ಚೆಟ್ಟಳ್ಳಿ, ಅ. ೨: ಅಂರ‍್ರಾಷ್ಟಿçÃಯ ಕಾಫಿ ದಿನದ ಪ್ರಯುಕ್ತ ಮಡಿಕೇರಿ ಕಾಫಿ ಮಂಡಳಿ ವತಿಯಿಂದ ಮಕ್ಕಂದೂರಿನ ವಿಎಸ್‌ಎಸ್‌ಎನ್ ಬ್ಯಾಂಕ್‌ನ ಸಭಾಂಗಣದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಮುಕ್ಕೋಡ್ಲು ಗ್ರಾಮದ ಬೆಳೆಗಾರ ಶಾಂತೆಯAಡ ಸುಬ್ಬಯ್ಯ ವಹಿಸಿದ್ದರು.

ತೋಟಗಾರಿಕಾ ಇಲಾಖಾ ಉಪ ನಿರ್ದೇಶಕ ಶಶಿಧರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾಫಿ ಮಂಡಳಿಯ ಉಪ ನಿರ್ದೇಶಕ ಶಿವಕುಮಾರಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಪ್ರಯುಕ್ತ ಕಾಫಿ ಮಂಡಳಿಯ ಮಡಿಕೇರಿ ವಿಭಾಗ ಆಯೋಜಿಸಿದ್ದ ಚಿತ್ರ ಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಚಿತ್ರಗಳನ್ನು ಬಿಡಿಸಿ ಆಯ್ಕೆಗೊಂಡಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಈ ವರ್ಷದ ಅಂರ‍್ರಾಷ್ಟಿçÃಯ ಕಾಫಿ ದಿವಸದ ಆಶಯಕ್ಕೆ ಅನುಗುಣವಾಗಿ, ಕಾಫಿ ಉದ್ಯಮದಲ್ಲಿ ತೊಡಗಿಸಿಕೊಂಡು ಕಾಫಿ ರಪ್ತು ಮತ್ತು ಉತ್ತಮ ಗುಣಮಟ್ಟದ ಕಾಫಿಪುಡಿಯನ್ನು ಅಮೆಜಾನ್ ಆನ್‌ಲೈನ್ ಮಾರುಕಟ್ಟೆಯ ಮುಖಾಂತರ ಮಾರಾಟ ಮಾಡುತ್ತಾ ದೇಶೀಯ ಮಾರುಕಟ್ಟೆಯಲ್ಲಿ ಛಾಪು ಮೂಡಿಸುತ್ತಿರುವ ಜಿಲ್ಲೆಯ ಉತ್ಸಾಹಿ ಯುವಕರಾದ ಗಾಳಿಬೀಡಿನ ಉಡುದೋಳಿರ ಮೋಕ್ಷಿತ್‌ನÀನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ನಡುವೆ ಭಾಗವಹಿಸಿದ್ದ ಬೆಳೆಗಾರರಿಗೆ ಕಾಫಿಗೆ ಸಂಬAಧಿಸಿದAತೆ ರಸ ಪ್ರಶ್ನೆಗಳನ್ನು ಕೇಳಿ ಸರಿ ಉತ್ತರ ನೀಡಿದವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಮಡಿಕೇರಿ ಕಾಫಿ ಮಂಡಳಿಯ ಹಿರಿಯ ಸಂಪರ್ಕಾಧಿಕಾರಿ ಜಯರಾಮನ್ ಹಾಗೂ ಸಿಬ್ಬಂದಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮಾನಸ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಒದಗಿಸಲಾಯಿತು.