ಕರಿಕೆ, ಅ. ೩: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಣಂತಿಯರು, ಮಕ್ಕಳು, ಗರ್ಭಿಣಿಯರಿಗೆ ವಿತರಿಸಿದ ಅಕ್ಕಿಯಲ್ಲಿ ಬಿಳಿ ಬಣ್ಣದ ಪ್ಲಾಸ್ಟಿಕ್ ರೂಪದ ವಸ್ತು ಪತ್ತೆಯಾಗಿರುವ ಘಟನೆಯಿಂದ ಫಲಾನುಭವಿಗಳು ಆತಂಕಕ್ಕೆ ಒಳಗಾದರು. ಈ ಬಗ್ಗೆ ಪರಿಶೀಲಿಸಿದಾಗ ಅಕ್ಕಿ ರೂಪದ ಬಿಳಿ ಬಣ್ಣದ ವಸ್ತು ಇದ್ದು ನೀರಿಗೆ ಹಾಕಿ ಪರೀಕ್ಷಿಸಿದಾಗ ತೇಲುತ್ತಿತ್ತು.

ಅಕ್ಕಿ ತಂದ ಆತಂಕ...!

(ಮೊದಲ ಪುಟದಿಂದ) ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅರುಂಧತಿಯವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಪಡೆದಾಗ ಕೇಂದ್ರ ಸರಕಾರವು ಸಾಧಾರಣ ಅಕ್ಕಿಯಲ್ಲಿರುವ ಅಪೌಷ್ಟಿಕತೆ ಕಡಿಮೆ ಮಾಡಲು ಪೌಷ್ಟಿಕಾಹಾರ ವಿಷೇಶ ಯೋಜನೆಯಡಿಯಲ್ಲಿ ೧೧೫ ಜಿಲ್ಲೆಗಳನ್ನು ಆಯ್ಕೆ ಮಾಡಿದ್ದು, ರಾಜ್ಯದಲ್ಲಿ ಪ್ರಾಯೋಗಿಕವಾಗಿ ಐದು ಜಿಲ್ಲೆ ಗುರುತಿಸಿದೆ.

ಇದರಲ್ಲಿ ಕೊಡಗು ಜಿಲ್ಲೆ ಸೇರಿದೆ. ಸೆಪ್ಟೆಂಬರ್ ತಿಂಗಳಲ್ಲಿ ಕೇಂದ್ರದ ಈ ವಿಶೇಷ ಯೋಜನೆಯಡಿಯಲ್ಲಿ ಆಹಾರ ಪೂರೈಕೆ ಆಗಿದೆ. ಇದರಲ್ಲಿ ವಿತರಿಸಿದ ಅಕ್ಕಿಯಲ್ಲಿ ಕಬ್ಬಿಣಾಂಶ, ಪಾಲಿಕ್ ಆಸಿಡ್, ಬಿ ಕಾಂಪ್ಲೆಕ್ಸ್, ವಿಟಮಿನ್‌ಗಳನ್ನು ಒಂದು ಕೆಜಿ ಅಕ್ಕಿಗೆ ನೂರು ಗ್ರಾಂನAತೆ ಮಿಶ್ರಣ ಮಾಡಲಾಗುತ್ತಿದ್ದು, ಇದು ಬಿಳಿ ಬಣ್ಣದ ಅಕ್ಕಿಯ ಆಕಾರ ಹೊಂದಿರುವದಾಗಿ ಮಾಹಿತಿ ನೀಡಿದರಲ್ಲದೆ, ಇದರಿಂದ ಯಾರೂ ಆತಂಕಗೊಳ್ಳವ ಅಗತ್ಯವಿಲ್ಲ ಎಂದಿದ್ದಾರೆ. ಇದೀಗ ನನ್ನ ಗಮನಕ್ಕೆ ಬಂದಿದ್ದು, ಈ ಬಗ್ಗೆ ಪ್ರತಿ ಅಂಗನವಾಡಿ ಕೇಂದ್ರಗಳಿಗೆ ಮಾಹಿತಿ ನೀಡಲು ಕ್ರಮ ವಹಿಸಲಾಗುವುದು ಎಂದರು. -ಸುಧೀರ್ ಹೊದ್ದೆಟ್ಟಿ