ಮಡಿಕೇರಿ: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು, ಗಾಂಧೀಜಿಯವರು ತಮ್ಮ ಅಹಿಂಸಾ ಹೋರಾಟದ ಮೂಲಕ ಭಾರತೀಯರಲ್ಲಿ ಜಾಗೃತಿ ಮೂಡಿಸಿ ಸ್ವಾತಂತ್ರ‍್ಯ ದೊರಕಿಸಿಕೊಡುವಲ್ಲಿ ಸಫಲರಾದರು. ಅವರು ವಿಶ್ವ ಕಂಡ ಶಾಂತಿದೂತ ಎಂದರು. ಸರಳತೆಯ ಪ್ರತೀಕವಾಗಿದ್ದ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರ ಜೀವನ ಮುಂದಿನ ಪೀಳಿಗೆಗೆ ಆದರ್ಶವಾಗಲಿ ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ರಂತಹ ಮಹಾನ್ ನಾಯಕರು ಮುನ್ನಡಿಸಿದ ಪಕ್ಷದ ಕಾರ್ಯಕರ್ತರಾಗಿರುವುದು ಕಾಂಗ್ರೆಸ್ ನವರಿಗೆ ಹೆಮ್ಮೆ ತರುವ ವಿಷಯ ಎಂದು ಹೇಳಿದರು.
ಕೆಪಿಸಿಸಿ ಮುಖಂಡ ಟಿ.ಪಿ. ರಮೇಶ್ ಮಾತನಾಡಿ, ಯುದ್ಧ ಮತ್ತು ಸಂಘರ್ಷವಿಲ್ಲದೆ ಶಾಂತಿಯ ಮೂಲಕ ಸ್ವಾತಂತ್ರ‍್ಯ ತಂದು ಕೊಟ್ಟ ಮಹಾತ್ಮ ಗಾಂಧಿಯವರ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತಿç ಅವರ ಬಗ್ಗೆ ವಿಚಾರ ಮಂಥನಗಳು ಹಳ್ಳಿ ಹಳ್ಳಿಗಳಲ್ಲಿ ನಡೆಯಬೇಕು ಎಂದು ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮಾತನಾಡಿ, ವಿಶ್ವದ ಎಲ್ಲಾ ಮಹಾನ್ ನಾಯಕರಿಗೆ ಗಾಂಧಿಯವರ ಜೀವನ ಆದರ್ಶವಾಗಿರುವಾಗ ನಮ್ಮ ಯುವಜನತೆ ಮಹಾತ್ಮರ ಚಿಂತನೆಗಳ ಬಗ್ಗೆ ನಿರಾಸಕ್ತಿ ತೋರುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.
ಲಾಲ್ ಬಹದ್ದೂರ್ ಶಾಸ್ತಿç ಅವರು ಪ್ರಜಾಪ್ರಭುತ್ವದ ನೈತಿಕ ಮೌಲ್ಯಗಳನ್ನು ಜಗತ್ತಿಗೆ ತೋರಿಸಿದ ಪ್ರಥಮ ರಾಜಕಾರಿಣಿ ಎಂದರು. ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯಾ ಅಬ್ರಾರ್ ಮಾತನಾಡಿ, ಗಾಂಧಿಯವರ ಚರಿತ್ರೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು. ಆರಂಭದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಲಿಯಾಖತ್ ಆಲಿ ಗಾಂಧಿಯವರ ನೆಚ್ಚಿನ ಗೀತೆ ವೈಷ್ಣವ ಜನನಿ ಗೀತೆ ಹಾಡಿದರು. ಸೇವಾದಳದ ಮುಖ್ಯಸ್ಥೆ ವಿಕ್ಟರ್ ಥೆರೆಸಾ ಮತ್ತು ಸಂಗಡಿಗರು ರಘುಪತಿ ರಾಘವ ಭಜನೆ ಹಾಡಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸೇವಾದಳದ ಕಾನೆಹಿತ್ಲು ಮೊಣ್ಣಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಘಟಕದ ಅಧ್ಯಕ್ಷ ನೆರವಂಡ ಉಮೇಶ್, ಹೊಸೂರು ಸೂರಜ್, ಬೊಳ್ಳಿಯಂಡ ಗಣೇಶ್ ಪ್ರಮುಖರಾದ ಪ್ರಕಾಶ್ ಆಚಾರ್ಯ, ಉದಯ್ ಕುಮಾರ್, ಮಮ್ತಾಜ್ ಬೇಗಂ, ಮಂಡೀರ ಸದಾ ಮುದ್ದಪ್ಪ, ಪುಷ್ಪಪೂಣಚ್ಚ, ಜೆ.ಸಿ. ಜಗದೀಶ್, ಪ್ರಭುರೈ, ಫ್ಯಾನ್ಸಿ ಪಾರ್ವತಿ, ಮೀನಾಜ್ ಪ್ರವೀಣ್, ಸ್ವರ್ಣಲತಾ, ಮುಕ್ಕಾಟಿರ ಸಂದೀಪ್, ನರೇನ್ ಕಾರ್ಯಪ್ಪ, ಶೇಖ್ ರವೂಫ್, ಇಸ್ಮಾಯಿಲ್ ಸೆಂಟಿಯಾರ್, ಲಕ್ಷೀ ಪ್ರಸಾದ್ ಪೆರ್ಲ, ರಿಯಾಸುದ್ದೀನ್, ಮುನೀರ್ ಮಾಚರ್, ಕೌಸರ್, ಶೇಖ್ ಅಹಮದ್, ರಾಹುಲ್ ಮಾರ್ಷಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.ವೀರಾಜಪೇಟೆ: ಪ್ರಸ್ತುತ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಅರಿವಿನ ಕೊರತೆಯುಂಟಾಗುತ್ತಿದ್ದು, ದುಶ್ಚಟಗಳನ್ನು ದೂರ ಮಾಡಿ, ಸರಳ ಜೀವನ, ಉನ್ನತ ಚಿಂತನೆಯೊAದಿಗೆ ಬದುಕಲು ಗಾಂಧೀಜಿಯವರ ತತ್ವಾದರ್ಶಗಳ ಅರಿವು ಅತ್ಯಗತ್ಯವಾಗಿದೆ ಎಂದು ಸೈಂಟ್ ಆ್ಯನ್ಸ್ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಮದಲೈಮುತ್ತು ಹೇಳಿದರು.
ವೀರಾಜಪೇಟೆಯ ಸೈಂಟ್ ಆ್ಯನ್ಸ್ ಪದವಿ ಕಾಲೇಜಿನ ಐ.ಕ್ಯೂ.ಎ.ಸಿ. ಹಾಗೂ ಎನ್.ಎಸ್.ಎಸ್. ಘಟಕದ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ "ಗಾಂಧೀಜಿಯವರ ತತ್ವಾದರ್ಶ- ಈ ಕಾಲದ ಅಗತ್ಯತೆ" ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಮಾರಂಭದಲ್ಲಿ ಎನ್.ಎಸ್.ಎಸ್. ಅಧಿಕಾರಿ ಹಾಗೂ ಕನ್ನಡ ಉಪನ್ಯಾಸಕ ಅರ್ಜುನ್ ಗಾಂಧೀಜಿ ಶೈಕ್ಷಣಿಕ ವಿಚಾರಧಾರೆ ಕುರಿತು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರೆ.ಫಾ. ರೋನಿ ರವಿಕುಮಾರ್ ಅವರು ರಾಷ್ಟç ನಿರ್ಮಾಣದಲ್ಲಿ ಗಾಂಧೀಜಿಯವರ ದೃಷ್ಟಿಕೋನದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಪದವಿ ಕಾಲೇಜಿನ ಎಲ್ಲಾ ಬೋಧಕ ವೃಂದ ಹಾಗೂ ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಲೇಜಿನ ಉಪನ್ಯಾಸಕಿ ಶಬಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಹೇಮ ನಿರೂಪಿಸಿದರೆ, ಉಪನ್ಯಾಸಕಿ ಫಿಲೋಮಿನಾ ಸ್ವಾಗತಿಸಿ, ಉಪನ್ಯಾಸಕಿ ಟಿನ್ಸಿ ವಂದಿಸಿದರು.