ಭಾಗಮAಡಲ, ಅ. ೨: ಇತ್ತೀಚೆಗೆ ನಿಧನರಾದ ಭಾಗಮಂಡಲ ಕಾವೇರಿ ಆಟೋ ಚಾಲಕರ ಸಂಘದ ಸದಸ್ಯ ರದೀಶ್ (ಕೃಷ್ಣ) ಅವರ ತಂದೆ ದಾಮೋದರ ಅವರಿಗೆ ಕಾವೇರಿ ಆಟೋ ಚಾಲಕರ ಸಂಘದ ಮಾಸಿಕ ಸಭೆಯಲ್ಲಿ ಮರಣ ನಿಧಿ ಮೊತ್ತ ೫,೦೦೦ ರೂಪಾಯಿಗಳನ್ನು ಹಸ್ತಾಂತರಿಸಲಾಯಿತು.

ಸಭೆಯಲ್ಲಿ ಸಂಘದ ಅಧ್ಯಕ್ಷ ಪಾಣತ್ತಲೆ ನಂದ, ಉಪಾಧ್ಯಕ್ಷ ಭಾನು ಪ್ರಕಾಶ್, ಕಾರ್ಯದರ್ಶಿ ಶ್ರೀನಾಥ್ ನಾಯಕ್, ಖಜಾಂಚಿ ಅಜಿತ್ ಮತ್ತು ಸದಸ್ಯರು ಹಾಜರಿದ್ದರು.