನ ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ಆವಿರ್ಭವಿಸಿ ಭಕ್ತಾದಿಗಳನ್ನು ಪುನೀತರ ನ್ನಾಗಿಸುವ ದಿನದಂದು ತಲಕಾವೇರಿಗೆ ತೆರಳುವ ಭಕ್ತಾದಿಗಳಿಗೆ ಅರ್ಥಹೀನ ನಿರ್ಬಂಧಗಳನ್ನು ವಿಧಿಸಿರುವ ಉಸ್ತುವಾರಿ ಸಚಿವರ, ಶಾಸಕರುಗಳ ಕ್ರಮವನ್ನು ಮಡಿಕೇರಿ ಕೊಡವ ಸಮಾಜ ಖಂಡಿಸುತ್ತದೆ ಎಂದು ಹೇಳಿಕೆ ನೀಡಲಾಗಿದೆ.

ರಾಜಕೀಯ ಸಭೆ ಸಮಾರಂಭಗಳಿಗೆ ಇಲ್ಲದ ಕಟ್ಟುಪಾಡುಗಳು ನಿರ್ಬಂಧಗಳನ್ನು ಕೋವಿಡ್-೧೯ ನೆಪದಲ್ಲಿ ಭಕ್ತರ ಮೇಲೆ ಹೇರಿ ಸಂಪ್ರದಾಯವನ್ನು ಹತ್ತಿಕ್ಕುವ ಕ್ರಮ ಸರಿಯಲ್ಲ ಇದು ಪ್ರಶ್ನಾರ್ಹವಾಗಿದೆ. ಜಿಲ್ಲೆಯ ಭಕ್ತಾದಿಗಳ ಭಾವನೆಗಳಿಗೆ ಧಕ್ಕೆ ಬರುವಂತೆ ಅಧಿಕಾರಯುತ ಆದೇಶ ನೀಡುವ ಬದಲು ಸಮಯೋಜಿತ ಪರ್ಯಾಯ ಮಾರ್ಗಗಳೊಂದಿಗೆ ತುಲಾ ಸಂಕ್ರಮಣ ಆಚರಣೆಗೆ ಅವಕಾಶ ಮಾಡಿಕೊಡಲು

(ಮೊದಲ ಪುಟದಿಂದ) ಮಡಿಕೇರಿ ಕೊಡವ ಸಮಾಜ ಒತ್ತಾಯಿಸಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

ಅವಕಾಶಕ್ಕೆ ಜೆಡಿಎಸ್ ಆಗ್ರಹ

ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ದರ್ಶನ ನೀಡಲಿರುವ ಮಾತೆ ಕಾವೇರಿಯ ದರ್ಶನಕ್ಕೆ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಬೇಕೆಂದು ಕೊಡಗು ಜಿಲ್ಲಾ ಜಾತ್ಯತೀತ ಜನತದಾಳ ಆಗ್ರಹಿಸಿದೆ.

ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಕೊರೊನಾ ಸಂದರ್ಭದಲ್ಲಿ ಹತ್ತು ಹಲವಾರು ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿ; ಧಾರ್ಮಿಕ ಕಾರ್ಯಕ್ಕೆ ಮಾತ್ರ ನರ್ಬಂಧಗಳನ್ನು ವಿಧಿಸುವ ಸರ್ಕಾರದ ಕ್ರಮವನ್ನು ಜೆಡಿಎಸ್ ಖಂಡಿಸುತ್ತದೆ ಎಂದು ಹೇಳಿದರು. ಮಾತೆ ಕಾವೇರಿಯ ಮಹಿಮೆಯ ಬಗ್ಗೆ ಉಸ್ತುವಾರಿ ಸಚಿವರಿಗೆ, ಅಧಿಕಾರಿ ವರ್ಗಕ್ಕೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಜಿಲ್ಲೆಯ ಶಾಸಕರುಗಳು ಮಾಡಬೇಕಿತ್ತು.

ಕೊಡಗಿನ ಜನರ ಭಾವನೆಗೆ ಧಕ್ಕೆ ತರುವ ಕೆಲಸವನ್ನು ಸರ್ಕಾರ ಮಾಡಲು ಹೊರಟಿರುವುದು ಸರಿಯಲ್ಲ. ತಾ. ೧೭ರಂದು ಎಲ್ಲರಿಗೂ ಮಾತೆ ಕಾವೇರಿಯ ದರ್ಶನಕ್ಕೆ ಅವಕಾಶ ನೀಡಬೇಕು. ಇಲ್ಲವಾದರೆ ನಾವೆಲ್ಲರೂ ಒಟ್ಟಾಗಿ ನುಗ್ಗುತ್ತೇವೆ. ಕೊರೊನಾ ನೆಪವೊಡ್ಡಿ ಜನರ ಧಾರ್ಮಿಕ ಭಾವನೆ ಜೊತೆ ಆಟವಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಗಣೇಶ್ ಹೇಳಿದರು.

ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಸೂದನ ಈರಪ್ಪ ಮಾತನಾಡಿ ಕೊರೊನಾ ಹಿನ್ನೆಲೆಯಲ್ಲಿ ತೀರ್ಥಸ್ನಾನಕ್ಕೆ ನಿರ್ಬಂಧ ಹೇರಲಿ. ಆದರೆ ಮಾತೆಯ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡುವಂತಾಗಲಿ ಎಂದು ಒತ್ತಾಯಿಸಿದರು.

ಮಡಿಕೇರಿ ದಸರಾ ಕುರಿತು ಮಾತನಾಡಿದ ಗಣೇಶ್ ಸರಳ ದಸರಾ ಹಿನ್ನೆಲೆಯಲ್ಲಿ ಘೋಷಣೆಯಾಗಿದ್ದ ೧ ಕೋಟಿ ಅನುದಾನದಲ್ಲಿ ಮಂಟಪಗಳಿಗೆ ತಲಾ ರೂ. ೩ ಲಕ್ಷ, ಕರಗಗಳಿಗೆ ತಲಾ ರೂ. ೨ ಲಕ್ಷ ಅನುದಾನ ನೀಡುವಂತಾಗಲಿ ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಸಂಜು ಕಾವೇರಪ್ಪ, ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ರವಿಕುಮಾರ್, ಕಾರ್ಯದರ್ಶಿ ಮನು ಉಪಸ್ಥಿತರಿದ್ದರು.

ಕೊಡವ ಸಂಘಗಳ ಒಕ್ಕೂಟ

ವೀರಾಜಪೇಟೆ : ಪವಿತ್ರ ಕಾವೇರಿ ತೀರ್ಥೊದ್ಭವದ ದಿನದಂದು ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತೆಗೆದುಕೊಂಡಿರುವ ನಿರ್ಧಾರ ಹಾಸ್ಯಸ್ಪದ ಹಾಗೂ ಖಂಡನೀಯ ಎಂದು ವೀರಾಜಪೇಟೆ ಕೊಡವ ಸಂಘಗಳ ಒಕ್ಕೂಟದ ಅಧ್ಯಕ್ಷ ಮೇಕೆರಿರ ರವಿ ಪೆಮ್ಮಯ್ಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾವೇರಿ ಕೊಡವರ ಕುಲದೇವಿ, ಆರಾಧ್ಯದೇವ, ಅದು ಕೊಡವರು ಹಾಗೂ ಕೊಡವ ಭಾಷಿಕರ ಭಾವನಾತ್ಮಕ ಸಂಬAಧ ಹೊಂದಿದ ಹಬ್ಬವಾಗಿದೆ. ವರ್ಷಕ್ಕೆ ಒಂದು ಬಾರಿ ಮಾತ್ರ ಪವಿತ್ರ ತೀರ್ಥ ಉದ್ಬವ ಆಗುವುದರಿಂದ ಭಕ್ತರು ತಮ್ಮ ಇಷ್ಟಾರ್ಥ ಸೇವೆಗಳನ್ನು ನಡೆಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಎಷ್ಟರ ಮಟ್ಟಿಗೆ ಸರಿ.? ಅಲ್ಲದೆ ತಲಕಾವೇರಿಗೆ ೮ ಕಿ.ಮಿ ಕಾಲ್ನಡಿಗೆಯಲ್ಲಿ ತೆರಳಬೇಕು ಎಂಬ ನಿರ್ಧಾರ ಇದು ಜಿಲ್ಲಾಡಳಿತದ ತುಘಲಕ್ ದರ್ಬಾರಿನಂತಿದೆ. ಆದೇಶ ಹೊರಡಿಸಿರುವ ಜಿಲ್ಲಾಡಳಿತ ನಮ್ಮೊಂದಿಗೆ ಕಾಲ್ನಡಿಗೆಯಲ್ಲಿ ಭಾಗವಹಿಸುತ್ತಾರೆಯೆ? ಎಂದು ಪ್ರಶ್ನಿಸಿದ ಅವರು ಕೊಡವರಿಗೆ ತಲಕಾವೇರಿ ಬಿಟ್ಟರೆ ಬೇರೆ ಯಾವುದೇ ತೀರ್ಥಕ್ಷೇತ್ರ ಇಲ್ಲ. ಕೊಡವ ಸಂಪ್ರದಾಯದಲ್ಲಿ ಮದುವೆ ಆದ ನವದಂಪತಿಗಳು ಕಾವೇರಿಗೆ ತೆರಳಿ ಪೂಜೆ ಸಲ್ಲಿಸಿ ತಾಯಿ ಆಶೀರ್ವಾದ ಪಡೆದುಕೊಳ್ಳುತ್ತಾರೆ. ಅದೇ ರೀತಿ ಕೊಡವ ಕುಟುಂಬದಲ್ಲಿ ಯಾರಾದರು ಮೃತ ಪಟ್ಟಲ್ಲಿ ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಪಿಂಡ ಪ್ರದಾನ ಮಾಡಲು ತಲಕಾವೇರಿ ತೆರಳುತ್ತಾರೆ. ಕಾವೇರಿ ಜಾತ್ರೆಯಂದು ಹಲವಾರು ಭಕ್ತರು ಪಿಂಡ ಪ್ರದಾನ ಮಾಡುತ್ತಾರೆ. ಇಂತಹ ಭಾವನಾತ್ಮಕ ಸಂಬAಧಗಳನ್ನು ಒಡೆದು ಹಾಕಲು ಜಿಲ್ಲಾಡಳಿತ ಚಿಂತಿಸುತ್ತಿದೆ ಎಂದರು.

