ಮಡಿಕೇರಿ, ಅ. ೩: ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ತೀರ್ಥೋದ್ಭವ ಸಂದರ್ಭ ನಿರ್ಬಂಧ ಹೇರಲು ಮುಂದಾಗಿರುವ ಕ್ರಮದ ಬಗ್ಗೆ ಅಸಮಾಧಾನಗಳು ವ್ಯಕ್ತಗೊಳ್ಳುತ್ತಿವೆ. ಈ ಬಗ್ಗೆ ಜಂಟಿ ಹೇಳಿಕೆ ನೀಡಿರುವ ಅಖಿಲ ಕೊಡವ ಸಮಾಜ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಹಾಗೂ ಪ್ರತ್ಯೇಕ ಹೇಳಿಕೆ ನೀಡಿರುವ ಪೊನ್ನಂಪೇಟೆ ಕೊಡವ ಸಮಾಜ ಮತ್ತು ಕೊಡಗು ರಕ್ಷಣಾ ವೇದಿಕೆಗಳು ಸಂಘರ್ಷಕ್ಕೆ ಅವಕಾಶ ಮಾಡಿಕೊಡದೆ ನಿರ್ಬಂಧ ಆದೇಶವನ್ನು ತಕ್ಷಣ ಹಿಂಪಡೆಯು ವಂತೆ ಆಗ್ರಹಿಸಿದ್ದು, ಇಲ್ಲದಿದ್ದಲ್ಲಿ ನಿರ್ಬಂಧವನ್ನು ಉಲ್ಲಂಘಿಸ ಬೇಕಾಗುತ್ತದೆ ಎಂದೂ ಎಚ್ಚರಿಸಿವೆೆ.
ಅಖಿಲ ಕೊಡವ ಸಮಾಜ ಆಕ್ರೋಶ
ಕಾವೇರಿ ತೀರ್ಥೋದ್ಬವ ಸಂದರ್ಭದಲ್ಲಿ ಸ್ಥಳೀಯ ಭಕ್ತಾದಿಗಳಿಗೆ ವಿವಿಧ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸುವ ಬದಲು ಹೊರ ಜಿಲ್ಲೆ, ಹೊರ ರಾಜ್ಯಗಳ ಪ್ರವಾಸಿಗರಿಗೆ ಕಡಿವಾಣ ಹಾಕಬೇಕಿದೆ. ಯಾರ ಕಣ್ಣೊರೆಸಲು ೭ರಿಂದ ೧೭ರವರೆಗೆ ಜಿಲ್ಲೆಯ ಕೆಲವು ಸೀಮಿತವಾದ ಪ್ರವಾಸಿತಾಣಗಳ ಮೇಲೆ ನಿರ್ಬಂಧ? ಇದರಿಂದ ಪ್ರಯೋಜನವಾದರೂ ಏನು ಎಂದು ಅರ್ಥವಾಗುತ್ತಿಲ್ಲ. ಕೂಡಲೆ ಜಿಲ್ಲೆಯ ಎಲ್ಲಾ ಪ್ರವಾಸಿತಾಣ ಗಳನ್ನು ಬಂದ್ ಮಾಡಿ ಪ್ರವಾಸಿಗರಿಗೆ ನಿರ್ಬಂಧ ಹಾಕಿ ಜಿಲ್ಲೆಯೊಳಗಿರುವ ಭಕ್ತಾದಿಗಳಿಗೆ ಮುಕ್ತವಾಗಿ ಕಾವೇರಿ ತುಲಾಸಂಕ್ರಮಣದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಬೇಕಾಗಿದೆ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸAಸ್ಥೆಗಳು ಒತ್ತಾಯಿಸಿದೆ.
