ಮಡಿಕೇರಿ, ಅ. ೧: ಸಿಖ್ ಸಮುದಾಯದ ಕಿರ್‌ಪಾನ್ ಹಾಗೂ ಗೂರ್ಕ ಜನಾಂಗದ ಕುಕ್ರಿ ವಿಚಾರದಲ್ಲಿ ಸಂವಿಧಾನದ ೨೫ ಹಾಗೂ ೨೬ ನೇ ಪರಿಚ್ಛೇದದ ಮೂಲಕ ಅವುಗಳ ಪಾವಿತ್ರö್ಯತೆ ಕಾಪಾಡಲು ಅನುಕೂಲವಾಗಿದೆ. ಅದೇ ರೀತಿ ಕೊಡವ ಜನಾಂಗದ ಕೋವಿಗೂ ಸಹ ಭದ್ರತೆ ನೀಡಬೇಕಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್‌ನ ಅಧ್ಯಕ್ಷ ನಂದಿನೆರವAಡ.ಯು ನಾಚಪ್ಪ ಅಭಿಪ್ರಾಯಿಸಿದರು.
ಸೆ.೨೯ ರಂದು ಕರಡದ ಬೆಳಿಯಾನೆ ಮಂದ್‌ನಲ್ಲಿ ಸಿ.ಎನ್.ಸಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು. ಕಾಶ್ಮೀರದ ಪಂಡಿತರು ಹೇಗೆ ಕಾಶ್ಮೀರದ ಮೂಲ ನಿವಾಸಿಗಳೊ, ಅದೇ ರೀತಿ ಕೊಡವರು ಕೊಡಗಿನ ಮೂಲ ನಿವಾಸಿಗಳು. ಈ ಕಾರಣದಿಂದಾಗಿ ಸರಕಾರ ಕೊಡವರಿಗೆ ದೊರಕಬೇಕಾದ ಬುಡಕಟ್ಟು ಸ್ಥಾನಮಾನವನ್ನು ನೀಡಬೇಕು. ಕೋವಿ ಹೊಂದುವ ಹಕ್ಕನ್ನೂ ಧಾರ್ಮಿಕ ಹಕ್ಕೆಂದು ಪರಿಗಣಿಸಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದ ಮೊದಲಿಗೆ ನಾಚಪ್ಪ ಅವರು ಆಗಸಕ್ಕೆ ಗುಂಡು ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬೇಪಡಿಯಂಡ ಕಮಲ, ಬಲ್ಲಚಂಡ ಪೂವಯ್ಯ, ಚೆಂಬAಡ ಜನತ್, ನಡಿಕೇರಿಯಂಡ ಅಚ್ಚಯ್ಯ, ಬೇಪಡಿಯಂಡ ಬಿದ್ದಪ್ಪ, ಡಾ.ಬೊವೇರಿಯಂಡ ಉತ್ತಯ್ಯ, ಐತಿಚಂಡ ಭೀಮಯ್ಯ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೇಪಡಿಯಂಡ ದಿನು ಅವರು ಸ್ವಾಗತಿಸಿದರು. ನಡಿಕೇರಿಯಂಡ ಚಿಮ್ಮಣ ಹಾಗೂ ಐತಿಚಂಡ ಅವರುಗಳು ಮಾತನಾಡಿದರು. ಬೇಪಡಿಯಂಡ ಬಿದ್ದಪ್ಪ ವಂದಿಸಿದರು. ಪಟ್ರಪಂಡ ಗಾಯನ ಗೌರಮ್ಮ ಪ್ರಾರ್ಥಿಸಿದರು.