ವೀರಾಜಪೇಟೆ, ಅ. ೧: ವೀರಾಜಪೇಟೆ ತಾಲೂಕು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ೨೦೨೧-೨೨ ನೇ ಸಾಲಿನ ಕೋಣಗೇರಿ ಗ್ರಾಮದ ವಾರ್ಡ್ ಸಭೆ ತಾ.೪ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೋಣಗೇರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಹುದಿಕೇರಿ ಗ್ರಾಮದ ವಾರ್ಡ್ಸಭೆ ತಾ.೪ರಂದು ಮಧ್ಯಾಹ್ನ ೨.೩೦ ಗಂಟೆಗೆ ಗ್ರಾಮ ಪಂಚಾಯಿತಿ ಕಚೆೆÃರಿಯಲ್ಲಿ ನಡೆಯಲಿದೆ.
ಬೆಳ್ಳೂರು ಗ್ರಾಮದ ವಾರ್ಡ್ಸಭೆ ತಾ. ೫ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೆಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.
ಬೇಗೂರು ಗ್ರಾಮದ ವಾರ್ಡ್ಸಭೆ ತಾ. ೭ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಬೇಗೂರು ಹಳೆಪಂಚಾಯಿತಿ ಕಟ್ಟಡದಲ್ಲಿ ನಡೆಯಲಿದೆ.
ಹೈಸೊಡ್ಲೂರು ಗ್ರಾಮದ ವಾರ್ಡ್ಸಭೆ ತಾ.೮ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಹೈಸೊಡ್ಲೂರು ಮಹಿಳಾ ಸಮಾಜ ಕಟ್ಟಡದಲ್ಲಿ ನಡೆಯಲಿದೆ ಎಂದು ಹುದಿಕೇರಿ ಗ್ರಾ.ಪಂ. ಪ್ರಕಟಣೆ ತಿಳಿಸಿದೆ.