ಒಕ್ಕೂಟದ ಸಲಹೆಗಾರ ಮಾದಂಡ ಪೂವಯ್ಯ ಮಾತನಾಡಿ ಎಲ್ಲ ಮೂಲ ನಿವಾಸಿಗಳು ಕಾವೇರಿ ಮಾತೆಯನ್ನು ಕುಲದೇವತೆ ಎಂದು ತಲೆತಲಾಂತರದಿAದ ಆರಾಧಿಸುತ್ತಾರೆ. ತೀರ್ಥ ಉದ್ಬವ ಸಂದರ್ಭ ಜಿಲ್ಲಾಡಳಿತ ನಿರ್ಬಂಧ ಹೇರಿರುವುದು ಅಘೋಷಿತ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ. ಈ ನಿರ್ಬಂಧಕ್ಕೆ ಜಿಲ್ಲೆ ಎಲ್ಲಾ ಜನ ಪ್ರತಿನಿಧಿಗಳು ಹೊಣೆಯಾಗುತ್ತಾರೆ ಎಂದು ಹೇಳಿದರು.

ಕಾರ್ಯದರ್ಶಿ ಬಾಚಿರ ಜಗದೀಶ್ ಮಾತನಾಡಿ ಕೊಡಗಿನ ತೀರ್ಥ ಕ್ಷೇತ್ರಗಳಲ್ಲಿ ಪ್ರವಾಸಿಗರ ದಂಡು ಹೆಚ್ಚಾಗುತ್ತಿದೆ. ಕೋವಿಡ್ ಇರುವ ಕಾರಣ ತೀರ್ಥ ಬರುವ ಸಂದರ್ಭ ಪ್ರವಾಸಿಗರನ್ನು ನಿರ್ಬಂಧಿಸಿ ಸ್ಥಳೀಯರಿಗೆ ಆದ್ಯತೆ ನೀಡಿ ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸುವಂತಾಗಬೇಕು ಎಂದು ಹೇಳಿದರು.

ಗೋಷ್ಠಿಯಲ್ಲಿ ನಿರ್ದೇಶಕ ಪಟ್ಟಡ ಮನು ರಾಮಚಂದ್ರ ಉಪಸ್ಥಿತರಿದ್ದರು.

