ಲಖಿಂಪುರ ಹಿಂಸಾಚಾರ: ಪ್ರಿಯಾಂಕಾ ಬಂಧನ

ಲಖಿAಪುರ್, ಅ. ೫: ಹಿಂಸಾಚಾರಗ್ರಸ್ತ ಲಖಿಂಪುರ್‌ಗೆ ತೆರಳುತ್ತಿದ್ದ ಪ್ರಿಯಾಂಕ ಗಾಂಧಿ ಅವರನ್ನು ಒಂದು ದಿನಕ್ಕೂ ಹೆಚ್ಚಿನ ಸಮಯ ಪಿಎಸಿ ಅತಿಥಿ ಗೃಹದಲ್ಲಿ ಇರಿಸಿದ್ದ ಬಳಿಕ ಅವರನ್ನು ಈಗ ಸೀತಾಪುರ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ. ಪ್ರಿಯಾಂಕ ಗಾಂಧಿಯೊAದಿಗೆ ಇನ್ನೂ ೧೦ ಕಾಂಗ್ರೆಸ್ಸಿಗರು ಈಗ ಸಿಆರ್ ಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಧಿಕೃತವಾಗಿ ಬಂಧನಕ್ಕೊಳಗಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಉದ್ದೇಶಪೂರ್ವಕವಾಗಿ ಎಸಗಬಹುದಾದ ಅಪರಾಧಗಳನ್ನು ತಡೆಗಟ್ಟುವುದಕ್ಕಾಗಿ ಇವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಭಾನುವಾರ ಲಖಿಂಪುರದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತರರ ನಡುವೆ ಹಿಂಸಾಚಾರ ಭುಗಿಲೆದ್ದ ಪರಿಣಾಮವಾಗಿ ನಾಲ್ವರು ರೈತರು ಸೇರಿದಂತೆ ೮ ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆ ಬೆನ್ನಲ್ಲೇ ಪ್ರಿಯಾಂಕ ಗಾಂಧಿ ಮೃತ ರೈತರ ಕುಟುಂಬಗಳಿಗೆ ಸಾಂತ್ವನ ಹೇಳುವುದಕ್ಕಾಗಿ ಲಖಿಂಪುರಕ್ಕೆ ತೆರಳುತ್ತಿದ್ದಾಗ ಆಕೆಯನ್ನು ಸೀತಾಪುರ್‌ನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆದು ಪಿಎಸಿ ಅತಿಥಿಗೃಹದಲ್ಲಿರಿಸಲಾಗಿತ್ತು. ಈಗ ವಿವಿಧ ಸಿಆರ್‌ಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಪ್ರಿಯಾಂಕ ಗಾಂಧಿ ಅವರನ್ನು ಹಾಗೂ ಇತರ ಕಾಂಗ್ರೆಸ್ ನಾಯಕರಾದ ದೀಪೇಂದ್ರ ಸಿಂಗ್ ಹೂಡ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್‌ಕುಮಾರ್ ಲಲ್ಲು, ಪಕ್ಷದ ಎಂಎಲ್‌ಸಿ ದೀಪಕ್ ಸಿಂಗ್, ಸಂದೀಪ್ ರಾಜ್ ಕುಮಾರ್, ನರೇಂದ್ರ ಶೇಖಾವತ್, ಯೋಗೇಂದ್ರ ಹರಿಕಾಂತ್, ಧೀರಜ್ ಗುರ್ಜರ್ ಹಾಗೂ ಅಮಿತ್ ಅವರನ್ನು ಬಂಧಿಸಲಾಗಿದೆ. ಸಿಆರ್‌ಪಿಸಿಯ ಸೆಕ್ಷನ್ ೧೦೭, ೧೧೬, ೧೫೧ ರ ಅಡಿ( ಉದ್ದೇಶಪೂರ್ವಕವಾಗಿ ಎಸಗಬಹುದಾದ ಅಪರಾಧ ಕೃತ್ಯಗಳ ತಡೆ)ಯಡಿ ಬಂಧಿಸಲಾಗಿದೆ.

