ಪೊನ್ನಂಪೇಟೆ, ಅ. ೪: ಗೋಣಿಕೊಪ್ಪಲು ರೋಟರಿ ಕ್ಲಬ್ ವತಿಯಿಂದ ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಹಾತೂರು ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಸೇತು ಮಾರ್ಗದರ್ಶಿಯ ೧೦೦ ಪುಸ್ತಕಗಳನ್ನು ಉಚಿತವಾಗಿ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಗೋಣಿಕೊಪ್ಪ ರೋಟರಿ ಕ್ಲಬ್‌ನ ಅಧ್ಯಕ್ಷೆ ನೀತಾ ಕಾವೇರಮ್ಮ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ಭಾಷೆ ವಿಷಯದ ವಿದ್ಯಾಸೇತು ಪುಸ್ತಕಗಳು ೧೦ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ವರದಾನವಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ್, ಗೋಣಿಕೊಪ್ಪ ರೋಟರಿ ಕ್ಲಬ್‌ನ ರೀಟಾ ದೇಚಮ್ಮ, ಶುಭಾಶಿಣಿ, ಅರುಣ್ ತಮ್ಮಯ್ಯ, ಕೆ.ಬಿ. ನೆವಿನ್, ವಾಸು ಉತ್ತಪ್ಪ, ಕೆ.ಎನ್. ವಿಜಯ್, ಪಿ.ಬಿ. ಪೂಣಚ್ಚ, ಕಿಶೋರ್ ಮಾದಪ್ಪ ಇನ್ನಿತರು ಹಾಜರಿದ್ದರು.