ಶನಿವಾರಸಂತೆ, ಸೆ. ೨೬: ಶನಿವಾರಸಂತೆಯ ಸಮೀಪದ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಬೆಳ್ಳಾರಳ್ಳಿ ರಸ್ತೆಯ ಇಳಿಜಾರಿನಲ್ಲಿ ಇಂದು ಬೆಳಗ್ಗಿನ ಜಾವ ಸುಮಾರು ೬೦೦ ಸಿಮೆಂಟ್ ಮೂಟೆಗಳನ್ನು ತುಂಬಿದ ಆಂಧ್ರದ ಕಾಡುಪಾತ್ರೆಯ ಭಾರೀ ಲಾರಿಯೊಂದು (ಎಪಿ ೦೨ ಟಿಹೆಚ್ ೧೪೨೨) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿ ಮಗುಚಿಕೊಂಡ ಘಟನೆ ನಡೆದಿದೆ.
ಸಿಮೆಂಟ್ ಮೂಟೆಗಳನ್ನು ತುಂಬಿಸಿಕೊAಡು ಸೋಮವಾರಪೇಟೆಗೆ ಹೋಗುತ್ತಿರುವಾಗ ಅವಘಡ ಸಂಭವಿಸಿದೆ. ಲಾರಿಯ ಬಲಭಾಗ ಜಖಂ ಆಗಿದ್ದು, ಚಾಲಕನ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ಲಾರಿಯಲ್ಲಿ ಆಂಧ್ರದ ೩ ಮಂದಿ ಕಾರ್ಮಿಕರಿದ್ದು, ಅಪಾಯದಿಂದ ಪಾರಾಗಿದ್ದಾರೆ.