ಹಾನಗಲ್-ಸಿAದಗಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಘೋಷಣೆ

ಬೆಂಗಳೂರು, ಅ. ೫: ರಾಜ್ಯದ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ ಸಂಜೆ ಪ್ರಕಟಿಸಿದೆ. ಹಾನಗಲ್‌ನಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹಾಗೂ ಸಿಂದಗಿಯಿAದ ಅಶೋಕ ಮನಗೊಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರ ಪುತ್ರ ಅಶೋಕ್ ಮನಗೊಳಿ ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅವರಿಗೆ ಟಿಕೆಟ್ ಎಂದು ಈ ಹಿಂದೆ ಮೌಖಿಕವಾಗಿ ಹೇಳಿಕೆ ನೀಡಲಾಗುತಿತ್ತು. ಆದರೆ, ಇಂದು ಅಧಿಕೃತವಾಗಿ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇನ್ನೂ ಶ್ರೀನಿವಾಸ ಮಾನೆ ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಹಾನಗಲ್ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಇದೀಗ ಅಂತಿಮವಾಗಿ ಮಾನೆ ಅವರಿಗೆ ಕಾಂಗ್ರೆಸ್ ವರಿಷ್ಠರು ಮಣೆ ಹಾಕಿದ್ದಾರೆ. ಅಕ್ಟೋಬರ್ ೩೦ ರಂದು ಈ ಎರಡು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ.

ಪ್ರಧಾನಿ ಕಚೇರಿ ಮಾದರಿಯಲ್ಲಿ ಸಿಎಂ ಡ್ಯಾಶ್ ಬೋರ್ಡ್ಗೆ ಚಾಲನೆ

ಬೆಂಗಳೂರು, ಅ. ೫: ಪ್ರಧಾನಿ ಕಚೇರಿ ಮಾದರಿಯಲ್ಲಿ ಮುಖ್ಯಮಂತ್ರಿಯವರಿಗೆ ಡಿಜಿಟಲ್ ವೇದಿಕೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಮಾಹಿತಿ ನೀಡುವ ಸಿ.ಎಂ. ಡ್ಯಾಷ್ ಬೋರ್ಡ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು. ಮುಖ್ಯಮಂತ್ರಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಪ್ರಗತಿಯಲ್ಲಿ ಇರುವ ಯೋಜನೆಗಳ ಸ್ಥಿತಿಗತಿ ಕುರಿತು ಸಿಎಂ ಡ್ಯಾಶ್ ಬೋರ್ಡ್ ಸಮಗ್ರ ಮಾಹಿತಿ ನೀಡಲಿದೆ. ವಿವಿಧ ಇಲಾಖೆಗಳ ಪ್ರಮುಖ ಯೋಜನೆಗಳ ಕುರಿತು ದಿನ ದಿನದ ಮಾಹಿತಿಯನ್ನು ಡ್ಯಾಶ್ ಬೋರ್ಡ್ನಲ್ಲಿ ನಿಖರವಾಗಿ ದಾಖಲಿಸುವಂತೆ ಸೂಚಿಸಿದರು. ಮುಖ್ಯಮಂತ್ರಿಗಳು ಸರ್ಕಾರದ ಯೋಜನೆಗಳನ್ನು ಮತ್ತು ಅವುಗಳ ಸ್ಥಿತಿಯನ್ನು ಆನ್‌ಲೈನ್ ಮೂಲಕ ಅರಿಯಲು ಡ್ಯಾಶ್ ಬೋರ್ಡ್ ಅನುಕೂಲ ಕಲ್ಪಿಸುತ್ತದೆ. ಮುಖ್ಯಮಂತ್ರಿಯವರು ಡ್ಯಾಷ್ ಬೋರ್ಡ್ಗೆ ಚಾಲನೆ ನೀಡಿ, ಕಂದಾಯ, ಬಿಬಿಎಂಪಿ, ಇಂಧನ, ಶಿಕ್ಷಣ, ವಸತಿ, ಗ್ರಾಮೀಣಾಭಿವೃದ್ಧಿ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು. ವಿವಿಧ ಇಲಾಖೆಗಳ ಪ್ರಮುಖ ಕಾರ್ಯಕ್ರಮಗಳ ಕುರಿತು ದಿನ ದಿನದ ಮಾಹಿತಿಯನ್ನು ಡ್ಯಾಷ್ ಬೋರ್ಡಿನಲ್ಲಿ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಈ ಮಾಹಿತಿ ದಾಖಲಿಸುವಲ್ಲಿ ಸ್ಪಷ್ಟತೆ, ನಿಖರತೆ ಇರಬೇಕು. ಯಾವುದೇ ಗೊಂದಲಕ್ಕೆಡೆಮಾಡಬಾರದು ಎಂದು ತಿಳಿಸಿದರು. ನೋಡಲ್ ಅಧಿಕಾರಿಗಳು ಹಾಗೂ ಸರ್ಕಾರದ ಹಂತದಲ್ಲಿ ಇಲಾಖಾ ಮುಖ್ಯಸ್ಥರು ಈ ಮಾಹಿತಿಯ ಕುರಿತು ವಿಶೇಷ ಆಸಕ್ತಿ ವಹಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮ ರೂಪಿಸುವಷ್ಟೇ ಪ್ರಾಮುಖ್ಯತೆಯನ್ನು ಅನುಷ್ಠಾನಕ್ಕೆ ಸಹ ನೀಡಬೇಕು. ಹಿರಿಯ ಅಧಿಕಾರಿಗಳು ಆಸಕ್ತಿ ವಹಿಸದಿದ್ದರೆ ತಳ ಹಂತದ ಅಧಿಕಾರಿಗಳು ನಿರ್ಲಕ್ಷö್ಯ ಮಾಡುತ್ತಾರೆ. ಆದ್ದರಿಂದ ಇಲಾಖಾ ಮುಖ್ಯಸ್ಥರು ಕಾರ್ಯಕ್ರಮದ ಫಲಾನುಭವಿಗೆ ಸೌಲಭ್ಯ ತಲುಪಿಸುವವರೆಗೂ ಖಾತರಿಪಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ತಾ. ೭ ರಿಂದ ನಾಡಹಬ್ಬ ಮೈಸೂರು ದಸರಾ ಆಚರಣೆ

