ಶನಿವಾರಸAತೆ, ಅ. ೫: ಶನಿವಾರಸಂತೆ ಪ್ರವಾಸಿ ಮಂದಿರದ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದ ಶ್ರೀ ಮನೋರ ಭಂತೇಜಿಗಳ ದಿವ್ಯ ಸಾನಿಧ್ಯದಲ್ಲಿ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಂದರ್ಭ ಹಾಸನ ಜಿಲ್ಲಾ ಸಂಚಾಲಕ ಜಗದೀಶ್ ಹಡ್ಲಳ್ಳಿ, ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಜೆ.ಆರ್. ಪಾಲಾಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಎಸ್. ವಿರೇಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ವಿ. ಸಂದೀಪ್, ಹೋಬಳಿ ಅಧ್ಯಕ್ಷ ಶಿವಲಿಂಗ, ಸಂಘಟನೆ ಕಾರ್ಯಕರ್ತರುಗಳಾದ ಎಸ್.ಟಿ. ಮೋಹನ, ಶಿವ, ಎಸ್.ಜೆ. ರಾಜಪ್ಪ, ಮಂಜು ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು. ಎಂ.ಎಸ್. ವಿರೇಂದ್ರ ಸ್ವಾಗತಿಸಿ, ಎ.ಜೆ. ರಾಜಪ್ಪ ವಂದಿಸಿದರು.