ಗೋಣಿಕೊಪ್ಪಲು, ಸೆ.೨೬: ಕೊಡವರ ಕೋವಿ ಹಕ್ಕು ಪರ ರಾಜ್ಯ ಉಚ್ಛ ನ್ಯಾಯಾಲಯ ನ್ಯಾಯಯುತ ತೀರ್ಪು ನೀಡಿದೆ. ಭಾರತದಲ್ಲಿ ಬ್ರಿಟೀಷರ ಆಳ್ವಿಕೆಗೂ ಮುನ್ನವೇ ಕೊಡಗಿನಲ್ಲಿ ‘ತಿರಿತೋಕ್’ ತಯಾರಿಸಲಾಗುತ್ತಿತ್ತು. ಸ್ವಾತಂತ್ರ÷್ಯ ಸಂಗ್ರಾಮದ ಸಂದರ್ಭ ಇಡೀ ದೇಶದಲ್ಲಿ ಕೋವಿ ದುರ್ಬಳಕೆ ಆಗಬಹುದು ಎಂದು ಬ್ರಿಟಿಷರು ಕಾನೂನು ತಂದರು. ಆದರೆ ಅಂದು ಕೊಡಗಿನ ಜಮ್ಮಾ ಕೋವಿ ಹಕ್ಕಿಗೆ ಯಾವುದೇ ಚ್ಯುತಿಯಾಗಿರಲಿಲ್ಲ. ಎಂದು ಹೈಕೋರ್ಟ್ ಹಿರಿಯ ವಕೀಲರು, ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.

ಮಾಯಮುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಲ್ಲಿನ ಐರನ್ ಸೈಟ್ ಶೂರ‍್ಸ್ ನೇತೃತ್ವದಲ್ಲಿ ಜರುಗಿದ ಕೈಲ್ ಮುಹೂರ್ತ ಕ್ರೀಡಾಕೂಟದಲ್ಲಿ ಕೋವಿ ಪೂಜೆ ಮತ್ತು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಅವರು ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

೨೦೧೬ರಿಂದಲೇ ಕೊಡವರ ಕೋವಿ ಹಕ್ಕು ಪ್ರಶ್ನಿಸಿ ವಿವಾದವೊಂದು ಹೈಕೋರ್ಟ್ ಮೆಟ್ಟಿಲೇರಿದ್ದು, ಕೊಡಗಿನ ಜಮ್ಮಾ ಕೋವಿ ಹಕ್ಕಿನ ಪರ ಹಲವು ಕೊಡಗು ಅಭಿಮಾನಿಗಳು, ಅನುಭವಿ ವಕೀಲರು ಸಮರ್ಪಕವಾಗಿ ತಮ್ಮ ವಾದ ಮಂಡನೆ ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆ ತೀರ್ಪು ನಮ್ಮ ಪರವಾಗಿ ಬಂದಿದೆ.

ಹAಗಾಮಿ ಮುಖ್ಯನ್ಯಾಯಾಧೀಶ ಸತೀಶ್‌ಚಂದ್ರ ಶರ್ಮ ಅವರು ಮೂಲತಃ ಜಬಲ್‌ಪುರ ದವರಾಗಿದ್ದರೂ ಕೊಡವರ ಕೋವಿ ಹಕ್ಕಿನ ಬಗ್ಗೆ ಅಳವಾಗಿ ಅಧ್ಯಯನ ಮಾಡಿ ನ್ಯಾಯೋಚಿತ ತೀರ್ಪು ನೀಡಿದ್ದಾರೆ. ಜಮ್ಮಾ ಕೋವಿ ಹಕ್ಕು ಬ್ರಿಟೀಷರಿಂದ ನಮಗೆ ಬಳುವಳಿಯಾಗಿ ಬಂದಿಲ್ಲ. ೧೭ ನೇ ಶತಮಾನಕ್ಕೂ ಮುನ್ನವೇ ಕೊಡವರು ಕೋವಿ ಬಳಸುತ್ತಿದ್ದ ಬಗ್ಗೆ ಪುರಾವೆ ಇರುವದಾಗಿ ಹೇಳಿದರು.

