*ಸಿದ್ದಾಪುರ, ಅ.೪: ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ನಿರ್ವಹಣಾಧಿಕಾರಿ ಐಯ್ಯಂಡ್ರ ಪಳಂಗಪ್ಪ ಅವರು ನಿವೃತ್ತಿ ಹೊಂದಿದ್ದು, ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಕಳೆದ ೪೦ ವರ್ಷಗಳ ಸುದೀರ್ಘ ಸೇವೆಯನ್ನು ಮಾಲ್ದಾರೆ ಸಹಕಾರ ಸಂಘದಲ್ಲೇ ಸಲ್ಲಿಸಿದ್ದು, ಇವರ ಕಾರ್ಯ ಶ್ಲಾಘನೀಯವೆಂದು ಸಂಘದ ಅಧ್ಯಕ್ಷ ಚೇರಂಡ ನಂದಾ ಸುಬ್ಬಯ್ಯ ತಿಳಿಸಿದರು.

ಉಪಾಧ್ಯಕ್ಷ ಮುಕ್ಕಾಟಿರ ಬೋಪಣ್ಣ, ಆಡಳಿತ ಮಂಡಳಿಯ ಪ್ರಮುಖರು ಹಾಗೂ ಸಿದ್ದೇಶ್ವರ ದವಸ ಭಂಡಾರದ ಅಧ್ಯಕ್ಷ ಮುಕ್ಕಾಟಿರ ನಂಜಪ್ಪ ಹಾಜರಿದ್ದರು.