ನಾಪೋಕ್ಲು, ಅ.೧ : ನಗರದಲ್ಲಿ ಪತ್ರಿಕಾ ವಿತರಕನಾಗಿದ್ದ ಮೃತÀ ಹರೀಶ್ ಪೂಜಾರಿ ಅವರ ಕುಟುಂಬಕ್ಕೆ ಸ್ಥಳೀಯ ಹಿಂದೂ ಸಂಘಟನೆಯ ವತಿಯಿಂದ ಸಂಗ್ರಹಿಸಲಾದ ಸುಮಾರು ರೂ. ೬೩,೭೦೦ ನಗದನ್ನು ಸಂಘಟನೆಯ ಪ್ರಮುಖರು ಮೃತರ ಮನೆಗೆ ತೆರಳಿ ಪತ್ನಿ ದಿವ್ಯ ಅವರಿಗೆ ವಿತರಿಸಿದರು. ಈ ಸಂದರ್ಭ ಸಂಘಟನೆಯ ಕೆಲೇಟ್ಟೀರ ದೀಪು ದೇವಯ್ಯ, ಬೊಪ್ಪಂಡ ವೀರನ್, ಮಾಳೆಯಂಡ ಸೋಮಣ್ಣ, ಕೆಲೇಟ್ಟೀರ ಸುಬ್ರಮಣಿ, ಕನ್ನಂಬೀರ ಪವನ್, ಅರೆಯಡ ತಿಮ್ಮಯ್ಯ ಇದ್ದರು.