ಗೋಣಿಕೊಪ್ಪ, ಅ. ೨: ಗೋಣಿಕೊಪ್ಪಲು ಕಾಫಿ ಮಂಡಳಿ ವತಿಯಿಂದ ಕಚೇರಿ ಸಭಾಂಗಣದಲ್ಲಿ ಅಂರ್ರಾಷ್ಟಿçÃಯ ಕಾಫಿ ದಿನಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಅರುವತೊಕ್ಕಲು ಸರ್ವದೈವತಾ ವಿದ್ಯಾಸಂಸ್ಥೆಯ ಶಿಕ್ಷಕ ವೃಂದದವರು, ಸ್ಥಳೀಯ ಬೆಳೆಗಾರರಾದ ಕಬ್ಬಚೀರ ಪ್ರಭು, ಮನೆಯಪಂಡ ಪ್ರವೀಣ್, ಗ್ರಾ.ಪಂ. ಸದಸ್ಯ ಕಂದ ದೇವಯ್ಯ ಮತ್ತಿತರರು ಪಾಲ್ಗೊಂಡಿದ್ದರು. ಈ ಸಂದರ್ಭ ಕಾಫಿ ಮಂಡಳಿಯಿAದ ಫಿಲ್ಟರ್ ಕಾಫಿ ವಿತರಿಸಲಾಯಿತು. ಕಾಫಿ ಸೇವನೆಯ ಮಹತ್ವ - ಲಾಭದ ಬಗ್ಗೆ ಮನಿಲ್, ಕೆ.ಟಿ. ಸೋಮಯ್ಯ, ಮಿಥುನ್ ಅವರುಗಳು ಮಾತನಾಡಿದರು.