ಪೊನ್ನAಪೇಟೆ: ಬಲ್ಯಮಂಡೂರು ಶಕ್ತಿ ಕೇಂದ್ರದಲ್ಲಿ ಮಹಾತ್ಮ ಗಾಂಧೀಜಿ ಅವರ ೧೫೨ನೇ ಜಯಂತಿ ಹಾಗೂ ಸ್ವಾತಂತ್ರ‍್ಯ ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತಿç ಅವರ ೧೧೭ನೇ ಜಯಂತಿಯನ್ನು ಆಚರಿಸಲಾಯಿತು. ಇದರ ಅಂಗವಾಗಿ ಬಲ್ಯಮಂಡೂರು ಗ್ರಾಮ ಪಂಚಾಯಿತಿಯ ಆವರಣ ಹಾಗೂ ಬಲ್ಯಮಂಡೂರು-ಕಾನೂರು ಮುಖ್ಯ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖ್ ಪ್ರಕಾಶ್, ಸಹ ಪ್ರಮುಖ್ ಕಂದಾ ಸುಬ್ಬಯ್ಯ, ಗ್ರಾ.ಪಂ. ಅಧ್ಯಕ್ಷೆ ಶೈಲಾ, ಸದಸ್ಯರಾದ ಭರತ್, ನವಿನ್, ಅಯ್ಯಪ್ಪ, ಜಯಂತಿ, ಶೀಲಾ, ಜಾನು, ಬೂತ್ ಅಧ್ಯಕ್ಷ ಅಯ್ಯಣ್ಣ, ಅಣ್ಣಯ್ಯ, ಉತ್ತಪ್ಪ, ಮಹಿಳಾ ಮೋರ್ಚಾದ ಅಧ್ಯಕ್ಷ ಅನಿಲ, ಉಪಾಧ್ಯಕ್ಷೆ ಲತಾ ಅಯ್ಯಣ್ಣ, ತಾಲೂಕು ಸದಸ್ಯೆ ನಿಮಿತ ಸದಾಶಿವ, ಶಾಂತಿ, ಯುವ ಮೋರ್ಚಾದವರು, ಕೃಷಿ ಮೋರ್ಚಾದ ಚೀರಂಡ ಚಂಗಪ್ಪ, ಕಾರ್ಯಕರ್ತರಾದ ಸದಾಶಿವ, ಧನು, ರವಿ, ಜಿಮ್ಮಿ ಪೂವಣ್ಣ, ರಾಮು ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.
ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಗುಂಡುಗುಟ್ಟಿ ಗ್ರಾಮದ ಮಹಾತ್ಮ ಗಾಂಧಿ ಮೆಮೋರಿಯಲ್ ಟ್ರಸ್ಟಿನ ವತಿಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಬಿ.ಜಿ.ವಿ. ಕುಮಾರ್ ಅವರು ಮಾತನಾಡಿ ಗುಂಡುಗುಟ್ಟಿಯ ದಿವಂಗತ ಮಂಜುನಾಥಯ್ಯ ಅವರ ತೋಟದ ಬಂಗಲೆಗೆ ೧೯೩೪ ರಲ್ಲಿ ಆಗಮಿಸಿ ವಿಶ್ರಾಂತಿ ಪಡೆದುಹೋದ ಮಹಾತ್ಮ ಗಾಂಧೀಜಿಯವರು ಹಿಂದಿನ ಅನುಭವ ಮತ್ತು ಕೊಡಗಿನ ಗೌರಮ್ಮನವರ ಇತಿಹಾಸದ ಅನುಭವವನ್ನು ಹಂಚಿಕೊAಡರು. ವಿಶ್ರಾಂತಿಗಾಗಿ ಮಹಾತ್ಮ ಗಾಂಧೀಜಿಯವರ ಆಗಮಿಸಿದ್ದ ಗುಂಡುಗುಟ್ಟಿ ಮಂಜುನಾಥಯ್ಯ ಅವರ ಬಂಗಲೆಯನ್ನು ಮುಂದೊAದು ದಿನ ಒಂದು ಪ್ರವಾಸಿ ತಾಣವನ್ನಾಗಿ ಮಾಡಬೇಕೆಂಬ ಉದ್ದೇಶವಿದೆ. ಸರ್ಕಾರ ಕೈಜೋಡಿಸಿದ್ದಲ್ಲಿ ಬಂಗಲೆಯ ಮುಂದೆ ಒಂದು ಮಹಾತ್ಮಗಾಂಧಿ ಉದ್ಯಾನವನವನ್ನು ಸ್ಥಾಪಿಸಿ ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಬೇಕೆಂದು ಎಸ್.ಎಂ.ಜಿ.ಎA. ಟ್ರಸ್ಟಿನ ಮೂಲ ಉದ್ದೇಶ ಎಂದು ಹೇಳಿದರು. ಟ್ರಸ್ಟಿನ ಸದಸ್ಯರಾದ ಝಾಯ್ದ್ ಅಹಮದ್ ಅವರು ಗಾಂಧೀಜಿಯವರ ವಿಚಾರಧಾರೆಗಳ ಬಗ್ಗೆ ಮಾತನಾಡಿದರು.