ಕೊಡಗು ಹಕ್ಕು ಸಂರಕ್ಷಣಾ ಸಮಿತಿ

ನಾಪೋಕ್ಲು: ಕೊಡಗಿನ ಜನರ ಭಾವನೆಗಳಿಗೆ ಪದೇಪದೇ ಧಕ್ಕೆ ತಂದಲ್ಲಿ ಹಾಗೂ ಸ್ಥಳೀಯರನ್ನು ಕೆಣಕುತ್ತಾ ಬಂದಲ್ಲಿ ಮುಂದೆ ಜಿಲ್ಲೆಯ ಎಲ್ಲಾ ಜನರು ಒಗ್ಗಟ್ಟಾಗಿ ಜಾತಿ ಮತಬೇಧ ಮರೆತು ಕೊಡಗು ಪ್ರತ್ಯೇಕ ರಾಜ್ಯದ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸಲಾಗುವುದು ಎಂದು ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಸಂಚಾಲಕ ಬಿದ್ದಾಟಂಡ ರೋಜಿ ಚಿಣ್ಣಪ್ಪ ಎಚ್ಚರಿಕೆಯಿತ್ತಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಬಂಧ ಹೇರಿರುವುದನ್ನು ಖಂಡಿಸಿರುವ ಅವರು ಕೊರೊನಾ ನೆಪವೊಡ್ಡಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಅಡ್ಡಿಯುಂಟು ಮಾಡುತ್ತಿರುವುದು ಸರಿಯಲ್ಲ. ಭಾಗಮಂಡಲ ಸೇರಿದಂತೆ ಮಡಿಕೇರಿಯ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆಯೇ ಇದೆ. ನಾಪೋಕ್ಲು ಸಂತೆ ಮಾರುಕಟ್ಟೆಯಲ್ಲೂ ಜನದಟ್ಟಣೆ ಇದ್ದು ಅಲ್ಲಿ ಒಟ್ಟು ಗೂಡುವ ಮಂದಿಗೆ ಕೊರೊನ ಬಾರದೆ ಕೇವಲ ತೀರ್ಥೋದ್ಭವದ ವೇಳೆ ಆಗಮಿಸುವ ಭಕ್ತರಿಂದ ಕೊರೊನಾ ಉಲ್ಬಣಿಸಲಿದೆಯೇ? ಎಂದು ಪ್ರಶ್ನಿಸಿದ್ದಾರೆ. ನಿರ್ಬಂಧ ಹೇರುವ ಮೂಲಕ ಜಿಲ್ಲಾಡಳಿತ ಅವಿವೇಕಿತನ ಪ್ರದರ್ಶಿಸಿದೆ. ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇವೆ. ಈ ಬಾರಿ ಭಕ್ತರು ತೀರ್ಥೋದ್ಭವದ ವೀಕ್ಷಣೆಗೆ ತಪ್ಪದೆ ತೆರಳಲಿದ್ದಾರೆ ಎಂದರು. ಕೊಡಗು ಹಕ್ಕು ಸಂರಕ್ಷಣಾ ಸಮಿತಿಯೂ ಕೂಡ ರಥಯಾತ್ರೆಯನ್ನು ತಪ್ಪದೇ ಕೈಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಳೆಯಂಡ ಸಾಬತಿಮ್ಮಯ್ಯ, ಚೋಕಿರ ಸುಧಿ ಅಪ್ಪಯ್ಯ, ಎಳ್ತಂಡ ಭೀಮಯ್ಯ, ಬೊಳ್ಯಪಂಡ ಹರೀಶ್, ಇದ್ದರು.

ಸರಿತಾ ಪೂಣಚ್ಚ ಆಕ್ರೋಶ

ಮಡಿಕೇರಿ : ಇದೀಗ ಮತ್ತೆ ತಲಕಾವೇರಿ ಕ್ಷೇತ್ರಕ್ಕೆ ನಿರ್ಬಂಧ ಹೇರುವ ಮೂಲಕ ಕುಲದೇವತೆ ಕಾವೇರಿಯನ್ನು ಆರಾಧಿಸುವವರನ್ನ ಕೆರಳಿಸುವಂತಾಗಿದ್ದು ತಲಕಾವೇರಿ ಕ್ಷೇತ್ರ ಬಿಜೆಪಿಯ ಸ್ವತ್ತಲ್ಲ ಎಂದು ಕೊಡಗು ಕಾಂಗ್ರೆಸ್ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಟೀಕಿಸಿದ್ದಾರೆ.

ತುಲಾ ಸಂಕ್ರಮಣದ ದಿನ ತಲಕಾವೇರಿಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರುವ ಮೂಲಕ ಭಕ್ತರಿಗೆ ತಡೆಯೊಡ್ಡುವ ಕೆಲಸ ನಡೆಯುತ್ತಿದೆ.. ಕೆಲವರ ಹಿತಾಸಕ್ತಿಗಾಗಿ ಧಾರ್ಮಿಕ ಕೇಂದ್ರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಜಿಲ್ಲೆಯ ಆಚಾರ ವಿಚಾರ ಸಂಸ್ಕೃತಿಯನ್ನು ತಿಳಿಯದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳನ್ನು ಮುಂದಿಟ್ಟು ಭಕ್ತರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡದೆ.

ಧಾರ್ಮಿಕ ಕಾರ್ಯಗಳು ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಕನೆಕ್ಟಿಂಗ್ ಕೊಡವಾಸ್

