ಚೆಟ್ಟಳ್ಳಿ, ಅ. ೨: ಕೊಡಗಿನ ಮೂಲದ ಹಲವು ಕಾಫಿ ತಳಿಗಳಿದ್ದು ಇಂದು ಆಧುನಿಕ ತಂತ್ರಜ್ಞಾನದ ನಡುವೆ ಹೊಸತಳಿಗಳಿಂದ ಮೂಲತಳಿಯು ನಾಶಗೊಳ್ಳುತ್ತಿದ್ದು ಅದನ್ನು ಉಳಿಸಿಕೊಳ್ಳುವಂತಾಗಬೇಕು ಎಂದು ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಕರೆ ನೀಡಿದರು. ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕಾಫಿ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರ ಪ್ರಾರಂಭವಾದಲ್ಲಿAದ ಬೆಳೆಗಾರರಿಗೆ ಪ್ರಯೋಜನಕಾರಿ ಯಾಗುತ್ತಿದೆ. ಕಾಫಿ ಬೆಳೆಯನ್ನು ರೈತರ ಬೆಳೆಯ ಪಟ್ಟಿಗೆ ಸೇರಿಸಿದರೆ ಮಾತ್ರ ಬೆಳೆಗಾರರಿಗೆ ಸವಲತ್ತುಗಳು ಸಿಗಲು ಸಾಧ್ಯ. ಕಾಫಿ ಮಂಡಳಿಯು ಬೆಳೆಗಾರರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ನೀಡುತ್ತಿಲ್ಲ. ಅಂರ‍್ರಾಷ್ಟಿçÃಯ ಕಾಫಿ ದಿನದ ಮೂಲಕ ಸರಕಾರವು ಉತ್ತಮ ಕೆಲಸವನ್ನು ಮಾಡುವುದರ ಜೊತೆಗೆ ಸಾಲ ವiನ್ನಾ ನೀಡುವ ಮೂಲಕ ಸಂಕಷ್ಟದಲ್ಲ್ಲಿರುವ ಬೆಳೆಗಾರರಿಗೆ ಸಹಕಾರಿಯಾಗಬೇಕೆಂದು ಅವರು ಹೇಳಿದರು. ಎಲ್ಲಾ ಬೆಳೆಗಾರರು ಮಣ್ಣಿನ ಫಲವತ್ತತೆಯನ್ನು ತಿಳಿಯಲು ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಎಂಬAತೆ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಕೇವಲ ಹತ್ತು ನಿಮಿಷಗಳಲ್ಲಿ ಮಣ್ಣಿನ ಪರೀಕ್ಷೆ ಮಾಡುವ ನೂತನ ತಂತ್ರಜ್ಞಾನದ ಮಣ್ಣು ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಮಣಿ ಉತ್ತಪ್ಪ ತಿಳಿಸಿದರು.

