ಮಡಿಕೇರಿ, ಸೆ. ೨೫: ಜಿಲ್ಲಾ ಕೇಂದ್ರ ಮಂಜಿನ ನಗರಿಯ ಆಕರ್ಷಣೀಯ ಕೇಂದ್ರವೆAದರೆ ಅದು ರಾಜರ ಉದ್ಯಾನ - ರಾಜಾಸೀಟ್.
ಮಹಾತ್ಮಗಾಂಧಿ ರಸ್ತೆಯಲ್ಲಿ ಸಾಗುವಾಗ ಅಚಾನಕ್ಕಾಗಿ ಎಲ್ಲರ ಚಿತ್ತ ಒಮ್ಮೆ ಈ ಉದ್ಯಾನದತ್ತ ಹರಿಯದೇ ಇರದು; ಪ್ರವಾಸಿಗರಿಗೂ ಅಚ್ಚುಮೆಚ್ಚಿನ ತಾಣವಿದು. ಆದರೀಗ ಈ ಉದ್ಯಾನ ಸೊಬಗನ್ನು ಮರೆ ಮಾಚುವಂತೆ ಇಲ್ಲಿ ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿವೆ. ಪ್ರವೇಶ ಮಾರ್ಗದಲ್ಲಿಯೇ ಉದ್ಯಾನದ ಬೇಲಿಗೆ ಟಾರ್ಪಲ್ ಹೊದಿಸಿ ಅಂಗಡಿಗಳನ್ನು ಕಟ್ಟಿಕೊಂಡಿದ್ದು, ಉದ್ಯಾನವ ಅಂದ ಕೆಡಿಸಿದೆ., ಉದ್ಯಾನದ ನಾಮಫಲಕವೇ ಕಾಣದಂತಾಗಿದೆ. ಅಂಗಡಿಗೆ ಬರುವವರು ತಿಂದು ಎಸೆಯುವ ಕಸದ ರಾಶಿ ಪ್ರತಿನಿತ್ಯ ಮುಂಜಾವಿಗೆ ಉದ್ಯಾನಕ್ಕೆ ಬರುವವರನ್ನು ಸ್ವಾಗತಿಸುವಂತಾಗಿದೆ..!
ಹಿAದೆ ಸ್ಮಶಾನವಾಗಿದ್ದ ಪ್ರದೇಶದಲ್ಲಿನ ಸೌಂದರ್ಯವನ್ನು ಕಂಡ ರಾಜ ಅಲ್ಲಿದ್ದ ಕಲ್ಲುಗಳನ್ನು (ಗೋರಿ) ತೆರವುಗೊಳಿಸಿ, ಉದ್ಯಾನ ನಿರ್ಮಿಸಿ, ಅಲ್ಲೊಂದು ಗೋಪುರವನ್ನು ಕಟ್ಟಿ ಪ್ರತಿನಿತ್ಯ ಬೆಳಗ್ಗಿನ ಸೂರ್ಯೋದಯ ಹಾಗೂ ಸೂರ್ಯಾಸ್ತಮದ ಸೊಬಗನ್ನು ಆಸ್ವಾದಿಸುತ್ತಿದ್ದ. ಹಾಗಾಗಿ ಅದು ರಾಜರ ಉದ್ಯಾನ - ರಾಜಾಸೀಟ್ ಎಂದು ಖ್ಯಾತಿಗಳಿಸಿತು. ಮಂಜಿನ ನಗರಿಯ ಜನ ಪ್ರತಿನಿತ್ಯ ಈ ಉದ್ಯಾನದಲ್ಲಿ ವಾಯು ವಿಹಾರ ಮಾಡುತ್ತಾರೆ. ಉದ್ಯಾನದ ಖ್ಯಾತಿ ಹರಡುತ್ತಿದ್ದಂತೆ ಪ್ರವಾಸಿಗರೂ ಆಕರ್ಷಿತರಾಗಿ ಕೊಡಗು ಜಿಲ್ಲೆಗೆ ಭೇಟಿ ನೀಡುವವರು ಒಮ್ಮೆ ಇಲ್ಲಿಗೆ ಬಂದು ಹೋದವರು ಮತ್ತೆ - ಮತ್ತೆ ಬರುತ್ತಾರೆ. ಸೌಂದರ್ಯದ ಖನಿಯ ರಸಾನುಭವವನ್ನು ಸವಿಯುತ್ತಾರೆ.
ಅಡ್ಡಲಾಗಿ ಅಂಗಡಿಗಳು
ಈ ಉದ್ಯಾನಕ್ಕೆ ಬರುವವರಿಗೆ ಏನಾದರೂ ಮೆಲ್ಲಲು ಇಲ್ಲಿ ಪೆಟ್ಟಿಗೆ ಅಂಗಡಿಗಳಿವೆ. ಒಂದೆರಡು ಅಂಗಡಿಗಳಿದ್ದುದು ಇದೀಗ ಹತ್ತಾರು ಆಗಿವೆ. ಈ ಅಂಗಡಿಗಳಿAದ ಉದ್ಯಾನದ ಅಂದಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಅಂಗಡಿಗಳನ್ನು ಉದ್ಯಾನದ ಪಕ್ಕದ ಪುಟಾಣಿ ರೈಲು ಇದ್ದ ಪ್ರದೇಶಕ್ಕೆ ಸ್ಥಳಾಂತರಿಸುವAತೆ ನಗರ ಸಭೆಗೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಒಳಗಡೆ ಕಾರ್ಯನಿರ್ವಸುತ್ತಿದ್ದವು. ಕೋವಿಡ್ ಬಂದ ಬಳಿಕ ಎಲ್ಲವೂ ಸ್ಥಗಿತ ಗೊಂಡಿದ್ದವು. ಇದೀಗ ಅಂಗಡಿಗಳಿಗೆ ಅನುಮತಿ ದೊರೆತಿರುವುದರಿಂದ ಮತ್ತೆ ತೆರೆದುಕೊಂಡಿವೆ. ಆದರೆ ಈಗ ಅಂಗಡಿಗಳು ಉದ್ಯಾನದ ಪ್ರವೇಶ ದ್ವಾರದಲ್ಲೇ ತಲೆಯೆತ್ತಿವೆ. ಉದ್ಯಾನಕ್ಕೆ ಅಡ್ಡಗೋಡೆಯಂತಾಗಿವೆ.
