ಮಡಿಕೇರಿ, ಅ. ೧: ಬೆಂಗಳೂರಿನ ಗಾಂಧಿ ಭವನದಲ್ಲಿ ಎಸ್.ಎಸ್ ಕಲಾಸಂಗಮ ವತಿಯಿಂದ ಶ್ರೀದೇವಿ ಎಂ ಅವರಿಗೆ ಕಿಡ್ಸ್ ಟಾಲೆಂಟ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರು ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದೂಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ ಕದನೂರು ಗ್ರಾಮದ ಮುರುಗೇಶ ಎಂ. ಹಾಗೂ ತುಳಸಿ ಎಂ. ದಂಪತಿಯ ಪುತ್ರಿ. ಇವರು ವೀರಾಜಪೇಟೆಯ ಸಂತ ಅನ್ನಮ ಶಾಲೆಯಲ್ಲಿ ೬ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.