ಬೆಂಗಳೂರು, ಅ. ೫: ನಾಡಹಬ್ಬ ದಸರಾ ಆರಂಭಕ್ಕೆ ಇನ್ನೂ ಎರಡೇ ದಿನ ಬಾಕಿ ಇದ್ದು, ಸರ್ಕಾರದ ಮಟ್ಟದಲ್ಲಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆ ನಡೆಯಲಿದೆ. ತಾ. ೭ ರಂದು ಬೆಳಿಗ್ಗೆ ಉದ್ಘಾಟನೆಯಾದರೆ, ತಾ. ೧೫ ರಂದು ವಿಜಯದಶಮಿಗೆ ಮುಕ್ತಾಯವಾಗಲಿದ್ದು, ಕೋವಿಡ್-೧೯ ಸೋಂಕಿನ ಮಧ್ಯೆ ಎಚ್ಚರಿಕೆಯಿಂದ ಆಚರಣೆ ಮಾಡಬೇಕಿದೆ. ಈ ಹಿನ್ನೆಲೆ ಸರ್ಕಾರ ದಸರಾ ಹಬ್ಬ ಆಚರಣೆಗೆ ಮೈಸೂರು ಮತ್ತು ರಾಜ್ಯದ ಬೇರೆ ಕಡೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ತಾ. ೭ ರಂದು ಸಂಜೆ ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬಕ್ಕೆ ಚಾಲನೆ, ಮೈಸೂರು ದಸರಾ ಉದ್ಘಾಟನೆಗೆ ೧೦೦ ಜನರಿಗೆ ಅವಕಾಶ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ೪೦೦ ಜನರ ಮಿತಿ, ದಸರಾದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ೧ ಡೋಸ್ ಲಸಿಕೆ ಪಡೆದಿರಬೇಕು, ಹೊರಗಿನಿಂದ ಬರುವವರಿಗೆ ಆರ್.ಟಿ.ಪಿ.ಸಿ.ಆರ್. ಟೆಸ್ಟ್ ಕಡ್ಡಾಯ. ಅರಮನೆ ಆವರಣದಲ್ಲಿ ದಸರಾ ನಡೆಯಬೇಕಾಗಿದ್ದು, ಜನರು ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು, ವರ್ಚುವಲ್ ಮೂಲಕ ಜಂಬೂ ಸವಾರಿಗೆ ವೀಕ್ಷಣೆ, ಕಾರ್ಯಕ್ರಮದಲ್ಲಿ ೪೦೦ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಅಕ್ಟೋಬರ್ ೧೫ ರಂದು ನಡೆಯುವ ಜಂಬೂ/ಪAಜಿನ ಕವಾಯತಿಗೆ ೫೦೦ ಜನರಿಗೆ ಮಾತ್ರ ಅವಕಾಶವಿದೆ. ದೈಹಿಕ ಅಂತರ ಇಲ್ಲದ ಕಾರ್ಯಕ್ರಮಗಳಿಗೆ ನಿಷೇಧ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚನೆ ಪಾಲಿಸಬೇಕು ಇತ್ಯಾದಿ ನಿಯಮಗಳು ಸರ್ಕಾರದ ಮಾರ್ಗಸೂಚಿಯಲ್ಲಿವೆ. ಈ ಬಾರಿಯೂ ಸರಳ ದಸರಾ ಆಚರಣೆಗೆ ಅವಕಾಶವಿದ್ದು, ರಾಜ್ಯದ ಬೇರೆ ಕಡೆಗಳಲ್ಲಿ ೪೦೦ಕ್ಕಿಂತ ಹೆಚ್ಚು ಜನರು ಒಮ್ಮೆಗೇ ಸೇರುವಂತಿಲ್ಲ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ರೈತರ ಪ್ರತಿಭಟನೆ ಕೊನೆಯಾಗಲೇಬೇಕು; ಕೇಂದ್ರ ಸರ್ಕಾರ