ಮತ್ತೊಬ್ಬ ಸದಸ್ಯರಾದ ಮುರುಗೇಶ್ ಸ್ವಾತಂತ್ರö್ಯ ಪಡೆಯಲು ನಮ್ಮ ಹಿರಿಯ ನಾಯಕರುಗಳು ಸಾಹಸ ಬಲಿದಾನದ ಬಗ್ಗೆ, ಇತಿಹಾಸದ ಬಗ್ಗೆ ಹಾಡಿನ ಮೂಲಕ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಚೆನ್ನಮ್ಮ ಕಾಲೇಜಿನ ಮಕ್ಕಳು ಮತ್ತು ಉಪನ್ಯಾಸಕಿ ಬಿಂದು ಅವರ ಹಾಡುಗಳು ಎಲ್ಲರ ಗಮನಸೆಳೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಗೌತಮ್ ಮುಖುಲ್ ಮಹೀಂದ್ರ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಟ್ರಸ್ಟಿನ ಸದಸ್ಯರಾದ ಮೊಹಿದ್ದೀನ್, ಡೆನ್ನಿಸ್ ಡಿಸೋಜಾ, ಟ್ರಸ್ಟಿನ ರಮೇಶ್ ಪಿಳ್ಳೆöÊ, ಜೆಸಿ. ಮಂಜುನಾಥ್, ಮುರುಗೇಶ್ ತೋಟದ ವ್ಯವಸ್ಥಾಪಕರು, ಕಾರ್ಮಿಕರು ಕಾಲೇಜಿನ ಮಕ್ಕಳು ಹಾಜರಿದ್ದರು.ಶನಿವಾರಸಂತೆ: ಪಟ್ಟಣದ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿನಿಯರು ಶ್ರಮದಾನ ಮಾಡಿದರು. ವಸತಿ ನಿಲಯದ ಮೇಲ್ವಿಚಾರಕಿ ಹೆಚ್.ಎಸ್. ಮುತ್ತಮ್ಮ ನೇತೃತ್ವದಲ್ಲಿ ೨೪ ವಿದ್ಯಾರ್ಥಿನಿಯರು ವಸತಿ ನಿಲಯದ ಆವರಣದ ಹೂದೋಟದಲ್ಲಿ ಬೆಳೆದಿದ್ದ ಕಳೆ ಸಸ್ಯಗಳನ್ನು ಕಿತ್ತು ಸ್ವಚ್ಛಗೊಳಿಸಿ ನಿಲಯದ ಮುಂಭಾಗ ಸುತ್ತಲಿನ ತಡೆಗೋಡೆಯ ಹೊರಬದಿಯಲ್ಲಿ ಬೆಳೆದಿದ್ದ ಗಿಡಗಂಟಿ, ಕಳೆ ಸಸ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದರು. ವಾಚ್‌ಮನ್ ಜಲಜಾಕ್ಷಿ, ಅಡುಗೆ ವಿಭಾಗದ ಸಿಬ್ಬಂದಿ ಪುಷ್ಪಾ ಮತ್ತು ಶೋಭಾ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.ಕುಟ್ಟ: ಕುಟ್ಟ ಶಕ್ತಿ ಕೇಂದ್ರದ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತಿç ಅವರುಗಳ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕುಟ್ಟ ಕೊಡವ ಸಮಾಜದಿಂದ ಕುಟ್ಟ ಪೊಲೀಸ್ ಠಾಣೆವರೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಕ್ತಿ ಕೇಂದ್ರ ಪ್ರಮುಖ್, ಸಹ ಪ್ರಮುಖ್, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಸದ್ಯಸರು, ಎಲ್ಲಾ ವಾರ್ಡ್ಗಳ ಅಧ್ಯಕ್ಷರು, ಎಲ್ಲಾ ಮೋರ್ಚಾ ಅಧ್ಯಕ್ಷರು, ಕೆಡಿಸಿಸಿ ನಿರ್ದೇಶಕರು, ಕಾರ್ಯಕರ್ತರು ಹಾಜರಿದ್ದರು.ಕಣಿವೆ: ಹರದೂರು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗಾಂಧಿ ಜಯಂತಿ ಆಚರಣೆ ಹಾಗೂ ವಿಶೇಷ ಗ್ರಾಮ ಸಭೆ ನಡೆಯಿತು.