ಈ ಕುರಿತು ಸಾಮೂಹಿಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ, ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ನಡೆಯನ್ನು ಖಂಡಿಸಿದ್ದು, ಕಳೆದ ವರ್ಷ ಕೂಡ ಸ್ಥಳೀಯ ಭಕ್ತಾದಿಗಳನ್ನು ತಡೆದು ಗೊಂದಲ ಸೃಷ್ಟಿಸಲಾಗಿತ್ತು, ಇದೀಗ ಪುನಃ ಮತ್ತೊಂದು ತಗಾದೆ ತೆಗೆದಿರುವುದು ಸರಿಯಲ್ಲ ಎಂದರು. ಶನಿವಾರ ಮಡಿಕೇರಿಯಲ್ಲಿ ಉಸ್ತುವಾರಿ ಸಚಿವರು, ಶಾಸಕರುಗಳು, ಜಿಲ್ಲಾಧಿಕಾರಿ ಹಾಗೂ ವಿವಿಧ ಅಧಿಕಾರಿಗಳನ್ನೊಳ ಗೊಂಡ ಸಭೆಯಲ್ಲಿ ತಲಕಾವೇರಿ ತೀರ್ಥೋದ್ಬವ ಸಂದರ್ಭದಲ್ಲಿ ವಾಹನಗಳನ್ನು
(ಮೊದಲ ಪುಟದಿಂದ) ಭಾಗಮಂಡಲ ದಲ್ಲಿಯೇ ತಡೆಯುವಂತೆ ಹಾಗೂ ಭಾಗಮಂಡಲದಿAದ ತಲಕಾವೇರಿಗೆ ಕಾಲ್ನಡಿಗೆಯಲ್ಲಿ ತೆರಳುವ ಸ್ಥಳೀಯ ಭಕ್ತಾದಿಗಳಿಗೆ ಕೂಡ ವ್ಯಾಕ್ಸಿನ್ನೊಂದಿಗೆ ೭೨ ಗಂಟೆಗಳ ನೆಗೆಟಿವ್ ಸರ್ಟಿಫಿಕೇಟ್ ತರಬೇಕು ಎಂದು ಆದೇಶ ಹೊರಡಿಸಿರುವುದು ಸರಿಯಲ್ಲ, ಕೂಡಲೇ ಈ ಆದೇಶವನ್ನು ಹಿಂಪಡೆದು ಪ್ರವಾಸಿಗರಿಗೆ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಲಿ. ಅದುಬಿಟ್ಟು ನಮ್ಮ ತಾಯಿಯ ಹತ್ತಿರ ನಾವು ಹೋಗಲು ಕಾನೂನಿನ ಬೇಲಿ ನಿರ್ಮಿಸುವುದು ಸರಿಯಲ್ಲ, ನಮ್ಮ ಧಾರ್ಮಿಕ ಭಾವನೆಗೆ ಧÀಕ್ಕೆಯಾದರೆ ಬೇಲಿಯನ್ನು ತೆರವುಗೊಳಿಸಲು ನಮಗೆ ಗೊತ್ತಿದೆ ಹಾಗೂ ಇದು ಅನಿವಾರ್ಯ ಕೂಡ ಎಂದು ಎಚ್ಚರಿಸಿದ್ದಾರೆ.
ಕಾವೇರಿ ಮಾತೆಯನ್ನು ಹೆತ್ತಮ್ಮನಂತೆ ಪೂಜಿಸುತ್ತಿರುವ ಕೊಡವರ ದೇವಿ ಹಾಗೂ ಕೊಡಗಿನ ಆರಾಧ್ಯ ದೇವತೆ ವರ್ಷಕ್ಕೊಮ್ಮೆ ತೀರ್ಥ ರೂಪಿಣಿಯಾಗಿ ನಮಗೆ ದರ್ಶನ ನೀಡುತ್ತಿದ್ದು, ಕೊಡವರಿಗೆ ನೀಡಿದ ಮಾತಿನಂತೆ ಆ ತಾಯಿ ವರ್ಷಕ್ಕೊಮ್ಮೆ ತುಲಾಸಂಕ್ರಮಣದAದು ದರ್ಶನ ನೀಡುತ್ತಿದ್ದಾಳೆ. ಈ ಸಂದರ್ಭದಲ್ಲಿ ನಾವು ತಾಯಿಯ ಜೊತೆ ಇರಬೇಕಾದದ್ದು ಮಕ್ಕಳ ಕರ್ತವ್ಯ, ಆದರೆ ಇಲ್ಲಿ ತಾಯಿ ಮಕ್ಕಳನ್ನು ದೂರ ಮಾಡಲು ನೋಡುತ್ತಿರುವುದು ಸರಿಯಲ್ಲ, ಕಳೆದ ಕೆಲವು ವರ್ಷಗಳಿಂದ ಇಲ್ಲದ ನಿಯಮಗಳನ್ನು ನಮ್ಮ ಮೇಲೆ ಹೇರಿ ಗೊಂದಲ ಸೃಷ್ಟಿಸಲಾಗುತ್ತಿದೆ, ನಮ್ಮ ತಾಳ್ಮೆಗೂ ಒಂದು ಮಿತಿ ಇದೆ, ಭಾಗಮಂಡಲದಲ್ಲಿ ವಾಹನ ನಿಲ್ಲಿಸಲು ಸ್ಥಳಾವಕಾಶದ ಕೊರತೆ ಇದ್ದು ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿದೆ ಹಾಗೂ ಭಾಗಮಂಡಲದಿAದ ತಲಕಾವೇರಿಗೆ ಸಾಕಷ್ಟು ದೂರವಿದ್ದು ಎಲ್ಲ್ಲರಿಗೂ ಕಾಲ್ನಡಿಗೆಯಲ್ಲಿ ತೆರಳುವುದು ಅಸಾಧ್ಯ, ಮಕ್ಕಳು ಹಾಗೂ ವಯಸ್ಸಾದವರಿಗೆ ಹಾಗೂ ಅಂಗಾAಗ ವೈಫಲ್ಯ ಇರುವವರಿಗೆ ಮಾತ್ರವಲ್ಲ, ಇತ್ತೀಚಿನ ದಿನಗಳಲ್ಲಿ ಆರೋಗ್ಯವಂತರಿಗೆ ಕೂಡ ಬಿಪಿ, ಶುಗರ್- ಹೀಗೆ ಹಲವಾರು ಸಾಮಾನ್ಯ ಖಾಯಿಲೆಗಳು ಅವರನ್ನು ಕಾಡುತ್ತಿರುತ್ತದೆ. ಅಂತಹವರಿಗೆ ಭಾಗಮಂಡಲದಿAದ ತಲಕಾವೇರಿವರೆಗೆ ಕಾಲ್ನಡಿಗೆಯಲ್ಲಿ ತೆರಳುವುದು ಅಸಾಧ್ಯವಾಗಿದೆ. ಹಾಗೇ ಸ್ಥಳೀಯರಿಗೆ ವ್ಯಾಕ್ಸಿನ್ನೊಂದಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡಿರುವುದು ಸರಿಯಲ್ಲ, ಸ್ಥಳೀಯರಿಗೆ ಆದ್ಯತೆ ನೀಡಿ ಪ್ರವಾಸಿಗರಿಗೆ ಕಡಿವಾಣ ಹಾಕಿ ಎಂಬ ಒತ್ತಾಯವನ್ನು ಈ ಹಿಂದೆಯೇ ಮಾಡಿದ್ದೇವೆ. ಈಗಲೂ ಕೂಡ ಅದನ್ನೇ ಪುನಃ ಹೇಳುತ್ತಿದ್ದೇವೆ ಕೊವೀಡ್ ಸೋಂಕಿನ ದೃಷ್ಟಿಯಿಂದ ಕಾವೇರಿ ತೀರ್ಥೋದ್ಬವದಿಂದ ಕಿರುಸಂಕ್ರಮಣದವರೆಗೂ ಜಿಲ್ಲೆಗೆ ಪ್ರವಾಸಿಗರನ್ನು ನಿರ್ಬಂಧಿಸಬೇಕು. ಅದುಬಿಟ್ಟು ಸ್ಥಳೀಯರ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಈಗಾಗಲೇ ತೀರ್ಥೋದ್ಬವಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಉಳಿದಿದೆ. ಕೂಡಲೇ ಪ್ರವಾಸಿಗರಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಿ ಸ್ಥಳೀಯ ಮೂಲ ನಿವಾಸಿಗಳು ಹಾಗೂ ಸ್ಥಳೀಯ ಭಕ್ತಾದಿಗಳಿಗೆ ಮಾತ್ರ ತೀರ್ಥೋದ್ಬವದಲ್ಲಿ ಯಾವುದೇ ನಿರ್ಬಂಧ ಹೇರದೆ ನಮ್ಮ ಧಾರ್ಮಿಕ ವಿಧಿವಿಧಾನಗಳನ್ನು ಹಾಗೂ ನಮ್ಮ ಹಿರಿಯರ ಕಟ್ಟುಪಾಡುಗಳನ್ನು ಆಚರಿಸಲು ಅವಕಾಶ ಮಾಡಿಕೊಡಬೇಕಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಪ್ರವಾಸಿಗರು ಅಗತ್ಯಕ್ಕಿಂತಲೂ ಹೆಚ್ಚುವರಿಯಾಗಿ ಆಗಮಿಸುತ್ತಿದ್ದಾರೆ, ಇವರಿಗೆ ಯಾವುದೇ ವ್ಯಾಕ್ಸಿನ್ ಸರ್ಟಿಫಿಕೇಟ್ ಅಥವಾ ನೆಗೆಟಿವ್ ಸರ್ಟಿಫಿಕೇಟ್ ಬೇಕಾಗಿಲ್ಲ, ಆದರೆ ನಮ್ಮ ಹಬ್ಬಕ್ಕೆ ಎಲ್ಲಿಲ್ಲದ ನಿಯಮಗಳನ್ನು ಹಾಕುವುದು ಸರಿಯೇ? ನಮ್ಮನ್ನು ತಾಯಿಯ ಹತ್ತಿರ ಹೋಗಲು ತಡೆದರೆ ಯಾವುದೇ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ತೀರ್ಥೋದ್ಬವಕ್ಕೆ ಹೋಗಲು ನಾವು ಬಿಡುವುದಿಲ್ಲ ಎಂದು ಅಖಿಲ ಕೊಡವ ಸಮಾಜ ಹಾಗೂ ಅದರ ಅಂಗಸAಸ್ಥೆಗಳು ಎಚ್ಚರಿಸಿವೆ.
ಪೊನ್ನಂಪೇಟೆ ಕೊಡವ ಸಮಾಜ
ನಾಡಿನ ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅ. ೧೭ ರಂದು ನಡೆಯುವ ತೀರ್ಥೋದ್ಭವದ ಸಂದರ್ಭ ಪವಿತ್ರ ಕ್ಷೇತ್ರದ ದರ್ಶನಕ್ಕೆ ನಿರ್ಬಂಧಗಳ ನಡುವೆ ಭಕ್ತರು ತೆರಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ನೀಡಿರುವ ಹೇಳಿಕೆ ಖಂಡನೀಯವೆAದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಾವೇರಿ ಭಕ್ತರಿಗೆ ನಿರ್ಬಂಧ ಹೇರುವುದು ಸರಿಯಲ್ಲ, ಒಂದು ವೇಳೆ ಸಹನೆ ಮೀರಿ ಸಂಘರ್ಷ ಎದುರಾದರೆ ಅದಕ್ಕೆ ಸಚಿವರು, ಶಾಸಕರು ಹಾಗೂ ಜಿಲ್ಲಾಡಳಿತವೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರ್ಶನ ನೀಡುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡದೆ ತಡೆಯುವುದು ಸರಿಯಲ್ಲ. ನೈಜ ಕಾವೇರಿ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡುವ ರೀತಿ ಸಚಿವರು ಹೇಳಿಕೆ ನೀಡುವಾಗ ಶಾಸಕರು ಮೌನಕ್ಕೆ ಶರಣಾಗಿರುವುದನ್ನು ಗಮನಿಸಿದರೆ ಇದರ ಹಿಂದೆ ಪಿತೂರಿ ಅಡಗಿರುವ ಬಗ್ಗೆ ಸಂಶಯವಿದೆ. ಉಸ್ತುವಾರಿ ಸಚಿವರ ಸಭೆಯಲ್ಲಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಹಾಜರಿದ್ದರೂ ಕೊಡಗಿನ ಭಕ್ತರ ಭಾವನೆಗೆ ಪೂರಕವಾಗಿ ಮಾತನಾಡದೆ ಇರುವುದನ್ನು ನೋಡಿದರೆ ಶಾಸಕರಿಂದಲೇ ಭಕ್ತರನ್ನು ತಡೆಯುವ ಹುನ್ನಾರ ನಡೆಯುತ್ತಿದೆ ಎನ್ನುವ ಭಾವನೆ ವ್ಯಕ್ತವಾಗುತ್ತದೆ ಎಂದು ಆರೋಪಿಸಿದ್ದಾರೆ.