ನವದೆಹಲಿ, ಅ. ೫: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಂಥ ಅಹಿತಕರ ಘಟನೆ ಮರುಕಳಿಸದಂತೆ ತಡೆಯಲು ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿರುವ ಪ್ರತಿಭಟನೆಯನ್ನು ಕೊನೆಗೊಳಿಸಲೇಬೇಕಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ತಿಳಿಸಿದೆ. ಕೃಷಿ ಕಾಯ್ದೆಗಳ ಸಾಂವಿಧಾನಿಕತೆ ನ್ಯಾಯಾಲಯದ ಮುಂದೆ ಬಾಕಿ ಇರುವಾಗ ರೈತರು ಪ್ರತಿಭಟನೆ ಮುಂದುವರೆಸುತ್ತಿರುವ ಕುರಿತು ನ್ಯಾಯಾಲಯ ಪ್ರಸ್ತಾಪ ಮಾಡಿದೆ. ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿದ ವೀಡಿಯೋ ಶೇರ್ ಮಾಡಿದ ಕಾಂಗ್ರೆಸ್ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ವಾಹನ ಹರಿದ ವೀಡಿಯೋ ಶೇರ್ ಮಾಡಿದ ಕಾಂಗ್ರೆಸ್ ಕೇಂದ್ರ ಸರ್ಕಾರ ಪರಿಚಯಿಸಿದ್ದ ಮೂರು ನೂತನ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ಜನವರಿ ೨, ೨೦೨೧ರಂದು ತಡೆ ನೀಡಿತ್ತು. ಆದರೆ ರೈತರು ಈ ಕಾಯ್ದೆಗಳ ರದ್ಧತಿಗೆ ಪಟ್ಟುಹಿಡಿದಿದ್ದು, ಪ್ರತಿಭಟನೆ ಮುಂದುವರೆಸಿದ್ದರು. ರೈತರು ಬಯಸಿದರೆ ಪ್ರತಿಭಟನೆ ನಡೆಸಬಹುದು. ಅಧಿಕಾರಿಗಳು ಅವರ ಪ್ರತಿಭಟನೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಉನ್ನತ ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿತ್ತು. ಅಂದಿನಿAದಲೂ ರೈತರ ಪ್ರತಿಭಟನೆ ಮುಂದುವರೆದಿದೆ. ಆದರೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಭಾನುವಾರ ನಡೆದ ಘಟನೆಯಿಂದ ಮತ್ತೆ ರೈತರ ಪ್ರತಿಭಟನೆ ವಿಷಯ ಮುನ್ನೆಲೆಗೆ ಬಂದಿದೆ.