ವೀರಾಜಪೇಟೆ, ಅ. ೧: ಮೈಸೂರು ವಿಭಾಗದ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಶೈಕ್ಷಣಿಕ ವಲಯದ ನೋಡಲ್ ಅಧಿಕಾರಿ ಭಾರತಿ ಅವರು ವೀರಾಜಪೇಟೆ ತಾಲೂಕಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೆ ಭೇಟಿಕೊಟ್ಟು ವೀಕ್ಷಣೆ ಮಾಡಿದರು.

ನಂತರ ಕೆಲವು ಶಾಲೆಗಳಿಗೆ ಭೇಟಿ ಕೊಟ್ಟು ಕೊಡಗು ಜಿಲ್ಲೆಯಲ್ಲಿ ಆರಂಭವಾಗಿರುವ ೬ರಿಂದ ೮ನೇ ತರಗತಿಯ ಮಕ್ಕಳಿಗೆ ಶಾಲೆಗೆ ಸ್ವಾಗತ ಕೋರಿ ಶುಭ ಹಾರೈಸಿದರು. ಪಠ್ಯ ಪುಸ್ತಕದ ಉಗ್ರಾಣಕ್ಕೆ ಭೇಟಿಕೊಟ್ಟು ಪಠ್ಯಪುಸ್ತಕಗಳನ್ನು ಸಕಾಲಕ್ಕೆ ಶಾಲೆಗೆ ತಲುಪಿಸಲು ಅಗತ್ಯವಾದ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ತದನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಭೇಟಿ ಮಾಡಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ, ಶಿಕ್ಷಣ ಸಂಯೋಜಕರಾದ ಅಯ್ಯಪ್ಪ, ಮಾರ್ಗರೇಟ್, ದೈಹಿಕ ಶಿಕ್ಷಕರಾದ ಸೋಮಯ್ಯ, ರಾಜೇಶ್ವರಿ ಹಾಗೂ ಶಿಕ್ಷಕ ವೃಂದವರು ಹಾಜರಿದ್ದರು.