ಕಣಿವೆ, ಅ. ೫: ಮಾದಾಪುರದ ಬಾಲಾಜಿ ಎಸ್ಟೇಟ್ ಸಮೀಪದ ಅಶೋಕ್ ಎಂಬವರ ಮನೆಯ ಜಾನುವಾರುಗಳ ಕೊಟ್ಟಿಗೆಯಲ್ಲಿದ್ದ ಕಾಳಿಂಗ ಸರ್ಪವನ್ನು ಏಳನೇ ಹೊಸಕೋಟೆಯ ಪುಷ್ಪಾಧರ (ಸ್ನೇಕ್ ಶಾಜಿ) ಜೋಪಾನವಾಗಿ ಹಿಡಿದು ಪುಷ್ಪಗಿರಿ ವನ್ಯಧಾಮದ ಕೊಲ್ಲಿಯೊಂದರಲ್ಲಿ ಬಿಟ್ಟಿದ್ದಾರೆ.
ಸುಮಾರು ೧೨.೫ ಅಡಿಗಳಷ್ಟು ಉದ್ದವಿದ್ದ ಈ ಕಾಳಿಂಗ ಸರ್ಪವು ಅಶೋಕ್ ಎಂಬವರ ಜಾನುವಾರು ಕೊಟ್ಟಿಗೆಯಲ್ಲಿ ಕೇರೆ ಹಾವನ್ನು ನುಂಗುತಿತ್ತು ಎನ್ನಲಾಗಿದೆ. ಈ ಸಂದರ್ಭ ಕಾಳಿಂಗ ಸರ್ಪವನ್ನು ಸಂಜೆ ೫ ಗಂಟೆ ಸಮಯದಲ್ಲಿ ಕಂಡು ಭಯಭೀತರಾದ ಅಶೋಕ್ ಅವರು ಕೂಡಲೇ ಏಳನೇ ಹೊಸಕೋಟೆಯ ಸ್ನೇಕ್ ಶಾಜಿ ಅವರನ್ನು ಸಂಪರ್ಕಿಸಿದಾಗ ಸಂಜೆ ೬.೩೦ ರ ಸಮಯಕ್ಕೆ ಸ್ಥಳಕ್ಕೆ ಧಾವಿಸಿದ ಶಾಜಿ, ಕಾಳಿಂಗ ಸರ್ಪವನ್ನು ಸೆರೆಹಿಡಿದು ಚೀಲದೊಳಕ್ಕೆ ಹಾಕಿ ಪುಷ್ಪಗಿರಿ ವನ್ಯಧಾಮಕ್ಕೆ ಬಿಟ್ಟ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಲ್ಲಿಯಾದರೂ ಯಾವುದೇ ತರಹದ ಹಾವುಗಳು ಕಂಡು ಬಂದಲ್ಲಿ ಅವುಗಳನ್ನು ಕೊಲ್ಲಲು ಹೋಗದಿರಿ. ಕಲ್ಲು ಕೂಡ ಬೀಸದಿರಿ. ನನಗೊಂದು ಕರೆ ಮಾಡಿದರೆ ನಾನು ಬಂದು ಅದನ್ನು ಜೋಪಾನವಾಗಿ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಡುತ್ತೇನೆ ಎಂದು ಕೇಳಿಕೊಳ್ಳುವ ಸ್ನೇಕ್ ಶಾಜಿಯ ಸಂಪರ್ಕ ಸಂಖ್ಯೆ ೯೪೪೮೭ ೯೨೨೬೧