ಜಿಲ್ಲಾಡಳಿತ ಕಾವೇರಿ ಮಾತೆಯ ಕ್ಷೇತ್ರವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಪರಿಗಣಿಸಿ ಇದುವರೆಗೆ ಬಂದ ಪ್ರವಾಸಿಗರಿಗೆ ಕೋವಿಡ್ ನಿಯಮಾವಳಿಯ ನೆಗೆಟಿವ್ ಪ್ರಮಾಣಪತ್ರ ಯಾವುದನ್ನು ಕೇಳುತ್ತಿಲ್ಲ. ದಿನಂಪ್ರತಿ ಬರುವ ಸಾವಿರಾರು ಪ್ರವಾಸಿಗರಿಗೆ ಕ್ಷೇತ್ರ ದರ್ಶನಕ್ಕೆ ನೇರ ಅನುಮತಿಯನ್ನು ನೀಡುತ್ತಿದ್ದಾರೆ. ಹಾಗೆಯೇ ಜಿಲ್ಲೆಯಲ್ಲಿ ಬೇರೆ ಧರ್ಮದ ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿದೆ. ಇದುವರೆಗೂ ಅಲ್ಲಿ ಯಾರಿಗೂ ಕೋವಿಡ್ ನಿಯಮದ ಪ್ರಕಾರ ಪ್ರಮಾಣಪತ್ರವನ್ನು ಪಡೆದುಕೊಂಡು ಪ್ರಾರ್ಥನೆ ಸಲ್ಲಿಸುವಂತೆ ನಿರ್ಬಂಧ ಜಿಲ್ಲಾಡಳಿತ ಹೇರಿಲ್ಲ. ಹಾಗಿದ್ದರೂ ಕಾವೇರಿ ಮಾತೆಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಅಡೆ-ತಡೆ ಏತಕ್ಕೆ? ಕಾಣದ ಕೈಗಳ ಹಸ್ತಕ್ಷೇಪವೇ ಎಂಬ ಅನುಮಾನ ಮೂಡುತ್ತಿದೆ. ಈ ಹಿನ್ನೆಲೆಯಲ್ಲಿ ಬರುವ ಅಕ್ಟೋಬರ್ ೧೭ರಂದು ನಮಗೆ ದರ್ಶನ ನೀಡಲು ಬರುತ್ತಿರುವ ನಮ್ಮ ಕಾವೇರಿ ಮಾತೆಯನ್ನು ಕಣ್ತುಂಬಿಕೊಳ್ಳಲು ನಾವೆಲ್ಲ ಭಕ್ತಾದಿಗಳು ಕಾತುರರಾಗಿದ್ದೇವೆ. ಇದಕ್ಕೆ ಈಗಾಗಲೇ ಜಿಲ್ಲಾಡಳಿತದಿಂದ ಕೆಲವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಭಕ್ತರು ಬರುವವರಿಗೆ, ಈ ಸಲ ನಿಯೋಜನೆ ಯಾಗುವ ಪೊಲೀಸ್ ಭದ್ರತಾಪಡೆ ಸಂಖ್ಯೆ ೨೦೦೦ದಿಂದ ೩೦೦೦ ಇದ್ದರೂ ಭಕ್ತಾದಿಗಳಾದ ನಾವು ತಾಯಿಯ ದರ್ಶನಕ್ಕೆ ಹೋಗಿಯೇ ತೀರುತ್ತೇವೆ ಎಂದು ಈ ಮೂಲಕ ತಿಳಿಸುತ್ತಿದ್ದೇವೆ. ಕೇವಲ ತಾಯಿಯನ್ನು ನೋಡಲು ಬರುವ ಭಕ್ತರಿಗೆ ನಿಯಮಾವಳಿಯನ್ನು ವಿಧಿಸಿ, ಉಳಿದ ಶಾಸಕರು, ಸರಕಾರಿ ಅಧಿಕಾರಿಗಳು, ಪೊಲೀಸ್ ಭದ್ರತಾ ಪಡೆಗೆ ಕೋವಿಡ್ ನಿಯಮಾವಳಿಯ ಸಡಿಲಿಕೆಯನ್ನು ಜಿಲ್ಲಾಡಳಿತ ನೀಡುತ್ತದೆಯೇ? ಹಾಗೊಂದು ವೇಳೆ ಕೇವಲ ಭಕ್ತರಿಗೆ ಮಾತ್ರ ಕೋವಿಡ್ ನಿಯಮಾವಳಿಯನ್ನು ವಿಧಿಸಿದರೆ, ತಾಯಿಯ ದರ್ಶನಕ್ಕೆ ಬರುವ ನಾವುಗಳು ಖಂಡಿತವಾಗಿಯೂ ಸರಕಾರಿ ಅಧಿಕಾರಿಗಳ ಬಳಿ ಕೋವಿಡ್ ನಿಯಮಾವಳಿಯ ಪ್ರಮಾಣಪತ್ರಗಳು ಇರುತ್ತದೆಯೇ ಎಂದು ಪರಿಶೀಲಿಸಬೇಕಾಗುತ್ತದೆ.

