ಮಡಿಕೇರಿ, ಸೆ. ೨೭: ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ನೋಡದೇ ಇರುವ, ನೋಡಲು ಆಸಕ್ತಿಯಿರುವ ವಿದ್ಯಾರ್ಥಿಗಳು ಅಪೇಕ್ಷಿಸಿದಲ್ಲಿ ಪ್ರವಾಸೋದ್ಯಮ ಇಲಾಖೆ ಮೂಲಕ ವ್ಯವಸ್ಥೆ ಮಾಡಿ ಕೊಡಲಾಗುವದೆಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರೂ ಆಗಿರುವ

ಉಪವಿಭಾಗಾಧಿಕಾರಿ ಈಶ್ವರ್‌ಕುಮಾರ್ ಖಂಡು ಹೇಳಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಪ್ರವಾಸೋದ್ಯಮ ಪಾಲುದಾರರ ಸಹಯೋಗದೊಂದಿಗೆ ಪ್ರವಾ ಸೋದ್ಯಮ ಇಲಾಖಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಪ್ರವಾಸಿ ಮಾಹಿತಿ

ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದರು. ವಿದ್ಯಾರ್ಥಿಗಳಿಗೆ

ಪ್ರವಾಸೀ ತಾಣಗಳಿಗೆ ಭೇಟಿ ನೀಡಿ ವೀಕ್ಷಿಸುವ ಆಸಕ್ತಿ ಇದ್ದಲ್ಲಿ,

ಇಲಾಖೆಗೆ ಬೇಡಿಕೆ ಸಲ್ಲಿಸಿದರೆ ವಿದ್ಯಾರ್ಥಿಗಳಿಗಾಗಿಯೇ ವಿಶೇಷ ಪ್ಯಾಕೇಜ್ ವ್ಯವಸ್ಥೆ ಮಾಡಲಾಗುವದೆಂದು ಹೇಳಿದರು. ಜಿಲ್ಲೆಯ ಸಂಸ್ಕೃತಿ, ಪರಂಪರೆ, ಪರಿಸರವನ್ನು ಕಾಪಾಡಿ ಕೊಳ್ಳುವದರೊಂದಿಗೆ

(ಮೊದಲ ಪುಟದಿಂದ) ಪರಿಸರ ಸ್ನೇಹಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಿದೆ. ವಿದ್ಯಾರ್ಥಿಗಳು ಕೂಡ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಹಕರಿಸಬೇಕು. ಕಸವನ್ನು ಅಲ್ಲಲ್ಲಿ ಎಸೆಯದೆ ಪ್ರವಾಸಿಗರು ಸೇರಿದಂತೆ ಇತರರಲ್ಲೂ ಜಾಗೃತಿ ಮೂಡಿಸಬೇಕೆಂದು ಹೇಳಿದರು. ಉಪವಿಭಾಗಾಧಿಕಾರಿಗಳ ಪತ್ನಿ ಡಾ. ಪ್ರಿಯಾ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಪ್ರವಾಸೋದ್ಯಮ ಸಮಾಲೋಚಕ ನರ್ತನ್, ಸಿಬ್ಬಂದಿ ಶ್ವೇತ ಚಿತ್ರಕಲಾವಿದ ಕೋಡಿ ಭರತ್ ಸ್ಪರ್ಧೆ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಮೂರ್ನಾಡು ಗ್ರಾಮಲೆಕ್ಕಿಗೆ ಅಕ್ಷತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ಪುಟಾಣಿಗಳು ಸೇರಿದಂತೆ ಹಿರಿಯರವರೆಗೆ ಒಟ್ಟು ೩೦ ಮಂದಿ ಭಾಗವಹಿಸಿದ್ದರು.