ಫೆಡರೇಷನ್ ಆಫ್ ಕೊಡವ ಸಮಾಜ ಹಾಗೂ ಕೊಡವ ನ್ಯಾಷನಲ್ ಕೌನ್ಸಿಲ್ ಪರ ತಾನು ವಕಾಲತ್ತು ವಹಿಸಿದ್ದು, ಸುಪ್ರೀಂ ಕೋರ್ಟ್ ವಕೀಲರಾದ ಸಜನ್‌ಪೂವಯ್ಯ, ಹಿರಿಯ ವಕೀಲರಾದ ಎಂ.ಟಿ. ನಾಣಯ್ಯ, ಮಲ್ಲೇಂಗಡ ಗಗನ್ ಒಳಗೊಂಡAತೆ ಹಲವರ ಪರಿಶ್ರಮದಿಂದಾಗಿ ಐತಿಹಾಸಿಕ ತೀರ್ಪು ಬಂದಿದೆ ಎಂದರು.

ಕೈಲ್ ಮುಹೂರ್ತ ಕ್ರೀಡಾಕೂಟ ಎಲ್ಲೆಡೆ ನಡೆಯಬೇಕು.ಕೊಡವರಿಂದ ಕೋವಿ ಹಕ್ಕು ಎಲ್ಲಿಯೂ ದುರುಪಯೋಗವಾಗಿಲ್ಲ. ಕೋವಿ ನಮ್ಮೆ, ಕೋವಿ ಪೂಜೆ ಗ್ರಾಮೀಣ ಭಾಗದಲ್ಲಿಯೂ ನಡೆಸುವ ಮೂಲಕ ನಮ್ಮ ಶ್ರೀಮಂತ ಸಂಸ್ಕöÈತಿ ರಕ್ಷಣೆ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದು ನುಡಿದರು.

ಒಲಂಪಿಯನ್ ಹಾಕಿ ಆಟಗಾರ ಬಾಳೆಯಡ ಕೆ.ಸುಬ್ರಮಣಿ ಮಾತನಾಡಿ, ಕೊಡಗಿನ ಜನ ಶ್ರಮಜೀವಿಗಳು. ಮನೆಯ ಯಜಮಾನ ಹಾಗೂ ಮಕ್ಕಳು ದುಡಿಮೆಗೆ ಹೊರಹೋಗುವಾಗ ಮನೆಯಲ್ಲಿ ಎರಡು ನಾಯಿ ಹಾಗೂ ಕೋವಿಯನ್ನು ಯಜಮಾನಿಯ ಆತ್ಮ ರಕ್ಷಣೆಗಾಗಿ ಇರಿಸಿ ಹೋಗಲಾಗುತ್ತಿತ್ತು. ನಾವು ಕೈಲ್ ಮುಹೂರ್ತ ಇತ್ಯಾದಿ ಹಬ್ಬಗಳಲ್ಲಿ ಕೋವಿಯನ್ನಿಟ್ಟು ಪೂಜಿಸುವದು ಆತ್ಮಗೌರವದ ಸಂಕೇತವಾಗಿದೆ.ಈ ನಿಟ್ಟಿನಲ್ಲಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಎ.ಎಸ್. ಪೊನ್ನಣ್ಣ ಹಾಗೂ ಹಲವು ವಕೀಲರ ಶ್ರಮದಿಂದಾಗಿ ನ್ಯಾಯದೊರೆತಿದೆ. ಕೊಡವ ಶ್ರೀಮಂತ ಸಂಸ್ಕöÈತಿ ಉಳಿಯಲು ಎಲ್ಲರೂ ಕೈಜೋಡಿಸು ವಂತೆ ಮನವಿ ಮಾಡಿದರು.

ಅಂತರಾಷ್ಟಿçÃಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ ಮಾತನಾಡಿ, ಕೊಡಗಿನ ಯುವ ಜನಾಂಗದಲ್ಲಿ ಉತ್ತಮ್ಮ ಗುರಿಕಾರರಿದ್ದು, ಅಂತರಾಷ್ಟಿçÃಯ ಕ್ರೀಡಾಕೂಟದಲ್ಲಿ ಭಾಗವಹಿಸುವಂತಾಗಬೇಕು. ಈ ನಿಟ್ಟಿನಲ್ಲಿ ಕ್ರೀಡಾ ಸಚಿವರು, ಶಾಸಕರು, ಸಂಸದರು ಹಾಗೂ ಜನಪ್ರತಿನಿಧಿಗಳು ವಿಶೇಷ ಪ್ರಯತ್ನದ ಮೂಲಕ ಕೊಡಗು ಜಿಲ್ಲೆಯಲ್ಲಿ ‘ಶೂಟಿಂಗ್ ರೇಂಜ್’ ಸ್ಥಾಪನೆ ಮಾಡಬೇಕಾಗಿದೆ. ಅಂತರಾಷ್ಟಿçÃಯ ಗುಣ ಮಟ್ಟದ ಶೂಟಿಂಗ್ ತರಬೇತಿ ಜಿಲ್ಲೆಯಲ್ಲಿ ಸಿಗುವಂತಾದರೆ ನಮ್ಮ ಯುವ ಜನಾಂಗ ದೇಶ ವಿದೇಶದ ಶೂಟಿಂಗ್ ಸ್ಪರ್ಧೆಯಲ್ಲಿ ಸಾಧನೆ ಮಾಡಬಹುದು ಎಂದು ಹೇಳಿದರು.

