ಮಡಿಕೇರಿ, ಸೆ. ೨೭: ಒಂದೂವರೆ ವರ್ಷದಿಂದ ಸ್ಥಗಿತವಾಗಿದ್ದ ಪ್ರಾಥಮಿಕ ಶಾಲಾ ತರಗತಿಗಳು ಇಂದು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ಹರುಷದಿಂದ ಶಾಲೆಗೆ ತೆರಳಿದರು. ೯ ರಿಂದ ೧೨ ನೇ ತರಗತಿಗಳು ಈಗಾಗಲೇ ಪ್ರಾರಂಭವಾಗಿದ್ದು, ೬ ರಿಂದ ೮ನೇ ತರಗತಿಯ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಮತ್ತೆ ಹಾಜರಾದರು. ಶೇ. ೪೫ ರಿಂದ ಶೇ. ೫೦ ರಷ್ಟು ಹಾಜರಾತಿ ಇದ್ದುದ್ದಾಗಿ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶ್ರೀಧರನ್ ಅವರು ಮಾಹಿತಿ ನೀಡಿದರು.

ಮೊದಲನೆಯ ದಿನವಾದ ಕಾರಣ

(ಮೊದಲ ಪುಟದಿಂದ) ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತಾದರೂ ಸಮವಸ್ತç ಧರಿಸಿ ಶಾಲೆಗೆ ಕಾಲ್ನಡಿಗೆಯಲ್ಲಿ, ಬಸ್-ಕಾರುಗಳಲ್ಲಿ ಉತ್ಸಾಹದಿಂದ ವಿದ್ಯಾರ್ಥಿಗಳು ತೆರಳಿದರು. ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಮಕ್ಕಳನ್ನು ಅತಿಥಿಗಳಂತೆ ಸ್ವಾಗತಿಸಿದರು. ಹಲವೆಡೆ ಸಿಹಿ ಹಂಚಿದರು. ಇನ್ನು ಕೆಲವೆಡೆ ಉಚಿತ ಬ್ಯಾಗ್‌ಗಳನ್ನು ನೀಡಿ ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಮಡಿಕೇರಿ ಸಂತ ಮೈಕಲರ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದಲೇ ಪಠ್ಯಕ್ಕೆ ಸಂಬAಧಿಸಿದAತೆ ಪುಸ್ತಕಗಳಿಂದ ಪಾಠ ಓದಿಸಿದರು.ಗುಡ್ಡೆಹೊಸೂರು: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳನ್ನು ವಿನೂತನ ರೀತಿಯಲ್ಲಿ ಸ್ವಾಗತಿಸಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಮಕ್ಕಳಿಗೆ ಉಚಿತ ಬ್ಯಾಗ್ ನೀಡಿ ಸಿಹಿಹಂಚಿ ಬರಮಾಡಿಕೊಳ್ಳಲಾಯಿತು.

ಈ ಸಂದÀರ್ಭ ಶಾಲಾ ಮುಖ್ಯ ಶಿಕ್ಷಕರಾದ ಸಣ್ಣಸ್ವಾಮಿ ಮತ್ತು ಸಹಶಿಕ್ಷಕ ವೃಂದದವರು ಹಾಗೂ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪರಮೇಶ್, ಅನು ಮತ್ತು ಸದಸ್ಯರು ಹಾಗೂ ಪೋಷಕ ವೃಂದದವರು ಹಾಜರಿದ್ದರು. ಸೋಮವಾರಪೇಟೆ: ೬ ರಿಂದ ೮ನೇ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳಿಗೆ, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಜನಪ್ರತಿನಿಧಿಗಳು ಹೂವುಗಳನ್ನು ನೀಡಿ ಸ್ವಾಗತಿಸಿದರು.

