ಸೋಮವಾರಪೇಟೆ, ಅ.೧: ಇಲ್ಲಿನ ೨೭೫೯ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ತಾ.೩ರಂದು ಇಲ್ಲಿನ ಸಾಕ್ಷಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎಚ್.ಕೆ.ಮಾದಪ್ಪ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘಕ್ಕೆ ೧೦೨ ವರ್ಷಗಳು ತುಂಬಿದ್ದು, ಮುಂದಿನ ಮಾರ್ಚ್ ಒಳಗೆ ಶತಮಾನೋತ್ಸವ ಆಚರಿಸಲಾಗುವುದು ಎಂದರು.
ಸAಘವು ವಾರ್ಷಿಕವಾಗಿ ೨೯೨.೬೮ಕೋಟಿ ರೂ.ಗಳ ವ್ಯವಹಾರ ನಡೆಸಿದ್ದು, ೧೦೮.೧೯ಲಕ್ಷಗಳ ನಿವ್ವಳ ಲಾಭ ಗಳಿಸಿದೆ. ೨೦೨೦-೨೧ ಸಾಲಿಗೆ ಸದಸ್ಯರಿಗೆ ಶೇ.೨೦ರ ಡಿವಿಡೆಂಡ್ ನೀಡಲಾಗುವುದು ಎಂದು ಮಾಹಿತಿಯಿತ್ತರು.
ಸಂಘದಲ್ಲಿ ೪೩೬೪ ಸದಸ್ಯರಿದ್ದು, ಒಟ್ಟು ೪೧೦೩.೫೮ಲಕ್ಷ ರೂ. ಸಾಲ ವಿತರಿಸಲಾಗಿದೆ. ಶೇ.೯೬.೪೮ ಸಾಲ ಮರುಪಾವತಿಯಾಗಿದೆ. ಒಟ್ಟು ೩೪೭೫ಲಕ್ಷ ಠೇವಣಿ ಇದೆ. ಸಂಘದಲ್ಲಿ ಜಾಮೀನು ಸಾಲದ ವಿಮಾ ಯೋಜನೆ ಜಾರಿಯಲ್ಲಿದೆ. ಪೌತಿದಾರರಾದ ಸಾಲಗಾರರ ಸಾಲ ಮನ್ನಾವಾಗಲಿದೆ. ೫ ಸ್ವಸಹಾಯ ಗುಂಪುಗಳಿಗೆ ೨೩ ಲಕ್ಷ ರೂ.ಗಳ ಸಾಲ ವಿತರಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಬಿ.ಎಂ.ಈಶ್ವರ್, ನಿರ್ದೇಶಕರುಗಳಾದ ಬಿ.ಎಂ.ಸುರೇಶ್, ರೂಪ ಸತೀಶ್, ಪಿ.ಎ.ಅನಿತಾ ಉಪಸ್ಥಿತರಿದ್ದರು.