ಭಕ್ತರಾದ ನಮ್ಮನ್ನು ತಡೆಯಲು ಜಿಲ್ಲಾಡಳಿತ ಮುಂದಾದರೆ, ನಾವು ಯಾವುದೇ ಭದ್ರತಾ ಪಡೆಗೆ, ಅಧಿಕಾರಿಗಳಿಗೆ ಹೆದರದೆ ನಮ್ಮ ತಾಯಿಯ ದರ್ಶನಕ್ಕೆ ಹೋಗಿಯೇ ತೀರುತ್ತೇವೆ ಎಂದು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಕನೆಕ್ಟಿಂಗ್ ಕೊಡವಾಸ್ ಸಂಸ್ಥೆ ಎಚ್ಚರಿಕೆಯಿತ್ತಿದೆ.

*ಗೋಣಿಕೊಪ್ಪ : ಕಾವೇರಿ ತೀರ್ಥೋದ್ಬವದ ವಿಚಾರವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಕೊಡಗಿನ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನವಾಗಿದೆ ಎಂದು ಭಾರತೀಯ ಜನತಾ ಪಾರ್ಟಿ ವೀರಾಜಪೇಟೆ ಮಂಡಲದ ವಕ್ತಾರ ಕುಟ್ಟಂಡ ಅಜಿತ್ ಕರುಂಬಯ್ಯ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿಚಾರ ಪ್ರಸ್ತಾಪಿಸಿ ಅವರು ಮಾತನಾಡಿದರು. ಭಾರತೀಯ ಜನತಾ ಪಾರ್ಟಿಯು ಹಿಂದುಗಳ ಭಾವನೆಗೆ ದಕ್ಕೆಯಾಗುವಂತಹ ವಿಚಾರವನ್ನು ಖಂಡಿಸುತ್ತದೆ. ಅಲ್ಲದೇ ಬಿಜೆಪಿ ಸರ್ಕಾರವು ತಲಕಾವೇರಿಗೆ ಬರುವ ಭಕ್ತರ ಆಚರಣೆಗೆ ತೊಂದರೆಯಾಗದ ರೀತಿಯಲ್ಲಿ ನಿಭಾಯಿಸುತ್ತದೆ ಎಂದರು.

ಭಕ್ತರ ಭಾವನೆಗಳಿಗೆ ಧಕ್ಕೆಯಾಗದಂತೆ ಶಾಸಕರುಗಳು ನಡೆದುಕೊಳ್ಳುತ್ತಿದ್ದಾರೆ. ಹೊರಜಿಲ್ಲೆಯವರಾದರೂ ಉಸ್ತುವಾರಿ ಸಚಿವರು ತಲಕಾವೇರಿ ಕ್ಷೇತ್ರದ ಮೇಲೆ ಭಕ್ತಿಯನ್ನು ಹೊಂದಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವಂತಹ ಕಾವೇರಿ ತೀರ್ಥೋದ್ಬವ ಪೂರ್ವಭಾವಿ ಸಭೆಯಲ್ಲಿ ಕೊಡಗಿನ ಜನರ ಭಾವನೆಗೆ ಪೂರಕವಾದ ತೀರ್ಮಾನವನ್ನು ತೆಗೆದುಕೊಳ್ಳಲಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಗಳಿಗೆ ಜನರು ಗೊಂದಲಕ್ಕೊಳಗಾಬಾರದೆAದು ಈ ಸಂದರ್ಭ ತಿಳಿಸಿದ್ದಾರೆ.

ತಾಲೂಕು ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಪುಲಿಯಂಡ ಪೊನ್ನಣ್ಣ, ಕುಪ್ಪಂಡ ಗಿರಿಪೂವಣ್ಣ, ಚೆಪುö್ಪಡಿರ ಮಾಚಯ್ಯ, ಉಪಸ್ಥಿತರಿದ್ದರು.