ತಾಲೂಕಿನಾದ್ಯಂತ ಇಂದು ೬ ರಿಂದ ೮ನೇ ತರಗತಿವರೆಗಿನ ಮಕ್ಕಳು ಶಾಲೆಗೆ ಸಂಭ್ರಮದಿAದ ಆಗಮಿಸಿದರು. ಶಾಲಾ ಪ್ರವೇಶದ್ವಾರದಲ್ಲಿ ಮಕ್ಕಳಿಗೆ ಥರ್ಮಲ್ ಸ್ಕಾö್ಯನಿಂಗ್ ನಡೆಸಲಾಯಿತು.

ಸರ್ಕಾರದ ಮಾರ್ಗಸೂಚಿಯಂತೆ ತರಗತಿ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಂಬAಧ ಕೊಠಡಿಗಳಲ್ಲಿ ಕುರ್ಚಿ, ಮೇಜುಗಳನ್ನು ಅಳವಡಿಸಲಾಗಿತ್ತು. ಇಲ್ಲಿನ ಎಸ್‌ಜೆಎಂ ಹಿರಿಯ ಪ್ರಾಥಮಿಕ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಕ ವೃಂದ, ಪ.ಪಂ. ಸದಸ್ಯ ಬಿ.ಆರ್. ಮೃತ್ಯುಂಜಯ, ಪ್ರಮುಖರಾದ ಆನಂದ್ ಅವರುಗಳು ಹೂವುಗಳನ್ನು ನೀಡಿ ಸ್ವಾಗತಿಸಿದರು. ವಿದ್ಯಾರ್ಥಿಗಳಿಗೆ ಪುಷ್ಪಾರ್ಚನೆ

*ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕಿನ ಚೆನ್ನಂಗೊಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಸ್ವಾಗತಕ್ಕೆ ಪುಷ್ಪಾರ್ಚನೆ ಹಾಗೂ ಪುಷ್ಪಗುಚ್ಚಗಳನ್ನು ನೀಡಿ ಆತ್ಮೀಯವಾಗಿ ಶಾಲೆಯ ಪ್ರವೇಶಕ್ಕೆ ಸ್ವಾಗತಿಸಿದರು.

ಅಧ್ಯಯನಕ್ಕೆ ಪುಸ್ತಕಗಳನ್ನು ವಿತರಿಸಿ ಪೋಷಕರ ಅನುಮತಿ ಪತ್ರವನ್ನು ಪಡೆದುಕೊಂಡ ಶಿಕ್ಷಕರು ವಿದ್ಯಾರ್ಥಿಗಳ ಆಗಮನಕ್ಕೆ ಹರ್ಷಚಿತ್ತರಾದರು. ಮೊದಲ ದಿನವೇ ಸುಮಾರು ೧೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದರು.

ಚೆನ್ನಂಗೊಲ್ಲಿ ಶಾಲೆಯ ಮುಖ್ಯಶಿಕ್ಷಕಿ ಗಿರಿಜಾ, ಸಹಶಿಕ್ಷಕರಾದ ದಾಕ್ಷಯಿಣಿ, ನಳಿನಿ, ಶ್ರೀಜಾ, ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷೆ ರಮ್ಯ ಹಾಗೂ ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದು, ಶಾಲೆಯ ಪ್ರಾರಂಭದ ದಿನವನ್ನು ಸಂಭ್ರಮಿಸಿದರು.ವೀರಾಜಪೇಟೆ: ವೀರಾಜಪೇಟೆ ವ್ಯಾಪ್ತಿಯಲ್ಲಿ ಶಾಲೆಗೆ ಆಗಮಿಸಿದ ಮಕ್ಕಳಿಗೆ ಶಿಕ್ಷಕರು ಆರತಿಯನ್ನು ಬೆಳಗಿಸಿ ಸಿಹಿ ಹಂಚಿ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿ ಶಾಲೆಗೆ ಬರ ಮಾಡಿಕೊಳ್ಳಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಶೈಲ ಬೀಳಗಿ ಕೋವಿಡ್ -೧೯ ರ ಮಾರ್ಗ ಸೂಚಿಯನ್ವಯ ಮಕ್ಕಳಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ತಿಳಿಸಿದರು. ಮಕ್ಕಳಿಗೆ ಥರ್ಮಲ್ ಸ್ಕಾö್ಯನಿಂಗ್‌ನೊAದಿಗೆ ಸ್ಯಾನಿಟೈಸ್ ಮಾಡಿದ ನಂತರ ಎಲ್ಲಾ ಮಕ್ಕಳಿಗೆ ಸಿಹಿ ಹಂಚುವುದರೊAದಿಗೆ ಮಕ್ಕಳನ್ನು ಶಾಲೆಗೆ ಬರಮಾಡಿಕೊಂಡರು. ವೀರಾಜಪೇಟೆ ಸಮೀಪದ ಕಂಡAಗಾಲ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜ್ಞಾನದ ಮೌಲ್ಯಗಳನ್ನು ತಿಳಿಸಿ ಮುಂದಿನ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಚೆನ್ನಾಗಿ ಕಲಿಯುವಂತೆ ಶುಭ ಹಾರೈಸಿದರು.

ವೀರಾಜಪೇಟೆ ಪಟ್ಟಣದ ಸಂತ ಅನ್ನಮ್ಮ ಶಾಲೆಯಲ್ಲಿ ಶಾಲಾರಂಭದ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ತರಗತಿಗಳಿಗೆ ಆಗಮಿಸಿ ಪಾಠ ಪ್ರವಚನದಲ್ಲಿ ತೊಡಗಿದ್ದರು.ಸುಂಟಿಕೊಪ್ಪ: ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆರಂಭಿಕ ದಿನವಾದ ಸೋಮವಾರ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು ಹೂವಿನಗುಚ್ಚಗಳನ್ನು ನೀಡಿ ಸ್ವಾಗತಿಸಿದರು. ೬ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ೧೯ ಅದರಲ್ಲಿ ೧೧ ಮಕ್ಕಳು ಹಾಜರಾಗಿದ್ದರು. ೭ನೇ ತರಗತಿಯ ವಿದ್ಯಾರ್ಥಿಗಳ ಹಾಜರಾತಿ ೨೬, ಅದರಲ್ಲಿ ೧೫ ಮಂದಿ ಹಾಜರಾಗಿದ್ದರು. ಸರಕಾರಿ ಪ್ರೌಢಶಾಲೆಯ ೮ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ೪೩ ಆಗಿದ್ದು ೨೦ ಮಂದಿ ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದರು.*ಗೋಣಿಕೊಪ್ಪಲು: ವಿದ್ಯಾರ್ಥಿಗಳಿಗೆ ಕಾಗದದ ಕಿರೀಟವನ್ನು ತೊಡಿಸುವ ಮೂಲಕ ವಿಶೇಷ ರೀತಿಯಲ್ಲಿ ಬಹುಪರಾಗ್ ಹೇಳುವ ಮೂಲಕ ಶಿಕ್ಷಕರು ಆರನೇ ಮತ್ತು ಏಳನೇ ತರಗತಿಗೆ ಶಿಕ್ಷಕರು ತಮ್ಮ ಶಿಷ್ಯರುಗಳನ್ನು ಸ್ವಾಗತಿಸಿ ಬರಮಾಡಿಕೊಂಡರು.

ಗೋಣಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರ ಸ್ವಾಗತಕ್ಕೆ ಬೆರಗುಗೊಂಡು ಬಾವುಕರಾದರು.

ಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಸತೀಶ್, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷೆ ಶಾಂತಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯಿತ್ರಿ, ಬಿ.ಆರ್.ಪಿ ವಾಮನ, ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಜ್ಯೋತೀಶ್ವರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವಿಷಯ ಪರಿವೀಕ್ಷಕರಾದ ವಿಶಾಲಾಕ್ಷಿ ಹಾಗೂ ಶಿಕ್ಷಕರು, ಮಕ್ಕಳು, ಪೋಷಕರು ಹಾಜರಿದ್ದರು.