ಕ್ರೀಡಾ ಕೂಟದ ಯೋಜನಾ ನಿರ್ದೇಶಕ ಆಪಟ್ಟೀರ ಆರ್.ಅಯ್ಯಪ್ಪ, ಸಂಚಾಲಕ ಕಂಜಿತAಡ ಪೊನ್ನಪ್ಪ ನೇತೃತ್ವದಲ್ಲಿ ಜರುಗಿದ ತೆಂಗಿನ ಕಾಯಿಗೆ ಹಾಗೂ ಕೋಳಿ ಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ಅತ್ಯಧಿಕ ಸ್ಪರ್ಧಾಳುಗಳು ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು ಇತ್ಯಾದಿ ಭಾಗಗಳಿಂದ ಆಗಮಿಸಿ ಗಮನ ಸೆಳೆದರು. ಯುವತಿಯರೂ, ಬಾಲಕರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಗಮನ ಸೆಳೆದರು. ಇದೇ ಸಂದರ್ಭ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಹಾಕಿ ಪ್ರತಿಭೆ ಬಾಳೆಯಡ ಸುಬ್ರಮಣಿ ಹಾಗೂ ಮಾದಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕಾಳಪಂಡ ಸುಧೀರ್, ಕೆ.ಟಿ.ಟಿಪುö್ಪ ಬಿದ್ದಪ್ಪ, ಬಲ್ಲಣಮಾಡ ರೀಟಾ ಅಪ್ಪಯ್ಯ, ಚೆಪುö್ಪಡೀರ ಕಿಟ್ಟು ಅಯ್ಯಪ್ಪ, ಚೆಪುö್ಪಡೀರ ಕಿರಣ್ ಅಯ್ಯಪ್ಪ, ಬಾನಂಡ ಎನ್.ಪ್ರಥ್ಯು, ಮಚ್ಚಾಮಾಡ ಅನೀಸ್ ಮಾದಪ್ಪ, ಸಣ್ಣುವಂಡ ಪ್ರಸಾದ್ ಅಚ್ಚಯ್ಯ ಮುಂತಾದವರು ಉಪಸ್ಥಿತರಿದ್ದರು.

ವೀಕ್ಷಕ ವಿವರಣೆಯನ್ನು ಅಂತರಾಷ್ಟಿçÃಯ ಹಾಕಿ ಅಂಪೈರ್ ಚೆಪುö್ಪಡೀರ ಕಾರ್ಯಪ್ಪ, ಶಾಂತೆಯAಡ ಟೀನಾ ಮಾಚಯ್ಯ ನೀಡಿದರು. ಆಪಟ್ಟೀರ ಟಾಟು ಮೊಣ್ಣಪ್ಪ, ಡಿಂಪಲ್ ನಾಚಪ್ಪ, ಪ್ರಿಯಾ ಚಂಗಪ್ಪ, ಶೃತಿ ಚಂಗಪ್ಪ, ಆರುಂಧತಿ ಮುಂತಾದವರು ಕೈಲ್ ಮುಹೂರ್ತ ಕ್ರೀಡೋತ್ಸವ ಯಶಸ್ಸಿನಲ್ಲಿ ಭಾಗಿಯಾಗಿದ್ದರು. ತೆಂಗಿನ ಕಾಯಿ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ೨೭೩, ಕೋಳಿಮೊಟ್ಟೆಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ೧೭೬ ಸ್ಪರ್ಧಿಗಳು ಭಾಗವಹಿಸಿದ್ದರು.