ಮೂಲ ಸ್ವರೂಪ ರಕ್ಷಣಾ ವೇದಿಕೆ

ಮಡಿಕೇರಿ : ತೀರ್ಥೋದ್ಭವದ ಅ. ೧೭ ರಂದು ಕೊಡಗಿನ ಮೂಲ ನಿವಾಸಿಗಳ ಆರಾಧ್ಯ ದೇವಿ ಕಾವೇರಿ ಮಾತೆಯ ದರ್ಶನಕ್ಕೆ ಯಾವುದೇ ನಿರ್ಬಂಧ ಹೇರಬಾರದು. ಅಲ್ಲದೆ ತುಲಾಸಂಕ್ರಮಣದ ೧ ತಿಂಗಳು ಕೊಡಗಿನ ವಿವಿಧೆಡೆಯಿಂದ ಕ್ಷೇತ್ರಕ್ಕೆ ವಯೋವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಆಗಮಿಸುತ್ತಾರೆ. ಮೂಲನಿವಾಸಿ ಭಕ್ತರ ಹಿತದೃಷ್ಟಿಯಿಂದ ಯಾವುದೇ ನಿರ್ಬಂಧ ವಿಧಿಸದೆ ಕಾವೇರಿಮಾತೆಯ ದರ್ಶನಕ್ಕೆ ಮುಕ್ತ ಅವಕಾಶ ನೀಡಬೇಕು ಮತ್ತು ಕೋವಿಡ್ ಮುನ್ನೆಚ್ಚರಿಕಾ ಕ್ರಮವಾಗಿ ಒಂದು ತಿಂಗಳ ಕಾಲ ತಲಕಾವೇರಿ ಕ್ಷೇತ್ರವನ್ನು ಪ್ರವಾಸಿಗರಿಂದ ಮುಕ್ತಗೊಳಿಸಬೇಕೆಂದು ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆಯ ಕೊಕ್ಕಲೇರ ಕಾರ್ಯಪ್ಪ ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ವೇದಿಕೆ ಪ್ರಮುಖರು ಕುಲದೇವಿಯ ದರ್ಶನಕ್ಕೆ ಬರುವ ಸ್ಥಳೀಯ ಭಕ್ತಾದಿಗಳ ಭಾವನೆಗಳಿಗೆ ಮತ್ತು ಪರಂಪರೆಗೆ ಲೋಪವಾಗದಂತೆ ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.

ರಾಜಕೀಯಕ್ಕೆ ಬಳಸದಿರಿ

ದಕ್ಷಿಣದ ಗಂಗೆ, ಕೊಡಗಿನ ಆರಾಧ್ಯ ದೇವತೆ, ಕೊಡವರ ಕುಲದೇವತೆ ಎಂದು ಪೂಜಿಸಲ್ಪಡುತ್ತಿರುವ ತಾಯಿ ಕಾವೇರಿಯ ತೀರ್ಥೋದ್ಭವವನ್ನು ಯಾರೂ ರಾಜಕೀಯ ಅಸ್ತಿತ್ವಕ್ಕೆ ಬಳಸಿಕೊಳ್ಳದಿರಿ ಎಂದು ತೆನ್ನೀರಾ ಮೈನಾ ಸಲಹೆಯಿತ್ತಿದ್ದಾರೆ. ಬಿಜೆಪಿ ನಾಯಕರು ಬಯಲಾಟ ನಡೆಸಲು ಹೋಗಿ ತಮ್ಮ ಆಟ ಬಯಲಾದ ಮೇಲೆ ಮತ್ತೆ ಪುನಃ ಹೊಸ ಪ್ರಯೋಗಕ್ಕೆ ಮುಂದಾಗಿದೆ ಎಂದಿದ್ದಾರೆ.

ತಲಕಾವೇರಿಗೆ ವಾಹನ ಪ್ರವೇಶವಿಲ್ಲ. ಎಂಟು ಕಿ.ಮೀ. ನಡೆದುಕೊಂಡು ಹೋಗಬೇಕು, ೭೨ ಗಂಟೆಗಳ ಒಳಗಿನ ಕೋವಿಡ್ ಟೆಸ್ಟ್ ರಿಪೋರ್ಟ್ ಬೇಕು. ಇವೇ ಆ ಅವೈಜ್ಞಾನಿಕ ನಿರ್ಬಂಧಗಳು. ಸಹಜವಾಗಿ ಇವು ಕೊಡಗಿನ ಮೂಲ ನಿವಾಸಿಗಳು ಮತ್ತು ಕಾವೇರಿಯ ಭಕ್ತರ ಭಾವನೆಗಳನ್ನು ಕೆಣಕಿದೆ. ಸಂಘ ಸಂಸ್ಥೆಗಳಿAದ ಟೀಕಾಪ್ರಹಾರ ಹರಿದಿದೆ. ಕೊಡಗಿನ ಬಹುತೇಕ ಜನರು ಪಕ್ಷಾತೀತವಾಗಿ ಈ ನಿರ್ಧಾರವನ್ನು ಕಟುವಾಗಿ ಖಂಡಿಸಿದ್ದಾರೆ.

ತಲಕಾವೇರಿ ಎಲ್ಲಿದೆ, ಭಾಗಮಂಡಲ ಎಷ್ಟು ದೂರದಲ್ಲಿದೆ, ತೀರ್ಥೋದ್ಭವದ ಮಹಿಮೆ ಯಾವುದು. ಪತ್ತಲೋದಿ, ಬೊತ್ತು, ಕಣಿಪೂಜೆ ಇನ್ನಿತರ ಸಂಪ್ರದಾಯಗಳ ಅರಿವಿಲ್ಲದ ಉಸ್ತುವಾರಿ ಸಚಿವರನ್ನು ಹಾದಿ ತಪ್ಪಿಸಿದ್ದು ಯಾರು ಎಂಬುದು ಇಲ್ಲಿ ಉದ್ಭವವಾಗುವ ಮೂಲಭೂತ ಪ್ರಶ್ನೆ ಎಂದಿದ್ದಾರೆ.