ಕಳೆದ ವರ್ಷವೂ ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ತೀರ್ಥೋದ್ಭವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಕಾವೇರಿ ಭಕ್ತಾದಿಗಳಿಗೆ ನಿರ್ಬಂಧ ಹೇರಿ ಎಲ್ಲಾ ನಿರ್ಧಾರ ಕೈಗೊಂಡರು. ಅಲ್ಲದೆ ತೀರ್ಥೋದ್ಭವ ಸಂದರ್ಭ ಕ್ಷೇತ್ರಕ್ಕೆ ಬಾರದೆ ಗೋಣಿಕೊಪ್ಪ ದಸರಾ ಉದ್ಘಾಟನೆಗೆ ತೆರಳುವ ಮೂಲಕ ತಮ್ಮ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆ. ಈ ಬಾರಿಯೂ ಇವರು ಏನನ್ನು ಸಾಧಿಸಲು ಹೊರಟಿದ್ದಾರೆ ಎಂದು ರಾಜೀವ್ ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿದಿನ ಕೊಡಗು ಜಿಲ್ಲೆಯ ಪ್ರವಾಸಿತಾಣಗಳಿಗೆ ಮತ್ತು ತಲಕಾವೇರಿ ಕ್ಷೇತ್ರಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಇವರೆಲ್ಲರೂ ಕೋವಿಡ್ ನೆಗೆಟಿವ್ ವರದಿ ತಂದಿರುವುದನ್ನು ಆಡಳಿತ ವ್ಯವಸ್ಥೆ ಖಾತ್ರಿ ಪಡಿಸಿಕೊಂಡಿದೆಯೇ ಅಥವಾ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಸೇರುವುದನ್ನು ನಿಯಂತ್ರಿಸಿದೆಯೇ, ಭಾಗಮಂಡಲದಲ್ಲೇ ಭಕ್ತರನ್ನು ತಡೆಯುವುದಾದರೆ ಇಲ್ಲಿ ಜನ ಗುಂಪು ಸೇರಿ ಕೋವಿಡ್ ಹರಡುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಇತರ ಎಲ್ಲಾ ಜಿಲ್ಲೆಗಳಲ್ಲಿ ಜಾತ್ರೆ, ಸಭೆ, ಪ್ರತಿಭಟನೆ, ಚುನಾವಣಾ ಪ್ರಚಾರ ನಡೆಯುತ್ತಿದೆ. ಆದರೆ ಕೊಡಗಿನಲ್ಲಿ ಮಾತ್ರ ಕೋವಿಡ್ ನೆಪವೊಡ್ಡಿ ನಿರ್ಬಂಧಗಳನ್ನು ಹೇರಲಾಗುತ್ತಿದೆ. ಮಡಿಕೇರಿ ಮತ್ತು ಗೋಣಿಕೊಪ್ಪಲು ದಸರಾಕ್ಕೆ ಅನುದಾನ ನೀಡಲಾಗಿದೆ. ಜನರು ಸೇರಬಾರದು ಎಂದು ಹೇಳುವ ಸರ್ಕಾರ ಅನುದಾನ ನೀಡುವ ಅಗತ್ಯವೇನಿತ್ತು, ದಸರಾದಲ್ಲಿ ಜನಜಂಗುಳಿ ಇರುವುದಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರವಾಸಿತಾಣಗಳಲ್ಲಿ ಸಾವಿರಾರು ಜನ ಸೇರಬಹುದು, ಆದರೆ ಪವಿತ್ರ ಕ್ಷೇತ್ರ ತಲಕಾವೇರಿಗೆ ಭಕ್ತರು ಬರಬಾರದು ಎಂದಾದರೆ ಏನರ್ಥ, ಪ್ರವಾಸಿಗರ ಆಗಮನವನ್ನು ಕೂಡ ನಿರ್ಬಂಧಿಸಬಹುದಲ್ಲವೇ, ಅಸ್ಸಾಂ ಸೇರಿದಂತೆ ಇತರ ರಾಜ್ಯಗಳ ಸಾವಿರಾರು ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಇವರ ಆರೋಗ್ಯದ ಸಂಪೂರ್ಣ ದಾಖಲೆ ಜಿಲ್ಲಾಡಳಿತದ ಬಳಿ ಇದೆಯೇ? ಎಂದು ರಾಜೀವ್ ಬೋಪಯ್ಯ ಪ್ರಶ್ನಿಸಿದ್ದಾರೆ.
