ಮುಳ್ಳೂರು, ಸೆ. ೨೪: ಅರೆಭಾಷೆ ಸಮೂದಾಯದ ಸಂಸ್ಕೃತಿ, ಪದ್ಧತಿ, ಆಚರಣೆಯನ್ನು ಸಮುದಾಯದ ಹಿರಿಯರು ಇಂದಿನ ಪೀಳಿಗೆಯವರಿಗೆ ಕಲಿಸಿಕೊಡುವ ಮೂಲಕ ಅರೆಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ ಅಭಿಪ್ರಾಯ ಪಟ್ಟರು.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವತಿಯಿಂದ ಸಂಗಯ್ಯನಪುರದ ಅರೆಭಾಷೆ ಗೌಡ ಸಮಾಜದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅರೆಭಾಷೆ ಸಂಸ್ಕೃತಿ ಶಿಬಿರದ ಮುಕ್ತಾಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸುವುದು ಹಾಗೂ ಭಾಷೆ, ಸಂಸ್ಕೃತಿಯನ್ನು ಪಾಲಿಸುವ ಉದ್ದೇಶದಿಂದ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಲಾಗಿದ್ದು ಈ ನಿಟ್ಟಿನಲ್ಲಿ ಅಕಾಡೆಮಿ ವತಿಯಿಂದ ನಡೆಯುವ ಸಂಸ್ಕೃತಿ ಶಿಬಿರದಲ್ಲಿ ಸಂಘಟಕರು ಸಮುದಾಯದ ಹೊಸಬರಿಗೆ ಅವಕಾಶ ನೀಡಿ ಪ್ರೋತ್ಸಾಹಿಸಬೇಕೆಂದರು.

ಭಾಷೆ, ಸಂಸ್ಕೃತಿಯನ್ನು ಬೆಳೆಸಿ ಉಳಿಸಿದರೆ ಮಾತ್ರ ಅಕಾಡೆಮಿಯ ಉದ್ದೇಶ ಈಡೇರಿದಂತಾಗುತ್ತದೆ. ಪ್ರತಿಯೊಂದು ಸಮುದಾಯಗಳ ಹಿರಿಯರು ಮತ್ತು ವಿದ್ವಾಂಸÀಕರು ಭಾಷೆ, ಸಂಸ್ಕೃತಿ ನಾಶವಾದರೆ ಸಮುದಾಯ ಮತ್ತು ಜನಾಂಗವೇ ನಾಶವಾಗುತ್ತದೆ ಎಂದು ಉಲ್ಲೇಖ ಮಾಡಿರುವ ನಿಟ್ಟಿನಲ್ಲಿ ಸಮುದಾಯದವರು ಭಾಷೆ-ಸಂಸ್ಕೃತಿಯ ಉಳಿವಿಗಾಗಿ ಪ್ರಯತ್ನಿಸಬೇಕೆಂದರು. ಸಂಗಯ್ಯನಪುರದಲ್ಲಿ ಕಳೆದ ವರ್ಷ ಅರೆಭಾಷೆ ಸಾಹಿತ್ಯ ಸಮ್ಮೇಳನ ನಿರೀಕ್ಷೆಗೆ ಮೀರಿ ಯಶಸ್ಸು ಕಂಡಿದೆ ಆಯೋಜನೆ ಮಾಡಿದ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಕಾರ್ಯ ಶ್ಲಾಘನಿಯ ಎಂದರು.

ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿ-ಅರೆಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಬೆಳೆಸಲು ಸಮುದಾಯದ ಬಾಂಧವರು ಪ್ರಯತ್ನಿಸಬೇಕು, ಅರೆಭಾಷೆ ಸಂಸ್ಕೃತಿಯನ್ನು ಬೆಳೆಸುವ ಹಿನ್ನೆಲೆಯಲ್ಲಿ ಅಕಾಡೆಮಿ ವತಿಯಿಂದ ಭಾಷೆ, ಸಾಹಿತ್ಯ, ಸಂಸ್ಕೃತಿಗೆ ಸಂಬAಧಪಟ್ಟ ಶಿಬಿರದಂತಹ ಯೋಜನೆಗಳನ್ನು ಹಮ್ಮಿಕೊಂಡು ಸಮುದಾಯವನ್ನು ಪ್ರೋತ್ಸಾಹಿಸುತ್ತಿರುವುದರಿಂದ ಸಂಘಟನೆಗೆ ಮತ್ತಷ್ಟು ಪ್ರೇರಣೆಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಅರಕಲಗೂಡು ಸ,ಪ.ಪೂ.ಕಾಲೇಜು ಪ್ರಾಂಶುಪಾಲ ಹುಲಿಮನೆ ಮಾದಪ್ಪ, ಪ್ರಮುಖರಾದ ದಂಡಿನ ಉತ್ತಯ್ಯ, ಎಡಿಕೇರಿ ಪುಷ್ಪವೇಣಿ, ಗ್ರಾ.ಪಂ.ಸದಸ್ಯ ಪರ್ಲಕೋಟಿ ಸತೀಶ್‌ಕುಮಾರ್, ಅರೆಭಾಷೆ ಗೌಡ ಸಮಾಜದ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್ ಮುಂತಾದವರು ಹಾಜರಿದ್ದರು. -ಭಾಸ್ಕರ್ ಮುಳ್ಳೂರು