ಶನಿವಾರಸಂತೆ, ಅ. ೧: ಶನಿವಾರಸಂತೆ ಚಿನ್ನಳ್ಳಿ ರಸ್ತೆಯಲ್ಲಿ ಗುರುವಾರ ಸಂಜೆ ೭ ಗಂಟೆಗೆ ನಡೆದುಕೊಂಡು ಹೋಗುತ್ತಿದ್ದ ಕೋಳಿ ಮಾಂಸ ವ್ಯಾಪಾರಿ ಮರಿಯಪ್ಪ ಶೆಟ್ಟಿ (೮೦) ಅವರಿಗೆ ಶನಿವಾರಸಂತೆ ಕೆ.ಆರ್.ಸಿ. ವೃತ್ತದ ಕಡೆಯಿಂದ ಬರುತ್ತಿದ್ದ ಆಟೋರಿಕ್ಷಾ (ಕೆಎ.೧೨-ಬಿ.೪೨೧೧) ಡಿಕ್ಕಿಪಡಿಸಿದ್ದು, ತೀವ್ರ ಗಾಯಗೊಂಡ ಮರಿಯಪ್ಪ ಅವರನ್ನು ಹಾಸನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಂಬAಧಿ ಮೋಹನ್ಕುಮಾರಿ ಸುಬ್ರಮಣ್ಯ, ಶನಿವಾರಸಂತೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆ ಹೆಡ್ಕಾನ್ಸ್ಟೇಬಲ್ ಶಶಿಕುಮಾರ್ ಆಟೋರಿಕ್ಷಾವನ್ನು ವಶಪಡಿಸಿಕೊಂಡು ಚಾಲಕ ರವಿಯ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ನಿಲ್ಲಿಸಿದ ಆಟೋಕ್ಕೆ ಡಿಕ್ಕಿ
ಗುರುವಾರ ರಾತ್ರಿ ಮರಿಯಪ್ಪ ಅವರಿಗೆ ಡಿಕ್ಕಿಯಾದ ಆಟೋ ರಿಕ್ಷಾವನ್ನು ರಸ್ತೆ ಬದಿಯಲ್ಲಿ ಚಾಲಕ ರವಿ ನಿಲ್ಲಿಸಿ ಹೋಗಿದ್ದ, ಅದೇ ಆಟೋ ರಿಕ್ಷ್ಷಕ್ಕೆ ಮಾರುತಿ ಓಮಿನಿ ವ್ಯಾನ್ (ಕೆ.ಎ. ೦೩. ಎಂ.ಕೆ. ೮೩೬೩) ಡಿಕ್ಕಿಯಾಗಿದೆ. ಚಾಲಕ ಪರಾರಿಯಾಗಿದ್ದಾನೆ. ರಿಕ್ಷಾ ಚಾಲಕ ರವಿ ನೀಡಿದ ದೂರಿನ ಮೇರೆ ಸಹಾಯಕ ಠಾಣಾಧಿಕಾರಿ ಶಶಿಧರ್ ಮಾರುತಿ ಓಮಿನಿಯನ್ನು ವಶಪಡಿಸಿಕೊಂಡು, ಚಾಲಕನ ಮೇಲೆ ಕಲಂ. ೨೭೯, ೪೨೭, ಐಪಿಸಿ ಪ್ರಕರಣ ದಾಖಲಿಸಿದ್ದಾರೆ.