ಸೋಮವಾರಪೇಟೆ, ಅ. ೧: ಇಲ್ಲಿನ ಎಸ್‌ಜೆಎಂ ಪ್ರೌಢಶಾಲೆಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಪೋಷಣ್ ಅಭಿಯಾನದ ಉದ್ದೇಶ, ಸರ್ಕಾರದಿಂದ ಲಭಿಸಲು ಸವಲತ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲಾಯಿತು.