ಶನಿವಾರಸಂತೆ, ಅ. ೨: ಬೆಳೆಗಾರರಲ್ಲಿ ಸಂಘಟನೆಯ ಕೊರತೆ ಇರುವುದರಿಂದ ಅಂರ‍್ರಾಷ್ಟಿçÃಯ ಕಾಫಿ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸಿ ಸದುಪಯೋಗ ಪಡಿಸಿಕೊಂಡಾಗ ಮಾತ್ರ ಉತ್ತಮ ಸಂಘಟನೆ ಸಾಧ್ಯ ಎಂದು ಸೋಮವಾರಪೇಟೆ ತಾಲೂಕು ಕಾಫಿ ಮಂಡಳಿ ಜೆ.ಎಲ್.ಒ. ವಿಶ್ವನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ಅಂರ‍್ರಾಷ್ಟಿçÃಯ ಕಾಫಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗೆ ಮಾತ್ರ ಕಾಫಿ ಬೆಳೆ ಸೀಮಿತವಾಗಿದೆ.

ಹವಾಮಾನ ವೈಪರೀತ್ಯ ಬೆಳೆಗಾರರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಅಂರ‍್ರಾಷ್ಟಿçÃಯ ಹಾಗೂ ಸ್ಥಳೀಯ ಬೆಲೆಯಲ್ಲೂ ವ್ಯತ್ಯಾಸವಿದೆ.

ಸಮಸ್ಯೆಗಳಿಗೆಲ್ಲಾ ಬೆಳೆಗಾರರ ಸಾಂಘಿಕ ಹೋರಾಟವೇ ಪರಿಹಾರ. ವಿವಿಧ ಸಂಘ-ಸAಸ್ಥೆಗಳ ಸಹಕಾರವೂ ಮುಖ್ಯ ಎಂದರು.

ರೋಟರಿ ವಲಯ ಸೇನಾನಿ ವಸಂತ್‌ಕುಮಾರ್, ವಲಯ ಕಾರ್ಯದರ್ಶಿ ಟಿ.ಆರ್. ಪುರುಷೋತ್ತಮ್ ಹಾಗೂ ಬೆಳೆಗಾರ ವಿಜಯ್ ಮಾತನಾಡಿದರು.

ರೋಟರಿ ಅಧ್ಯಕ್ಷ ಹೆಚ್.ಪಿ. ಮೋಹನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಎಂ.ಎಸ್. ವಸಂತ್, ಸದಸ್ಯರಾದ ವಿನೂತ್ ಶಂಕರ್, ಎ.ಡಿ. ಮೋಹನ್ ಕುಮಾರ್ ಹಾಗೂ ಕಾಫಿ ಬೆಳೆಗಾರರು ಹಾಜರಿದ್ದರು.