ಕೂಡಿಗೆ, ಸೆ. ೨೪: ಕೂಡಿಗೆ ಸರ್ಕಲ್ ಸಮೀಪದಲ್ಲಿ ಹರಿಯುತ್ತಿರುವ ಹಾರಂಗಿ ನದಿಗೆ ವಿವಾಹಿತನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.

ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಡಹಳ್ಳಿ ಗ್ರಾಮದ ಪುಟ್ಟರಾಜ ಎಂಬುವರ ಮಗ ಸುನಿಲ್ (೩೫) ಎಂಬಾತ ಹಾರಂಗಿ ನದಿಯ ದಂಡೆಯ ಬಳಿ ಹೋಗಿ ಮದ್ಯ ಸೇವನೆ ಮಾಡಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.