ಭಾಗಮಂಡಲ, ಸೆ. ೨೬: ಭಾಗಮಂಡಲದಲ್ಲಿ ಸೂರ್ಯನ ಸುತ್ತ ವೃತ್ತ ಆಕಾರ ಗೋಚರಿಸಿದೆ. ಇದು ಜನರನ್ನು ವಿಸ್ಮಿತಗೊಳಿಸಿತು. ಬೆಳಿಗ್ಗೆ ೧೦.೪೫ರ ವೇಳೆಗೆ ಕಾಣಿಸಿಕೊಂಡು ಮೊದಲು ಸೂರ್ಯನ ಹತ್ತಿರದಲ್ಲಿದ್ದ ವೃತ ಆಕಾರ ಕ್ರಮೇಣ ದೊಡ್ಡದಾಗುತ್ತಿತ್ತು. ಮಧ್ಯಾಹ್ನ ೧೨ ಗಂಟೆವರೆಗೆ ಕಾಣಿಸಿಕೊಂಡ ವೃತ್ತಾಕಾರ ಕಾಮನಬಿಲ್ಲಿನಂತೆ ಕಾಣುತ್ತಿತ್ತು. ಈ ವಿಸ್ಮಯವನ್ನು ಜನರು ತಮ್ಮ ಮೊಬೈಲ್‌ಗಳಲ್ಲಿ ಚಿತ್ರಿಸಿ ಪುಳಕಿತರಾದರು. -ಸುನಿಲ್ ಕುಯ್ಯಮುಡಿ