ಅಮೃತ ಗ್ರಾಮ ಯೋಜನೆಯಡಿ ಹರದೂರು ಗ್ರಾಮ ಪಂಚಾಯಿತಿಯೂ ಒಳಗೊಂಡಿರುವ ಕಾರಣ ಅಮೃತ ಯೋಜನೆಯ ನೋಡಲ್ ಅಧಿಕಾರಿಯಾಗಿರುವ ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಸಭೆಗೆ ಆಗಮಿಸಿದ್ದರು. ಸಭೆಯಲ್ಲಿ ನೆರೆದ ಪಂಚಾಯಿತಿ ಚುನಾಯಿತರು ಹಾಗೂ ಗ್ರಾಮಸ್ಥರಿಗೆ ಯೋಜನೆಯ ಬಗ್ಗೆ ಸಮಗ್ರ ಮಾಹಿತಿಗಳನ್ನು ನೀಡಿದ ಸಿಇಒ, ಚುನಾಯಿತ ಸದಸ್ಯರು ಹಾಗೂ ಪಂಚಾಯಿತಿ ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಈ ಸಂದರ್ಭ ಗ್ರಾ.ಪಂ ಅಧ್ಯಕ್ಷ ಬಿ.ಡಿ. ಪದ್ಮನಾಭ, ಪಿಡಿಒ ವಿ.ಜಿ. ಲೋಕೇಶ್ ಸೇರಿದಂತೆ ಸದಸ್ಯರು ಹಾಗೂ ಗ್ರಾಮಸ್ಥರಿದ್ದರು.ವೀರಾಜಪೇಟೆ: ರಾಷ್ಟçಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ಅಂಗವಾಗಿ ವೀರಾಜಪೇಟೆ ಅರಣ್ಯ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ವೀರಾಜಪೇಟೆ ವಲಯದ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಕಚೇರಿಯಲ್ಲಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಗಾಂಧಿ ನಗರದ ಅರಣ್ಯ ಭವನದ ಆವರಣದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಂಡರು.
ಸ್ವಚ್ಛತಾ ಅಭಿಯಾನವನ್ನು ವೀರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ. ಚಕ್ರಪಾಣಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಜೆ. ರೋಹಿಣಿ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಕಳ್ಳೀರ ಎಂ. ದೇವಯ್ಯ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ವಿಭಾಗೀಯ ಕಚೇರಿ ಮತ್ತು ವೀರಾಜಪೇಟೆ ಅರಣ್ಯ ವಲಯದ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.ಗೋಣಿಕೊಪ್ಪ ವರದಿ: ಗಾಂಧಿ ಜಯಂತಿ ಪ್ರಯುಕ್ತ ರಾಷ್ಟಿçÃಯ ಕಾನೂನು ಸೇವಾ ಪ್ರಾಧಿಕಾರದಿಂದ ಪೊನ್ನಂಪೇಟೆ ಸಿವಿಲ್ ನ್ಯಾಯಾಲಯದಲ್ಲಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನದಲ್ಲಿ ಪೊನ್ನಂಪೇಟೆ ಸಿವಿಲ್ ನ್ಯಾಯಾಧೀಶರಾದ ಬಿ. ಗಿರಿಗೌಡ ನ್ಯಾಯಾಲಯ ಆವರಣದಲ್ಲಿ ಕಳೆಕಿತ್ತು ಸ್ವಚ್ಛತೆಯ ಸಂದೇಶ ಸಾರಿದರು.
ವಕೀಲರು ಮತ್ತು ನ್ಯಾಯಾಲಯ ಸಿಬ್ಬಂದಿಯೊAದಿಗೆ ಆವರಣದಲ್ಲಿ ಗಿಡನೆಟ್ಟು ಪರಿಸರ ಜಾಗೃತಿ ಮೂಡಿಸಿದರು. ನಂತರ ಅವರು ಮಾತನಾಡಿ, ಗಾಂಧಿ ತತ್ವ ಅನುಸರಿಸುವುದರಿಂದ ಸಮಾಜದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದಾಗಿದೆ. ಗಾಂಧಿ ಅವರ ಅಹಿಂಸೆ ತತ್ವ ವಿಶ್ವಮಟ್ಟದಲ್ಲಿ ಗಮನ ಸೆಳೆದಿದ್ದು, ಅಂರ‍್ರಾಷ್ಟಿçÃಯ ಅಹಿಂಸಾ ದಿನಾಚರಣೆಯಾಗಿ ಆಚರಿಸುವಂತಾಗಿದೆ. ಸತ್ಯ ಮತ್ತು ಅಹಿಂಸೆ, ಆಂತರಿಕ ಸ್ವಚ್ಛತೆಯೊಂದಿಗೆ ಸ್ವಚ್ಛ ಸಮಾಜ ನಿರ್ಮಾಣಕ್ಕೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಸಂಘದ ಸದಸ್ಯರು ಅಭಿಯಾನದಲ್ಲಿ ಭಾಗವಹಿಸಿದ್ದರು. ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತಿç ಅವರನ್ನು ಕೂಡ ನೆನೆಸಿಕೊಳ್ಳಲಾಯಿತು.
ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಕಳಕಂಡ ಡಿ. ಮುತ್ತಪ್ಪ, ಕಾರ್ಯದರ್ಶಿ ಅಜ್ಜಮಾಡ ಮೋನಿ ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಬಾನಂಗಡ ವಿನೋದ್, ಹಿರಿಯ ಸದಸ್ಯ ಕೆ.ಬಿ. ಸಂಜೀವ, ಪೊನ್ನಂಪೇಟೆ ವಲಯ ಅರಣ್ಯ ಫಾರೆಸ್ಟರ್ ರವಿಕಿರಣ್, ಸಚಿನ್ ಇದ್ದರು.ಶನಿವಾರಸಂತೆ ರೋಟರಿ
ಶನಿವಾರಸಂತೆ: ಶನಿವಾರಸಂತೆ ರೋಟರಿ ಸಂಸ್ಥೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸ್ಮಾರಕ ಗ್ರಂಥಾಲಯ ಆವರಣವನ್ನು ಸ್ವಚ್ಛಗೊಳಿಸಿ ಸ್ವಚ್ಛ ಭಾರತ್ ಕಾರ್ಯಕ್ರಮ ನೆರವೇರಿಸಿದರು. ಅಧ್ಯಕ್ಷ ಮೋಹನ್, ಕಾರ್ಯದರ್ಶಿ ವಸಂತ್, ನಿರ್ದೇಶಕರಾದ ಮೋಹನ್ ಕುಮಾರ್, ದಿವಾಕರ್, ಸದಸ್ಯರು ಇದ್ದರು.ಕೂಡಿಗೆ: ಕೂಡಿಗೆಯ ಜಿಲ್ಲಾ ಮತ್ತು ತರಬೇತಿ ಸಂಸ್ಥೆ (ಡಯಟ್) ವತಿಯಿಂದ ರಾಷ್ಟçಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಜಯಂತಿಯನ್ನು ಆಚರಿಸಲಾಯಿತು.
ಗಾಂಧೀಜಿ ಮತ್ತು ಶಾಸ್ತಿç ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದ ಡಯಟ್‌ನ ಪ್ರಭಾರ ಪ್ರಾಂಶುಪಾಲ ಕೆ.ವಿ. ಸುರೇಶ್ ಮಾತನಾಡಿ, ಸರಳ ಜೀವನ ನಡೆಸಿ ದೇಶಕ್ಕೆ ಉತ್ತಮ ಕೊಡುಗೆ ನೀಡಿದ ಗಾಂಧೀಜಿ ಮತ್ತು ಶಾಸ್ತಿç ಅವರ ವಿಚಾರಧಾರೆಗಳು ಇಂದಿನ ಯುವ ಸಮುದಾಯಕ್ಕೆ ಸಹಕಾರಿಯಾಗಿವೆ ಎಂದರು. ಉಪನ್ಯಾಸಕ ಸಿ. ಸಿದ್ದೇಶಿ ಮಾತನಾಡಿ, ಸಂಸ್ಥೆಯ ಪ್ರಶಿಕ್ಷಣಾರ್ಥಿಗಳು ಗಾಂಧೀಜಿ ಅವರ ಬದುಕು, ಹೋರಾಟದ ಹಿನ್ನೆಲೆ, ಶೈಕ್ಷಣಿಕ ತತ್ವಜ್ಞಾನದ ಕುರಿತು ಚಿತ್ರಗಳ ಮೂಲಕ ಅಭಿವ್ಯಕ್ತಪಡಿಸಿದ ಕುರಿತು ವಿವರಿಸಿದರು.
ಉಪನ್ಯಾಸಕ ಧನಂಜಯ್, ಗಾಂಧೀಜಿ, ಶಾಸ್ತಿç ಅವರ ವಿಚಾರಧಾರೆಯನ್ನು ವಿವರಿಸಿದರು. ಉಪನ್ಯಾಸಕರಾದ ವಿ. ವಿಜಯ್, ವೈ.ಎಂ. ಶೇಖರ್, ಸಿದ್ದೇಶ್ ಕುಮಾರ್, ಗಾಯತ್ರಿಬಾಯಿ, ಎಂ.ಎಸ್. ಧನಪಾಲ್, ಗೀತಾ, ಲತಾ, ಗಾಯತ್ರಿ, ರೇಣುಕ, ಕಚೇರಿ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಇದ್ದರು.