ಈ ವರ್ಷ ೬ನೇ ವರ್ಷದ ಅಂರ‍್ರಾಷ್ಟಿçÃಯ ಕಾಫಿ ದಿನವನ್ನು ಆಚರಿಸುತ್ತಿದ್ದೇವೆ ಎಂದು ಕಾಫಿ ಸಂಶೋಧನಾ ಕೇಂದ್ರದ ಜಂಟಿ ನಿರ್ದೇಶಕ ಡಾ. ಜೆ.ಎಸ್. ನಾಗರಾಜ್ ತಿಳಿಸಿದರು. ಹಿಂದೆಲ್ಲ ಅರೇಬಿಕಾ ಕಾಫಿ ಬೆಳೆಗೆ ಹೆಚ್ಚಾಗಿ ಒತ್ತು ನೀಡುತ್ತಿದ್ದು ರೋಗಗಳ ಬಾಧೆಯಿಂದ ರೋಬಸ್ಟಾ ಕಾಫಿ ಬೆಳೆಗೆ ಹೆಚ್ಚಿನ ಒತ್ತು ನೀಡುವಂತಾಗಿದೆ. ಭಾರತದಲ್ಲಿ ಕಾಫಿ ಉತ್ಪಾದನೆ ಹೆಚ್ಚು ಕಡಿಮೆಯಾದರೂ ವಿಶ್ವದ ಮಾರುಕಟ್ಟೆಯಲ್ಲಿ ಯಾವುದೇ ಪ್ರಭಾವ ಬೀರದು. ಕಾಫಿಯ ಬಳಕೆ ಹೆಚ್ಚಾದಾಗ ಮಾತ್ರ ಮಾರುಕಟ್ಟೆಯಲ್ಲಿ ಕಾಫಿಯ ಬೆಲೆ ಹೆಚ್ಚಾಗಲು ಸಾಧ್ಯವೆಂದರು. ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದ ಜಂಟಿ ನಿರ್ದೇಶಕ ಡಾ. ಜಾರ್ಜ್ ಡ್ಯಾನಿಯಲ್ ಮಾತನಾಡಿ, ಅಂರ‍್ರಾಷ್ಟಿçÃಯ ಕಾಫಿ ದಿನದ ಅಂಗವಾಗಿ ಕಾಫಿ ಬೆಳೆಗಾರರಿಗೆ ಶುಭ ಕೋರಿದರು. ಯುವಜನತೆಗೆ ಕಾಫಿ ದಿನದ ಮಹತ್ವವನ್ನು ಸಾರುವುದೇ ಈ ದಿನದ ವಿಶೇಷವೆಂದರು. ಕಾರ್ಯಕ್ರಮ ನಡೆಸಲು ಸಹಕರಿಸಿದ ಚೆಟ್ಟಳ್ಳಿ ಸಹಕಾರ ಸಂಘಕ್ಕೆ ವಂದಿಸಿ ಕಾಫಿ ಮಂಡಳಿಯ ಕಾರ್ಯಕ್ರಮದಲ್ಲಿ ತಮ್ಮೊಂದಿಗೆ ಸಹಕರಿಸಬೇಕೆಂದರು. ಪ್ರಗತಿಪರ ಬೆಳೆಗಾರ ಐಚೆಟ್ಟಿರ ಶಿವು ಸುಬ್ಬಯ್ಯ ಮಾತನಾಡಿ, ಸುಮಾರು ೨೦ ವರ್ಷಗಳ ಹಿಂದೆ ಉತ್ಪಾದಕರು ಹಾಗೂ ಮಾರಾಟಗಾರರ ನಡುವೆ ಅಂತರ ವಿದ್ದು ಮಧ್ಯವರ್ತಿಗಳಿರುತ್ತಿದ್ದರು. ಈಗ ಹಾಗಿಲ್ಲ ಆನ್‌ಲೈನ್ ಮಾರುಕಟ್ಟೆಯಲ್ಲಿ ಉತ್ಪಾದಕನೇ ನೇರವಾಗಿ ಮಾರಾಟ ಮಾಡಲು ಅವಕಾಶವಿದೆ. ಮಾರಾಟಗಾರರೇ ಉತ್ಪಾದಕರನ್ನು ಹುಡುಕುವ ಪರಿಸ್ಥಿತಿಯಾಗಿದೆ. ೫ ವರ್ಷದ ಹಿಂದೆ ಕಾಫಿ ಉದ್ಯಮವನ್ನು ಸಣ್ಣದಾಗಿ ಪ್ರಾರಂಭಿಸಿದ್ದು ಇಂದು ತಿಂಗಳಿಗೆ ನೂರು ಕೆ.ಜಿ. ಕಾಫಿ ಪುಡಿ ಮಾಡಲಾಗುತ್ತಿದ್ದು ಲಾಭದಾಯಕ ವಾಗಿದೆ ಎಂದು ತಿಳಿಸಿದರು.

ಕಾಫಿ ಬೆಳೆಯಲ್ಲಿ ಉತ್ತಮ ತಳಿಯ ಗಿಡಗಳನ್ನು ಆಯ್ಕೆ ಮಾಡಿಕೊಂಡಾಗ ಮಾತ್ರ ಉತ್ತಮ ಇಳುವರಿ ಪಡೆಯಲು ಸಾಧ್ಯವೆಂದು ಸಸ್ಯತಳಿ ಅಭಿವೃದ್ಧಿ ತಜ್ಞ ಡಾ. ಶಿವುಲಿಂಗು ತಿಳಿಸಿದರು. ಅರೇಬಿಕಾ ಹಾಗೂ ರೋಬಸ್ಟಾ ಗಿಡದ ಮಹತ್ವದ ಬಗ್ಗೆ ತಿಳಿಸಿದರು. ಇಳುವರಿ ಕೊಡದ ಕಾಫಿ ಗಿಡಗಳನ್ನು ಕತ್ತರಿಸಿ ಕಸಿಕಟ್ಟುವುದು ಹಾಗೂ ಸಸ್ಯ ಸಂವರ್ಧನೆಯ ಕ್ರಿಯೆಯ ಮೂಲಕ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದರು.

ಬೆಳೆಗಾರರಿಗೆ ಕಾಫಿ ಬೆಳೆಯ ಬಗ್ಗೆ ಕಾಫಿ ಸಂಶೋಧನಾ ಉಪ ಕೇಂದ್ರದಲ್ಲಿ ತರಬೇತಿ ನೀಡಲಾಗುವು ದೆಂದರು. ಕೇಂದ್ರದ ತಜ್ಞರಾದ ಡಾ. ಮುಖಾರಿಬ್, ಡಾ. ರಂಜಿತ್‌ಕುಮಾರ್, ಡಾ. ರಾಜುಪತಿ, ಡಾ. ಮಂಜುನಾಥ್ ರೆಡ್ಡಿ ಕಾಫಿ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ನಿರ್ದೇಶಕಿ ಪುತ್ತರಿರ ಸೀತಮ್ಮ, ಬೆಳೆಗಾರರು, ಸಹಕಾರ ಸಂಘದ ನಿರ್ದೇಶಕರು, ಕಾಫಿ ಸಂಶೋಧನಾ ಕೇಂದ್ರದ ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಭಾಗವಹಿ ಸಿದ್ದರು. ಚೆಟ್ಟಳ್ಳಿ ಪ್ರೌಢಶಾಲಾ ಮಕ್ಕಳು ಪ್ರಾರ್ಥಿಸಿ, ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ.ಎಸ್. ನಂದಿಸಿ ಸ್ವಾಗತಿಸಿ, ವಂದಿಸಿದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.