ಕೊಡವರ ನಿರ್ಲಕ್ಷö್ಯ ಸರಿಯಲ್ಲ
ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ಕ್ಷೇತ್ರದಲ್ಲಿ ಕಾವೇರಿ ತುಲಾಸಂಕ್ರಮಣದ ವಿಧಿ, ವಿಧಾನಗಳ ಆಚರಣೆ ಸಂದರ್ಭ ಕೊಡವ ಸಮುದಾಯದ ಭಕ್ತರನ್ನು ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ರಾಜೀವ್ ಬೋಪಯ್ಯ ಆರೋಪಿಸಿದ್ದಾರೆ.
ತೀರ್ಥೋದ್ಭವದ ದಿನ ಸ್ಥಳೀಯರಿಗೆ ಮಾತ್ರ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗುವುದು ಎಂದು ಕೋಡಿ ಮೋಟಯ್ಯ ಅವರು ನೀಡಿರುವ ಹೇಳಿಕೆ ಸರಿಯಲ್ಲ. ಸೆ. ೨೬ ರಂದು ಪತ್ತಾಯಕ್ಕೆ ಅಕ್ಕಿ ಹಾಕುವ ಪದ್ಧತಿಯಲ್ಲಿ ಪಾಲ್ಗೊಳ್ಳಲು ಮೂಲ ತಕ್ಕಾಮೆಯ ಮಂಡೀರ, ಮಣವಟ್ಟಿರ ಕುಟುಂಬದವರು ಆಗಮಿಸಿದ ಸಂದರ್ಭ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಇದನ್ನು ಗಮನಿಸಿದರೆ ಕೊಡವ ಭಕ್ತರನ್ನು ದೂರವಿಡಲು ಪಿತೂರಿ ನಡೆಯುತ್ತಿದೆ ಎನ್ನುವ ಸಂಶಯ ವ್ಯಕ್ತವಾಗುತ್ತಿದೆ ಎಂದು ತಿಳಿಸಿರುವ ಅವರು ಪತ್ತಾಯಕ್ಕೆ ಅಕ್ಕಿ ಹಾಕುವ ಪದ್ಧತಿ ಬಗ್ಗೆ ಮಾಧ್ಯಮಕ್ಕೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ತಲಕಾವೇರಿಗೆ ಸಾಂಪ್ರದಾಯಿಕ ಕುಪ್ಯ ತೊಟ್ಟು ಕೊಡವರು ಬರಬಾರದು ಎಂದು ಶಾಸಕರ ಆಪ್ತ ವರ್ಗ ಫರ್ಮಾನು ಹೊರಡಿಸಿತು. ನಂತರ ತೀರ್ಥ ಬರುವ ದಿನ ತಲಕಾವೇರಿಗೆ ಪ್ರವೇಶಿಸದಂತೆ ತಡೆ ಮಾಡಿತು. ಈ ವರ್ಷವೂ ಪ್ರವೇಶ ನಿರ್ಬಂಧಕ್ಕೆ ಪ್ರಯತ್ನ ನಡೆದಿದೆ, ತಮ್ಮ ಕ್ಷೇತ್ರ ವ್ಯಾಪ್ತಿಯ ಧಾರ್ಮಿಕ ಕ್ಷೇತ್ರದಲ್ಲಿ ಇಷ್ಟೆಲ್ಲ ಬೆಳವಣಿಗೆಗಳಾಗುತ್ತಿದ್ದರೂ ಶಾಸಕರು ಮೌನವಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನಾದರೂ ಶಾಸಕರು ಮೌನ ಮುರಿದು ನೈಜ ಕಾವೇರಿ ಭಕ್ತರ ಪರ ಸರ್ಕಾರದೊಂದಿಗೆ ಚರ್ಚಿಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕೆಂದು ರಾಜೀವ್ ಬೋಪಯ್ಯ ಒತ್ತಾಯಿಸಿದ್ದಾರೆ.