ಇದಕ್ಕೂ ಮುನ್ನ ಡಯಟ್ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿ ಗಿಡ ನೆಡಲಾಯಿತು. ಈ ಸಂದರ್ಭ ಪ್ರಶಿಕ್ಷಣಾರ್ಥಿಗಳು ಗಾಂಧೀಜಿ ಅವರ ಚಿತ್ರದೊಂದಿಗೆ ಅವರ ಜೀವನ ಸಂದೇಶಗಳನ್ನು ರಚಿಸಿದ್ದು ಗಮನಸೆಳೆಯಿತು.ಕೂಡಿಗೆ: ಕೂಡ್ಲೂರು ಗ್ರಾಮದಲ್ಲಿರುವ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ಜಯಂತಿ ಕಾರ್ಯಕ್ರಮದಲ್ಲಿ ಇಕೋ ಕ್ಲಬ್, ಎನ್.ಎಸ್.ಎಸ್. ಘಟಕ, ಸಮಾಜ ಸಂಘದ ವತಿಯಿಂದ ಶಿಕ್ಷಕರು, ವಿದ್ಯಾರ್ಥಿಗಳು ಜತೆಗೂಡಿ ಶ್ರಮದಾನದ ಮೂಲಕ ಶಾಲಾವರಣವನ್ನು ಸ್ವಚ್ಛಗೊಳಿಸಿದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಗಾಂಧೀಜಿ ಮತ್ತು ಶಾಸ್ತಿç ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ವಿದ್ಯಾರ್ಥಿಗಳು ಈ ಇಬ್ಬರು ಮಹಾನ್ ನಾಯಕರ ಜೀವನ ಮತ್ತು ಆದರ್ಶಗಳನ್ನು ನಾವೆಲ್ಲ ಅನುಸರಿಸಬೇಕು. ಸ್ವಚ್ಛ ಭಾರತ ಕನಸಿನ ಗಾಂಧೀಜಿ ಸೇವೆಯು ಅನನ್ಯವಾದುದು ಎಂದರು.
ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಿ. ರಮೇಶ್, ಗಾಂಧಿ ಮತ್ತು ಶಾಸ್ತಿç ಅವರ ಜೀವನ ಸಂದೇಶ ಮತ್ತು ಸರಳ ವ್ಯಕ್ತಿತ್ವ ಕುರಿತು ತಿಳಿಸಿದರು. ಸಮಾಜ ವಿಜ್ಞಾನ ಶಿಕ್ಷಕಿ ಎಸ್.ಎಂ. ಗೀತಾ, ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಮಹಾತ್ಮ ಗಾಂಧಿ ಹಾಗೂ ಶಾಸ್ತಿç ಅವರ ಬದುಕು ಕುರಿತು ಭಾಷಣ ಮಾಡಿದರು. ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯೊಂದಿಗೆ ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಸಂದೇಶಗಳನ್ನು ಪ್ರಚುರಪಡಿಸಿದರು.
ಶಿಕ್ಷಕರಾದ ಎಸ್.ಎಂ. ಗೀತಾ, ಪಿ. ಅನಿತಾ ಅನ್ಸಿಲಾ ರೇಖಾ, ಬಿ.ಡಿ. ರಮ್ಯ, ಕೆ. ಗೋಪಾಲಕೃಷ್ಣ ಪ್ರಾರ್ಥಿಸಿ, ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ವಿದ್ಯಾರ್ಥಿಗಳು ಗಾಂಧೀಜಿ ಅವರ ಕುರಿತು ಗೀತಗಾಯನ ಕಾರ್ಯಕ್ರಮವನ್ನು ನಡೆಸಿದರು. ಶ್ರಮದಾನ ಮಾಡುವ ಮೂಲಕ ಗಾಂಧಿ ಜಯಂತಿಗೆ ಚಾಲನೆ ನೀಡಲಾಯಿತು.ಪೊನ್ನಂಪೇಟೆ: ಸಂಪೂರ್ಣ ಗ್ರಾಮ ಸ್ವಚ್ಛತಾ ಆಂದೋಲನ ಜನತೆಯ ಸಾಮೂಹಿಕ ಹೊಣೆಗಾರಿಕೆಯಾಗಬೇಕು. ಜನರ ಇಚ್ಛಾಶಕ್ತಿಯಿಂದ ಮಾತ್ರ ಈ ಸ್ವಚ್ಛತಾ ಆಂದೋಲನದ ಯಶಸ್ಸು ಸಾಧ್ಯ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.
ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ೧೫೨ನೇ ಹಾಗೂ ಸ್ವತಂತ್ರ ಭಾರತದ ೨ನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತಿç ಅವರ ೧೧೭ನೇ ಜಯಂತಿಯ ಅಂಗವಾಗಿ ವೀರಾಜಪೇಟೆಯ ಕಾವೇರಿ ಕಾಲೇಜು ಬಳಿ ಆಯೋಜಿಸಲಾಗಿದ್ದ ಸ್ವಚ್ಛತಾ ಆಂದೋಲನ ಮತ್ತು ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಸಂಪೂರ್ಣ ಸ್ವಚ್ಛತಾ ಆಂದೋಲನದ ಪರಿಕಲ್ಪನೆ ಗ್ರಾಮಗಳಿಂದಲೇ ಜಾರಿಯಾಗಬೇಕು. ಹೀಗಾದರೆ ಮಾತ್ರ ಇದರ ಮೂಲ ಉದ್ದೇಶ ಈಡೇರಿದಂತಾಗುತ್ತದೆ ಎಂದು ಅವರು ಹೇಳಿದರು.
ಗಣನೀಯ ಸೇವೆ ಸಲ್ಲಿಸಿದ ಬಳಪಂಡ ಮೊಣ್ಣಪ್ಪ ಮತ್ತು ಆಶಾ ಕಾರ್ಯಕರ್ತೆ ಹೆಚ್. ಶಾಂತಿ ಅವರನ್ನು ಬಿಟ್ಟಂಗಾಲ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶಾಸಕ ಕೆ.ಜಿ. ಬೋಪಯ್ಯ ಅವರು ಸನ್ಮಾನಿಸಿ, ಗೌರವಿಸಿದರು.
ವೀರಾಜಪೇಟೆ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಕಾರ್ಯದರ್ಶಿ ಅಮ್ಮುಣಿಚಂಡ ರಂಜಿ ಪೂಣಚ್ಚ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಕೆ. ಬೋಪಣ್ಣ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ, ಸೇರಿದಂತೆ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಸದಸ್ಯರು, ಶಕ್ತಿ ಕೇಂದ್ರದ ಮುಖಂಡರು, ವಿವಿಧ ಘಟಕದ ಪದಾಧಿಕಾರಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು.
ನಂತರ, ಕಾವೇರಿ ಕಾಲೇಜು ಆವರಣದಿಂದ ಬಿಟ್ಟಂಗಾಲ ಜಂಕ್ಷನ್‌ವರೆಗೆ ರಸ್ತೆಬದಿಯ ತ್ಯಾಜ್ಯಗಳನ್ನು ಸಂಗ್ರಹಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.ಗೋಣಿಕೊಪ್ಪಲು: ಮಹಾತ್ಮ ಗಾಂಧೀಜಿಯವರ ನಡೆ, ನುಡಿ, ತತ್ವ, ಸಿದ್ಧಾಂತಗಳನ್ನು ಯುವ ಪೀಳಿಗೆಯವರು ಸ್ವಯಂ ಪ್ರೇರಣೆಯಿಂದ ಮೈಗೂಡಿಸಿಕೊಳ್ಳುವಂತಾಗಬೇಕು ಎಂದು ವೀರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲೆ ಡಾ. ಎಸ್. ಪುಷ್ಪ ಪೂವಮ್ಮ ಕರೆ ನೀಡಿದರು.
ಗೋಣಿಕೊಪ್ಪ ಲಯನ್ಸ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತಿç ಅವರ ಜನ್ಮದಿನಾಚರಣೆಯ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಗಾಂಧಿಯವರ ಕನಸಿನಂತೆ ಸ್ವಚ್ಛ ಭಾರತ ಅಭಿಯಾನ ಇಂದು ದೇಶವ್ಯಾಪಿ ಹರಡಿದೆ. ಹಲವು ರೀತಿಯ ಅಭಿಯಾನಗಳನ್ನು ಅವರ ಆತ್ಮ ಚರಿತ್ರೆ ಪುಸ್ತಕಗಳಲ್ಲಿ ಕಾಣಬಹುದಾಗಿದೆಯೆಂದು ವಿದ್ಯಾರ್ಥಿಗಳಿಗೆ ಕಿ