ಕಸದ ಸ್ವಾಗತ...!
ಈ ಉದ್ಯಾನಕ್ಕೆ ಪ್ರತಿನಿತ್ಯ ನಗರದ ಹಿರಿಯರು, ಅಧಿಕಾರಿಗಳು, ಮಕ್ಕಳು ಸೇರಿದಂತೆ ಬಹುತೇಕ ಮಂದಿ ವಾಯು ವಿಹಾರಕ್ಕೆಂದು ಬರುತ್ತಾರೆ. ಇಲ್ಲಿ ಸಿಗುವ ಸ್ವಚ್ಛಂದ ಗಾಳಿಯನ್ನು ಸೇವಿಸುತ್ತಾರೆ. ಆದರೆ, ಇದೀಗ ಇಲ್ಲಿಗೆ ಬೆಳಿಗ್ಗೆ ಆಗಮಿಸುವವರನ್ನು ಈ ಅಂಗಡಿಗಳ ಬಳಿಯ ಕಸದ ರಾಶಿ ಸ್ವಾಗಿಸುವಂತಾಗಿದೆ. ಪಕ್ಕದಲ್ಲೇ ನಗರಸಭೆಯಿಂದ ‘ಹಸಿ ಕಸ, ಒಣ ಕಸ’ ಎಂಬ ಎರಡು ತೊಟ್ಟಿಗಳನ್ನು ಇರಿಸಿದ್ದರೂ ಯಾರೂ ಅದರೊಳಗಡೆ ಕಸ ಹಾಕುತ್ತಿಲ್ಲ. ಅಂಗಡಿಯವರು ಕೂಡ ರಾತ್ರಿ ಅಂಗಡಿ ಮುಚ್ಚಿ
(ಮೊದಲ ಪುಟದಿಂದ) ಮರಳುವಾಗ ಕನಿಷ್ಟ ಕಸಗಳನ್ನು ಗುಡಿಸಿ ತೊಟ್ಟಿಗೆ ಹಾಕುವ ಕಾರ್ಯ ಮಾಡುತ್ತಿಲ್ಲ.
ರೈಲು ನಿಲ್ದಾಣದಲ್ಲಿ ವಾಹನ..!
ಈ ಹಿಂದೆ ಅಂಗಡಿಗಳಿದ್ದ ಪುಟಾಣಿ ರೈಲು ನಿಲ್ದಾಣದಲ್ಲೀಗ ವಾಹನಗಳು ನಿಲುಗಡೆಗೊಳ್ಳುತ್ತಿವೆ. ಈ ಹಿಂದೆ ಗೇಟ್ ಅಳವಡಿಸಿ ಭದ್ರತೆ ಯಿಂದಿದ್ದ ಈ ಪ್ರದೇಶ ದೊಳಗಡೆ ವಾಹನಗಳಿಗೆ ಪ್ರವೇಶವಿರಲಿಲ್ಲ. ಆದರೆ ಇದೀಗ ಗೇಟು ಕಾಣಿಸುತ್ತಿಲ್ಲ. ಬದಲಿಗೆ ಆ ಪ್ರದೇಶ ಸಾರ್ವಜನಿಕ ವಾಹನ ನಿಲುಗಡೆ ಸ್ಥಳವಾಗಿ ಮಾರ್ಪಾ ಡಾಗಿದೆ.
ಸಂಬAಧಿಸಿದವರು ಗಮನ ಹರಿಸಲಿ
ತೋಟಗಾರಿಕಾ ಇಲಾಖಾ ಸುಪರ್ದಿಯಲ್ಲಿರುವ ಈ ಉದ್ಯಾನದ ಬಳಿಯ ಅಂಗಡಿಗಳು ಹಾಗೂ ಪುಟಾಣಿ ರೈಲು ಇದ್ದ ಉದ್ಯಾನವನದ ನಿರ್ವಹಣೆಯ ಜವಾಬ್ದಾರಿ ನಗರಸಭೆಯದ್ದಾಗಿದೆ. ಪ್ರಮುಖ ಉದ್ಯಾನದ ಈ ದುಸ್ಥಿತಿಯನ್ನು ಕಣ್ಣಾರೆ ಕಂಡರೂ ಏನೂ ಕ್ರಮ ಕೈಗೊಳ್ಳದಿರುವ ನಗರಸಭೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬದು ನಾಗರಿಕ ಪ್ರಶ್ನೆಯಾಗಿದೆ..?
- ಟಿ.ಜಿ. ಸತೀಶ್