ಕೊಡಗು ರಕ್ಷಣಾ ವೇದಿಕೆ
ಪವಿತ್ರ ಕ್ಷೇತ್ರ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವದ ಸಂದರ್ಭ ನಿರ್ಬಂಧ ಹೇರಿ ಕೊಡಗಿನ ಭಕ್ತರ ಪ್ರವೇಶಕ್ಕೆ ಅಡ್ಡಿಪಡಿಸಿದಲ್ಲಿ ಕೊಡಗು ರಕ್ಷಣಾ ವೇದಿಕೆಯ ಕಾರ್ಯಕರ್ತರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ತೀರ್ಥರೂಪಿಣಿ ಕಾವೇರಿಯ ದರ್ಶನ ಮಾಡಲಿದ್ದಾರೆ ಎಂದು ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೋವಿಡ್ ಮಾರ್ಗಸೂಚಿಯ ನೆಪವೊಡ್ಡಿ ತಲಕಾವೇರಿಗೆ ಮಾತ್ರ ಸೀಮಿತಗೊಳಿಸಿ ಭಕ್ತರ ಭಾವನೆಗೆ ಧÀಕ್ಕೆ ತರುವ ನಿರ್ಬಂಧಗಳನ್ನು ಹೇರುವುದನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಣದಲ್ಲಿದ್ದರೂ ಪವಿತ್ರ ಕ್ಷೇತ್ರಗಳ ಮೇಲೆ ನಿಯಂತ್ರಣ ಹೇರುತ್ತಿರುವ ಆಡಳಿತ ವ್ಯವಸ್ಥೆ ಪಾಸಿಟಿವಿಟಿ ಪ್ರಮಾಣ ಶೇ.೨ ಕ್ಕಿಂತ ಕಡಿಮೆ ಇದೆ ಎಂದು ಪ್ರವಾಸಿತಾಣಗಳನ್ನು ಮುಕ್ತಗೊಳಿಸಿ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಆದರೆ ವರ್ಷಕ್ಕೆ ಒಂದು ಬಾರಿ ತಲಕಾವೇರಿಯಲ್ಲಿ ಘಟಿಸುವ ತೀರ್ಥೋದ್ಭವದ ಪವಿತ್ರ ಕ್ಷಣವನ್ನು ಕಣ್ತುಂಬಿಕೊಳ್ಳಲು ಅವಕಾಶ ನೀಡದೆ ನಿರಾಕರಿಸುತ್ತಿರುವುದು ಭಕ್ತರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರತಿದಿನ ತಲಕಾವೇರಿ ಕ್ಷೇತ್ರಕ್ಕೆ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಿದ್ದಾರೆ. ಇವರುಗಳು ವ್ಯಾಕ್ಸಿನ್ ಪಡೆದಿದ್ದಾರೆಯೇ ಅಥವಾ ನೆಗೆಟಿವ್ ವರದಿ ಹೊಂದಿದ್ದಾರೆಯೇ ಎನ್ನುವುದನ್ನು ಜಿಲ್ಲಾಡಳಿತ ಪರಿಶೀಲನೆ ನಡೆಸಿದೆಯೇ ಎಂದು ಪ್ರಶ್ನಿಸಿದ್ದಾರೆ.
ತುಲಾಸಂಕ್ರಮಣದAದು ಭಾಗಮಂಡಲದಲ್ಲಿ ಭಕ್ತರ ವಾಹನ ತಡೆಯುವ ಕ್ರಮ ಹಾಸ್ಯಾಸ್ಪದವಾಗಿದೆ, ಈ ಪ್ರದೇಶದಲ್ಲಿ ವಾಹನ ಮತ್ತು ಜನದಟ್ಟಣೆ ಹೆಚ್ಚಾಗಿ ಕೋವಿಡ್ ಸೋಂಕು ಹರಡುವುದಿಲ್ಲವೇ ಎಂದು ಪ್ರಶ್ನಿಸಿರುವ ಪವನ್ ಪೆಮ್ಮಯ್ಯ, ಉಸ್ತುವಾರಿ ಸಚಿವರು ತಮ್ಮ ಗೊಂದಲಮಯ ನಿರ್ಧಾರಗಳಿಂದ ಹಿಂದೆ ಸರಿಯಬೇಕು ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಭಕ್ತರ ಭಾವನೆಗೆ ಗೌರವ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಆಡಳಿತ ವ್ಯವಸ್ಥೆ ತನ್ನ ಮೊಂಡು ವಾದವನ್ನು ಮುಂದುವರೆಸಿದರೆ ಕೊಡಗು ರಕ್ಷಣಾ ವೇದಿಕೆಯ ಸಾವಿರಾರು ಕಾರ್ಯಕರ್ತರು ನಿರ್ಬಂಧವನ್ನು ಬೇಧಿಸಿ ತಲಕಾವೇರಿ ಪ್ರವೇಶ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.