ಮಡಿಕೇರಿ, ಸೆ. ೨೪: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಿಂದ ಕಿರುಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಎರಡು ಸ್ಥಾನ ಪಡೆದ ಕೊಡಗು ಪ್ರೆಸ್‌ಕ್ಲಬ್ ಸದಸ್ಯರ ಕಿರುಚಿತ್ರ ಪ್ರದರ್ಶನ ತಾ. ೨೭ ರಂದು ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.
ಕೊಡಗು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಸಂಜೆ ೫.೩೦ ಗಂಟೆಗೆ ಆಯೋಜಿಸಿರುವ ಕಿರುಚಿತ್ರ ಪ್ರದರ್ಶನವನ್ನು ಪತ್ರಕರ್ತ ಟಿ.ಆರ್. ಪ್ರಭುದೇವ್ ಉದ್ಘಾಟಿಸಲಿದ್ದಾರೆಂದು ಕಾರ್ಯಕ್ರಮ ಸಂಚಾಲಕ ಕುಡಿಯರ ದಿವಾಕರ ಭೋಜಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರೆಸ್‌ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಲಾವಿದ ನೆರವಂಡ ಉಮೇಶ್ ಪಾಲ್ಗೊಳ್ಳಲಿದ್ದಾರೆ.
ಗೋಪಾಲ್ ಸೋಮಯ್ಯ ನಿರ್ಮಾಣ, ನಿರ್ದೇಶನದ ಕೊದಿ ಮೋವ, ಯುಗ ದೇವಯ್ಯ ನಿರ್ಮಾಣ, ಬೊಳ್ಳಜಿರ ಬಿ. ಅಯ್ಯಪ್ಪ ನಿರ್ದೇಶನದ ನಂಬಿಕೆ ಕಿರುಚಿತ್ರ ಕುರಿತು ಹಿರಿಯ ಪತ್ರಕರ್ತ ಎಚ್.ಟಿ. ಅನಿಲ್, ಚಿತ್ರ ಕಲಾವಿದ ಐಮಂಡ ರೂಪೇಶ್ ನಾಣಯ್ಯ ವಿಮರ್ಶೆ ಮಾಡಲಿದ್ದಾರೆ.