ಸೋಮವಾರಪೇಟೆ, ಸೆ. ೨೪: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಕ್ಕೆಹೊಳೆ ಜಂಕ್ಷನ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಬಸ್ ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಪ.ಪಂ. ಸದಸ್ಯರ ನಡುವೆ ಜಟಾಪಟಿ ನಡೆದು, ಸಭೆಯ ಒಂದೂವರೆ ಗಂಟೆ ವ್ಯರ್ಥವಾಯಿತು.

ಈ ನಡುವೆ ಸದಸ್ಯರೋರ್ವರು ಪತ್ರಿಕಾ ವರದಿಯ ಬಗ್ಗೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದರಿಂದ ಸಭೆಯಲ್ಲಿ ಗದ್ದಲ ತಾರಕಕ್ಕೇರಿ, ಏಕವಚನ ಪದ ಪ್ರಯೋಗದೊಂದಿಗೆ ಸಭೆಯ ಘನತೆಯನ್ನು ಬೀದಿಗೆ ತರುವಂತೆ ಮಾಡಿತು.

ಕಕ್ಕೆಹೊಳೆ ಜಂಕ್ಷನ್‌ನಲ್ಲಿ ಶಿಥಿಲಾವಸ್ಥೆಗೆ ತಲುಪಿ, ಮದ್ಯಪಾನಿಗಳು, ಧೂಮಪಾನಿಗಳ ಅಡ್ಡೆಯಂತಾಗಿದ್ದ ಬಸ್ ನಿಲ್ದಾಣವನ್ನು ಕೆಡವಿ, ಗುತ್ತಿಗೆದಾರರಾದ ಜಗನ್ನಾಥ್ ಮತ್ತು ಪೃಥ್ವಿ ಅವರುಗಳು ತಮ್ಮ ಸ್ವಂತ ಹಣದಿಂದ ನೂತನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಹೆಸರಿಡುವ ವಿಚಾರದಲ್ಲಿ ಅಧ್ಯಕ್ಷರಾದಿಯಾಗಿ ಸದಸ್ಯರುಗಳ ನಡುವೆ ವಾಕ್ಸಮರ ನಡೆಯಿತು.

ಪಟ್ಟಣದ ಇಂದಿರಾಗಾAಧಿ ಅಭಿಮಾನಿಗಳ ಸಂಘದವರು ಮೂರು ದಶಕದ ಹಿಂದೆ ಈ ನಿಲ್ದಾಣವನ್ನು ನಿರ್ಮಿಸಿದ್ದು, ನೂತನ ನಿಲ್ದಾಣ ನಿರ್ಮಾಣವಾದ ನಂತರ ‘ಮೂಲ ನಿರ್ಮಾಣ-ಇಂದಿರಾಗಾAಧಿ ಅಭಿಮಾನಿಗಳ ಸಂಘ’ ಎಂದು ಬರೆಯುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಅನುಮತಿ ನೀಡುವಂತೆ ಅಧ್ಯಕ್ಷ ಸಂಜೀವ ಹೇಳಿದರು.

ಬಸ್ ನಿಲ್ದಾಣಕ್ಕೆ ಯಾರ ಹೆಸರು ಬೇಕಾದರೂ ಇಡಿ, ಆದರೆ ಮೂಲ ನಿರ್ಮಾಣದ ಹೆಸರು ಹಾಕಲೇಬೇಕೆಂದು ಸಂಜೀವ, ಸದಸ್ಯರಾದ ಶೀಲಾ ಡಿಸೋಜ, ವೆಂಕಟೇಶ್ ಅವರುಗಳು ದನಿ ಎತ್ತಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಅನೇಕ ದಶಕಗಳಿಂದ ಪಾಳು ಬಿದ್ದಿದ್ದ ನಿಲ್ದಾಣವನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಸಂಪೂರ್ಣ ಕೆಡವಿ, ಮರು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಬೇರೆಯವರ ಹೆಸರಿಡಲು ಆಗುವುದಿಲ್ಲ ಎಂದರು.

ಒAದು ವೇಳೆ ಇಂದಿರಾಗಾAಧಿ ಅಭಿಮಾನಿಗಳ ಸಂಘದವರೇ ಇದನ್ನು ನಿರ್ಮಿಸಿದ್ದಾರೆ ಎಂದಾದರೆ ಸೂಕ್ತ ದಾಖಲೆಗಳನ್ನು ನೀಡಿ. ನಿಲ್ದಾಣವನ್ನು ಕೆಡವಿದ ಸಂದರ್ಭ ಕಟ್ಟಡದ ಪರಿಕರವನ್ನು ಸಂಘದ ಅಧ್ಯಕ್ಷರೇ ಕೊಂಡೊಯ್ದಿದ್ದಾರೆ. ಇನ್ನು ಹೆಸರಿಡುವ ಅಗತ್ಯತೆ ಇಲ್ಲ ಎಂದರು.

ಈ ಸಂದರ್ಭ ಇಂದಿರಾಗಾAಧಿ ಅಭಿಮಾನಿಗಳ ಸಂಘದವರು ಪಂಚಾಯಿತಿಗೆ ನೀಡಿದ ಮನವಿ ಪತ್ರಗಳ ಜೆರಾಕ್ಸ್ ಪ್ರತಿ, ಸಂಘದ ಬಗ್ಗೆ ಎರಡು ದಶಕದ ಹಿಂದೆ ಪ್ರಕಟವಾಗಿದ್ದ ಪತ್ರಿಕಾ ವರದಿಗಳು, ಸಂಘದಿAದ ಪಂಚಾಯಿತಿಗೆ ನೀಡಿರುವ ಮನವಿ ಪತ್ರಗಳ ಪ್ರತಿಗಳನ್ನು ಅಧ್ಯಕ್ಷ ಸಂಜೀವ ಅವರು ಸಭೆಯ ಮುಂದಿಟ್ಟರು.

ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ದಾಖಲೆ ಎಂದು ಪರಿಗಣಿಸಲು ಆಗುವುದಿಲ್ಲ. ಪಂಚಾಯಿತಿಯಿAದ ನೀಡಿರುವ ಆದೇಶ ಪ್ರತಿಗಳನ್ನು ತೋರಿಸಿ ಎಂದು ಸದಸ್ಯರಾದ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಎಸ್.ಆರ್. ಸೋಮೇಶ್ ಅವರುಗಳು ಹೇಳಿದರು.

ಈ ಬಗ್ಗೆ ಒಂದೂವರೆ ಗಂಟೆಗಳ ಕಾಲ ಚರ್ಚೆ, ವಾಕ್ಸಮರ, ಏಕವಚನ ಪದಪ್ರಯೋಗಗಳು ನಡೆದು, ಅಂತಿಮವಾಗಿ ಉಭಯ ಕಡೆಯವರ ಅಭಿಪ್ರಾಯಗಳನ್ನು ದಾಖಲಿಸಲಾಯಿತು. ಇಂದಿರಾಗಾAಧಿ ಅಭಿಮಾನಿಗಳ ಸಂಘದ ಹೆಸರಿಡಬೇಕೆಂದು ಸಂಜೀವ, ಶೀಲಾ ಡಿಸೋಜ, ಜೀವನ್, ಜಯಂತಿ ಶಿವಕುಮಾರ್, ವೆಂಕಟೇಶ್, ನಾಗರತ್ನ ಅವರುಗಳು ಹೇಳಿದರೆ, ಇದಕ್ಕೆ ಪಿ.ಕೆ. ಚಂದ್ರು, ಬಿ.ಆರ್. ಮಹೇಶ್, ಮೃತ್ಯುಂಜಯ, ಮೋಹಿನಿ, ಶುಭಕರ್ ಅವರುಗಳು ಆಕ್ಷೇಪ ವ್ಯಕ್ತಪಡಿಸಿ, ಸೂಕ್ತ ದಾಖಲೆಗಳನ್ನು ನೀಡಿದ ನಂತರ ತೀರ್ಮಾನಿಸಲಿ ಎಂದರು.

ಪಟ್ಟಣದಲ್ಲಿ ಜಾನುವಾರು ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಸದಸ್ಯರುಗಳು ಇಲಾಖಾಧಿಕಾರಿಯನ್ನು ಒತ್ತಾಯಿಸಿದರು. ಪಟ್ಟಣ ವ್ಯಾಪ್ತಿಯಲ್ಲಿ ಜಾನುವಾರುಗಳ ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸದಸ್ಯರು ದೂರಿದರು.

ಪಟ್ಟಣದ ವಲ್ಲಭಬಾಯಿ ಬಡಾವಣೆಯ ರಸ್ತೆ, ಮೋರಿ, ಸರ್ಕಾರಿ ಪ್ರಾಥಮಿಕ ಶಾಲಾ ಆವರಣ, ಬಾಲಕಿಯರ ವಸತಿ ನಿಲಯ ಪ್ರದೇಶದಲ್ಲಿ ಸಂಜೆಯಾಗುತ್ತಲೇ ಮದ್ಯಪಾನಿಗಳು ಮದ್ಯ ಸೇವಿಸುತ್ತಿದ್ದು, ಬಾಟಲ್‌ಗಳನ್ನು ಅಲ್ಲಲ್ಲಿ ಎಸೆಯುತ್ತಿದ್ದಾರೆ ಎಂದು ಸದಸ್ಯರುಗಳು ಆರೋಪಿಸಿದರು.

ಸಂಜೆ ೭ ಗಂಟೆಯ ನಂತರ ಬೈಕ್, ಕಾರ್‌ಗಳಲ್ಲಿ ಆಗಮಿಸಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಇದರೊಂದಿಗೆ ಆನೆಕೆರೆಯ ಪಾರ್ಕ್ ಬಳಿಯೂ ಮದ್ಯ ಸೇವಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದರು.

ಪಟ್ಟಣದ ಕಟ್ಟೆಬಸವೇಶ್ವರ ದೇವಾಲಯ ಎದುರಿನ ಕೆರೆ ಹಾಗೂ ಆನೆಕೆರೆಯ ಆವರಣವನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳುವಂತೆ ಸದಸ್ಯ ಎಸ್. ಮಹೇಶ್ ಮನವಿ ಮಾಡಿದರು. ಪಂಚಾಯಿತಿಯ ಅಂಗಡಿ ಮಳಿಗೆಯ ಮುಂಗಡ ಹಣವನ್ನು ರಾಷ್ಟಿçÃಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡುವಂತೆ ತೀರ್ಮಾನಿಸಲಾಯಿತು. ಸಭೆಯಲ್ಲಿ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ಸೇರಿದಂತೆ ಸಿಬ್ಬಂದಿಗಳು, ಅಧಿಕಾರಿ ವರ್ಗ ಉಪಸ್ಥಿತರಿದ್ದರು.