*ಗೋಣಿಕೊಪ್ಪ : ಕಾವೇರಿ ತೀರ್ಥೊದ್ಭವದ ಸಂದರ್ಭ ತಾಯಿ ಕಾವೇರಿ ದರ್ಶನಕ್ಕೆ ಭಕ್ತಾಧಿಗಳು ಶ್ರದ್ಧಾಭಕ್ತಿಯಿಂದ ಭಾಗವಹಿಸುವ ಕಾರ್ಯಕ್ಕೆ ತಡೆ ಮಾಡಲು ಹೊರಟಿರುವ ಜಿಲ್ಲಾಡಳಿತ ಹಾಗೂ ಸರ್ಕಾರದ ಕ್ರಮಕ್ಕೆ ಟಿ.ಶೆಟ್ಟಿಗೇರಿಯ ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಾಂಡಮಾಡ ವಿಶ್ವನಾಥ್, ಉಪಾಧ್ಯಕ್ಷ ಮಾಣೀರ ವಿಜಯನಂಜಪ್ಪ ಹಾಗೂ ಕಾರ್ಯದರ್ಶಿ ಮನ್ನೇರ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಕಾವೇರಿ ತಾಯಿಯೊಂದಿಗೆ ಕೊಡಗಿನ ಭಕ್ತಾಧಿಗಳಿಗೆ ವಿಶೇಷ ರೀತಿಯ ಭಾವನಾತ್ಮಕ ಸಂಬAಧವಿದ್ದು, ಭಕ್ತಾಧಿಗಳ ಈ ಭಾವನೆಗೆ ದಕ್ಕೆ ತರುವುದು ಸರಿಯಲ್ಲ. ಪ್ರವಾಸಿಗಳ ದಂಡೇ ಕೊಡಗಿಗೆ ಬರುತ್ತಿದ್ದರೂ, ಯಾವುದೇ ನಿರ್ಬಂಧ ವಿಧಿಸದೇ ಕೇವಲ ಭಕ್ತಾಧಿಗಳನ್ನು ತಲಕಾವೇರಿಗೆ ಹೋಗಲು ಬಿಡದೆ ನಿರ್ಬಂಧಿಸುವ ಕ್ರಮ ಕೈಗೊಳ್ಳುತ್ತಿರುವುದು ಅವೈಜ್ಞಾನಿಕವಾಗಿರುತ್ತದೆ. ಕೋವಿಡ್ ೧೯ನ್ನು ನೆಪವಾಗಿಟ್ಟುಕೊಂಡು ಪ್ರವಾಸಿಗರಿಗೆ ನಿರ್ಬಂಧ ಹೇರದೇ, ಭಕ್ತಾಧಿಗಳಿಗೆ ನಿರ್ಬಂಧ ವಿಧಿಸುತ್ತಿರುವುದು ಸರಿಯಾದ ಕ್ರಮವಲ್ಲ.

ಸೋಮವಾರಪೇಟೆ ಕೊಡವ ಸಮಾಜ

ಸೋಮವಾರಪೇಟೆ : ಕಾವೇರಿ ಕೊಡವರ ಕುಲಮಾತೆಯಾಗಿದ್ದು, ಇಲ್ಲಿಯ ಜನತೆಯ ಅತ್ಯಂತ ಸೂಕ್ಷö್ಮ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿರುವ ಜಿಲ್ಲಾಡಳಿತದ ನಿರ್ಬಂಧ ಕ್ರಮ ಖಂಡನೀಯ ಎಂದು ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಫೆಡರೇಷನ್ ಆಫ್ ಕೊಡವ ಸಮಾಜದ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದ್ದಾರೆ.

ಕೊಡವರ ಕುಲಮಾತೆ ಕಾವೇರಿ ತೀರ್ಥೋದ್ಭವ ಸಂದರ್ಭ ಭಕ್ತಾದಿಗಳಿಗೆ ನಿರ್ಬಂಧ ಹೇರುವ ಮೂಲಕ ಜಿಲ್ಲಾಡಳಿತ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ. ಇಲ್ಲಿ ಭಕ್ತಾದಿಗಳಿಗೆ ನಿರ್ಬಂಧ ಹೇರುವ ಬದಲು ಹೊರಭಾಗದಿಂದ ಆಗಮಿಸುವ ಪ್ರವಾಸಿಗರಿಗೆ ಮೊದಲು ನಿರ್ಬಂಧ ವಿಧಿಸಲಿ ಎಂದು ಸಲಹೆ ನೀಡಿದ್ದಾರೆ.

ತಾಯಿ ಕಾವೇರಿ ತೀರ್ಥರ